ಕನ್ನಡಿಗನ ಕೈ ಬಿಟ್ಟು ಕೈ ಸುಟ್ಟುಕೊಂಡ ಕೊಹ್ಲಿ..!
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಟೀಂ ಇಂಡಿಯಾ ಯಾರೂ ಊಹಿಸದ ರೀತಿಯಲ್ಲಿ ಅತ್ಯಂತ ಹೀನಾಯವಾಗಿ ಸೋಲುಂಡಿದೆ. ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಸ್ ಆಗೇ ಆಗುತ್ತಾರೆ ಅಂದುಕೊಂಡಿದ್ದ ಅದೆಷ್ಟೋ ಕ್ರಿಕೆಟ್ ಅಭಿಮಾನಿಗಳ ಆಸೆ ಮಣ್ಣುಪಾಲಾಗಿದೆ. ಬಲಿಷ್ಠ ಭಾರತದ ವಿರುದ್ಧ ನ್ಯೂಜಿಲೆಂಡ್ ತಂಡ ಅತ್ಯಂತ ಸುಲಭವಾಗಿ ಗೆಲುವು ಸಾಧಿಸುವುದರ ಮೂಲಕ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನ ತನ್ನ ಮುಡಿಗೇರಿಸಿಕೊಂಡಿದೆ. ಹಾಗಾದ್ರೆ ಟೀಂ ಇಂಡಿಯಾ ಸೋಲಿಗೆ ಕಾರಣವೇನು..?
ಕೆ.ಎಲ್ ರಾಹುಲ್ ಚಾನ್ಸ್ ನೀಡದೇ ಪ್ರಶಸ್ತಿ ಗೆಲ್ಲೋ ಚಾನ್ಸ್ ಮಿಸ್ ಮಾಡಿಕೊಂಡ ಟೀಂ ಇಂಡಿಯಾ..?
ಪ್ರಶಸ್ತಿ ಪಂದ್ಯದಲ್ಲಿ ಟೀಂ ಇಂಡಿಯಾ ಸೋತು ಸುಣ್ಣವಾಗದೆ. ಇದಕ್ಕೆ ಪ್ರಮುಖ ಕಾರಣ ಭಾರತದ ಬ್ಯಾಟಿಂಗ್ ವೈಫಲ್ಯ..! ಹೌದು ವಿಶ್ವ ಕ್ರಿಕೆಟ್ ನಲ್ಲಿ ಬಲಿಷ್ಠ ತಂಡವಾಗಿರುವ ಭಾರತದ ಬ್ಯಾಟಿಂಗ್ ವಿಭಾಗ ಸಾಲಿಡ್ ಆಗಿದೆ ಅನ್ನೋದ್ರಲ್ಲಿ ಡೌಟ್ ಇಲ್ಲ. ಎಂತಹದ್ದೇ ಪಿಚ್ ಇರಲಿ ತಂಡ ಯಾವುದೇ ಇರಲಿ ಎದುರಾಲಿಗಳಿಗೆ ನೀರು ಕುಡಿಸುವ ಸಾಮಥ್ರ್ಯ ನಮ್ಮ ಬ್ಯಾಟ್ಸ್ ಮೆನ್ ಗಳಿದೆ. ಆದ್ರೆ ಫೈನಲ್ ಪಂದ್ಯದಲ್ಲಿ ಆಗಿದ್ದೇ ಬೇರೆ. ಭಾರತದ ಯಾವೊಬ್ಬ ಬ್ಯಾಟ್ಸ್ ಅರ್ಧಶತಕ ಸಿಡಿಸಲಿಲ್ಲ. ಇದು ಭಾರತ ತಂಡದ ಬ್ಯಾಟಿಂಗ್ ವಿಭಾಗ ಘನಘೋರ ವೈಫಲ್ಯ..!
ಇಲ್ಲಿ ಮುಖ್ಯವಾಗಿ ಕೊರತೆ ಎದುರಾಗಿದ್ದು, ಒಬ್ಬ ಸಾಲಿಡ್ ಬ್ಯಾಟ್ಸ್ ಮೆನ್ ನ ಕೊರತೆ. ಟೆಕ್ನಿಕಲಿ, ಮೆಂಟಲಿ ಸ್ಟ್ರಾಂಗ್ ಇರುವ ಬ್ಯಾಟ್ಸ್ ಮೆನ್ ನ ಅನುಪಸ್ಥಿತಿ. ಭಾರತದ ಬ್ಯಾಟಿಂಗ್ ವಿಭಾಗ ಮೇಲ್ನೋಟಕ್ಕೆ ಸ್ಟ್ರಾಂಗ್ ಆಗಿ ಕಂಡರೂ ಛೇ ಏನೋ ಕೊರತೆ ಇದೆ ಅಲ್ವಾ ಅನಿಸುತ್ತಿತ್ತು. ಆ ಕೊರತೆಯೇ ರಾಕಿಂಗ್ ಕೆ.ಎಲ್.ರಾಹುಲ್..!
ಈಗಿನ ಕ್ರಿಕೆಟರ್ಸ್ ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಬಳಿಕ ಒಬ್ಬ ಟಾಪ್ ಕ್ಲಾಸ್ ಕ್ರಿಕೆಟರ್ ಅಂದ್ರೆ ಅದು ಕೆ.ಎಲ್.ರಾಹುಲ್, ಇದ್ರಲ್ಲಿ ಯಾವುದೇ ಅನುಮಾನ ಪಡುವ ಅವಶ್ಯಕತೆಯೇ ಇಲ್ಲ. ಯಾಕೆಂದ್ರೆ ರಾಹುಲ್ ಪಕ್ಕಾ ಕ್ಲಾಸ್ ಪ್ಲೇಯರ್. ಆಟಗಾರ ಬಾರಿಸುವ ಶಾಟ್ ಗಳಿಂದ ಒಬ್ಬ ಸಾಮಾನ್ಯ ಪ್ಲೇಯರ್ ಗೆ ಒಬ್ಬ ಕ್ಲಾಸ್ ಪ್ಲೇಯರ್ ಗೆ ಇರುವ ವ್ಯತ್ಯಾಸ ಗೊತ್ತಾಗುತ್ತೆ. ಗ್ಯಾಪ್ ಹುಡುಕುವುದು, ಟೈಮಿಂಗ್, ಬ್ಯಾಟಿಂಗ್ ಟೆಕ್ನಿಕ್, ರೇಂಜಿಂಗ್ ಶಾಟ್ಸ್ ಸೇರಿದಂತೆ ಕ್ರಿಕೆಟ್ ಬುಕ್ ನ ಎಲ್ಲ ಶಾಟ್ ಗಳನ್ನ ರಾಹುಲ್ ಕರಗತ ಮಾಡಿಕೊಂಡಿದ್ದಾರೆ. ಮುಖ್ಯವಾಗಿ ಭಾರತೀಯ ಕ್ರಿಕೆಟ್ ನಲ್ಲಿ ಕೆಲವರೇ ಸ್ವೀಪ್ ಶಾಟ್ ಗಳನ್ನ ಆಡುತ್ತಾರೆ. ಅದರಲ್ಲಿ ರಾಹುಲ್ ಕೂಡ ಒಬ್ಬರು..! ರಾಹುಲ್ ಸ್ವೀಪ್ ಜೊತೆಗೆ ರಿವರ್ಸ್ ಸ್ವೀಪ್ ಮಾಡುವುದು ವಿಶೇಷದ ಸಂಗತಿ. ಕೇವಲ ಕ್ಲಾಸ್ ಶಾಟ್ ಗಳಲ್ಲದೇ ಬಿಗ್ ಸಿಕ್ಸರ್ ಗಳನ್ನ ಹೊಡೆಯೋದ್ರಲ್ಲಿ ರಾಹುಲ್ ಪಂಟರ್. ಒಂದೇ ಮಾತಿನಲ್ಲಿ ಹೇಳೋದಾದ್ರೆ ರಾಹುಲ್ ಬ್ಯಾಟಿಂಗ್ ನಲ್ಲಿ ವಿರಾಟ್ ಕೊಹ್ಲಿಯ ಕ್ಲಾಸ್, ರೋಹಿತ್ ರ ಮಾಸ್ ಎರಡೂ ಒಳಗೊಂಡಿರುತ್ತೆ. ಯಾವುದೇ ರೀತಿಯಿಂದ ನಾವು ಯೋಚನೆ ಮಾಡಿದ್ರೂ ಕೆ.ಎಲ್. ರಾಹುಲ್, ವಿರಾಟ್, ರೋಹಿತ್ ರ ಉತ್ತರಾಧಿಕಾರಿ ಅನ್ನೋದ್ರಲ್ಲಿ ಡೌಟೇ ಇಲ್ಲ.
ಆದ್ರೆ ಇಂತಹ ಪ್ರತಿಭಾವಂತ ಆಟಗಾರನನ್ನ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕೆ ಪರಿಗಣಿಸಲೇ ಇಲ್ಲ. ಇವರ ಬದಲಿಗೆ ಅನಾನುಭವಿ ಶುಭ್ ಮನ್ ಗಿಲ್ ಗೆ ಅವಕಾಶ ನೀಡಲಾಗಿತ್ತು. ಇದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ ಅನ್ನೋದು ಹಲವರ ಅಭಿಪ್ರಾಯ.