ಆ ವಿಚಾರದಲ್ಲಿ “ವಿರಾಟ್ ಕೊಹ್ಲಿ- ಕೆ.ಎಲ್ ರಾಹುಲ್ ಒಂದೇ”
ಟೀಂ ಇಂಡಿಯಾ ಸ್ಟಾರ್ ಬ್ಯಾಟ್ಸ್ ಮನ್, ಪಂಜಾಬ್ ಕಿಂಗ್ಸ್ ತಂಡದ ಮಾಜಿ ನಾಯಕ ಕೆ.ಎಲ್ ರಾಹುಲ್ ಗೆ ಜಾಕ್ ಪಾಟ್ ಹೊಡೆದಿದೆ.
ಐಪಿಎಲ್ನಲ್ಲಿ ಹೊಸ ತಂಡವಾದ ಲಕ್ನೋ ಫ್ರಾಂಚೈಸಿ ನಾಯಕತ್ವದ ಜೊತೆಗೆ ಭಾರಿ ಸಂಭಾವನೆಯನ್ನು ರಾಹುಲ್ ಪಡೆದಿದ್ದಾರೆ.
ಆ ಮೂಲಕ ಐಪಿಎಲ್ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಆಟಗಾರ ಎಂಬ ವಿರಾಟ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ್ದಾರೆ.
2018ರ ಐಪಿಎಲ್ ಹರಾಜಿಗೂ ಮುನ್ನ ಬೆಂಗಳೂರು ತಂಡ ಕೊಹ್ಲಿಗೆ 17 ಕೋಟಿ ರೂ.ಗಳ ಆಫರ್ ನೀಡಿತ್ತು.
ಈಗ ಲಕ್ನೋ ಫ್ರಾಂಚೈಸಿ ಕೂಡ ಅದೇ ಮೊತ್ತವನ್ನು ಕೆಎಲ್ ರಾಹುಲ್ಗೆ ನೀಡಲು ನಿರ್ಧರಿಸಿದೆ.
ಲಕ್ನೋ ಫ್ರಾಂಚೈಸಿ ಕೆ.ಎಲ್. ರಾಹುಲ್ ಜೊತೆಗೆ ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮಾಜಿ ಆಟಗಾರ ಮಾರ್ಕಸ್ ಸ್ಟೊಯಿನಿಸ್ಗೆ ರೂ 9.2 ಕೋಟಿ ಮತ್ತು ಮಾಜಿ ಪಂಜಾಬ್ ಕಿಂಗ್ಸ್ ಸ್ಪಿನ್ನರ್ ಮತ್ತು ಭಾರತದ ಅಂಡರ್-19 ವಿಶ್ವಕಪ್ ತಂಡದ ಆಟಗಾರ ರವಿ ಬಿಷ್ಣೋಯ್ಗೆ ರೂ 4 ಕೋಟಿಯನ್ನು ನೀಡಿದೆ.
ಮತ್ತೊಂದು ಹೊಸ ಐಪಿಎಲ್ ತಂಡ ಅಹಮದಾಬಾದ್, ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಮಾಜಿ ಆಟಗಾರ ಹಾರ್ದಿಕ್ ಪಾಂಡ್ಯ ಅವರಿಗೆ 15 ಕೋಟಿ ರೂಪಾಯಿ ನೀಡಿ ನಾಯಕನನ್ನಾಗಿ ಆಯ್ಕೆ ಮಾಡಿದೆ.