ವಿರಾಟ್…! ರಾಹುಲ್ ಬ್ಯಾಟಿಂಗ್ ನೋಡಿ ಕಲಿತುಕೋ virat-kohli k l rahul saaksha tv
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ.
71ನೇ ಶತಕದ ನಿರೀಕ್ಷೆ ಮತ್ತೆ ಮುಂದುವರಿದಿದೆ. ಭಾರತ ಸತತ ಎರಡು ವಿಕೆಟ್ ಕಳೆದುಕೊಂಡ ಬಳಿಕ ಕ್ರೀಸ್ ಗೆ ಬಂದ ಕೊಹ್ಲಿ, ಕೆಎಲ್ ರಾಹುಲ್ ಜೊತೆ ನಾಲ್ಕನೇ ವಿಕೆಟ್ ಗೆ 82 ರನ್ ಸೇರಿಸಿದರು.
ಆದರೆ, ಭಾರತ ಇನ್ನಿಂಗ್ಸ್ ನ 69ನೇ ಓವರ್ನಲ್ಲಿ ಲುಂಗಿ ಎಂಗಿಡಿ ಬೌಲಿಂಗ್ನಲ್ಲಿ ಎರಡನೇ ಎಸೆತವನ್ನು ಆಫ್ಸೈಡ್ ಹೊಡೆಯಲು ಕೊಹ್ಲಿ ಪ್ರಯತ್ನಿಸಿದರು.
ಈ ವೇಳೆ ಬಾಲ್ ಬ್ಯಾಟ್ ನ ಎಡ್ಜ್ ಗೆ ಟಚ್ ಆಗಿ ಸ್ಲಿಪ್ ಗೆ ಹೋಯ್ತು. ಈ ಅವಕಾಶವನ್ನ ಬಳಿಸಿಕೊಂಡ ವಿಯಾನ್ ಮುಲ್ಡರ್ ಸುಲಭ ಕ್ಯಾಚ್ ಹಿಡಿದರು.
ಹೀಗಾಗಿ 94 ಎಸೆತಗಳನ್ನು ಎದುರಿಸಿ 35 ರನ್ ಗಳೊಂದಿಗೆ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ವಿರಾಟ್, ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು.
ಇತ್ತ ಒಳ್ಳೆಯ ಟಚ್ ನಲ್ಲಿ ಕಾಣಿಸುತ್ತಿದ್ದ ವಿರಾಟ್ ಔಟ್ ಆಗುತ್ತಿದ್ದಂತೆ ಅವರ ಅಭಿಮಾನಿಗಳು ನಿರಾಸೆಗೊಂಡರು.
ಈ ಮಧ್ಯೆ ವಿರಾಟ್ ಔಟ್ ಆದ ಬಗ್ಗೆ ಭಾತರದ ಮಾಜಿ ವೇಗಿ ಆಶಿಶ್ ನೆಹ್ರಾ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.
“ಹಲವು ಜನರು ಕೊಹ್ಲಿ ಆಟವನ್ನು ನೋಡಲು ಬಯಸುತ್ತಾರೆ, ಆದರೆ ಪ್ರಸ್ತುತ ಕೊಹ್ಲಿ ಇದೀಗ ಅವರ ಪ್ರದರ್ಶನದ ಬಗ್ಗೆ ಅತೃಪ್ತರಾಗಿದ್ದಾರೆ.
ಆದ್ರೂ ಕೊಹ್ಲಿ ದಾಖಲೆಗಳನ್ನು ನೋಡಿದ್ರೆ, ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ವಿರಾಟ್ ಅದ್ಭುತವಾಗಿ ಮಿಂಚಿದ್ದಾರೆ.
ಅದೇ ರೀತಿ 2018ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಸೆಂಚೂರಿ ಬಾರಿಸಿದ್ದರು. ವಿರಾಟ್ ಸೆಂಚೂರಿ, ಡಬಲ್ ಸೆಂಚೂರಿ ಬಾರಿಸಬೇಕು ಎಂಬ ಹಸಿವಿನಲ್ಲಿದ್ದಾರೆ.
ಇನ್ನು ವಿರಾಟ್ ಔಟ್ ಆದ ರೀತಿ ನನಗೆ ಸಂತೃಪ್ತಿ ತಂದೊಡ್ಡಿದೆ. ಆಫ್ರಿಕಾ ಬೌಲರ್ ಗಳು ವಿರಾಟ್ ಅವರನ್ನು ಟಾರ್ಗೆಟ್ ಮಾಡಿ ಆಫ್ ಸ್ಟಂಪ್ ಸೈಡ್ ಬಾಲ್ ಹಾಕುತ್ತಿದ್ದಾರೆ.
ಹೀಗಾಗಿ ಕೆ.ಎಲ್ ರಾಹುಲ್ ಆಡುವ ರೀತಿಯಲ್ಲೇ ವಿರಾಟ್ ಬ್ಯಾಟ್ ಬೀಸಬೇಕು. ಅಂತಹ ಎಸೆತಗಳನ್ನು ವಿರಾಟ್ ಬಿಟ್ಟುಬಿಡಬೇಕು ಎಂದು ನೆಹ್ರಾ ಅಭಿಪ್ರಾಯಪಟ್ಟಿದ್ದಾರೆ.