Virat | ಕೊಹ್ಲಿಯನ್ನ ಹೊರದಬ್ಬಿ.. ಯುವಕರಿಗೆ ಚಾನ್ಸ್ ಕೊಡಿ
ಕೊಹ್ಲಿಯನ್ನ ಹೊರದಬ್ಬಿ.. ಯುವಕರಿಗೆ ಚಾನ್ಸ್ ಕೊಡಿ.. ಸದ್ಯ ಟ್ವಿಟ್ಟರ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿರುವ ಸುದ್ದಿ ಇದು. ವಿರಾಟ್ ಕೊಹ್ಲಿ ನಾಯಕನ ಸ್ಥಾನದಿಂದ ಕೆಳಗಿಳಿದಿದ್ದೇ ಇಳಿದಿದ್ದು, ಎಲ್ಲರ ಚಿತ್ತ ಕೊಹ್ಲಿ ಮೇಲೆಯೇ ಇದೆ. ವಿರಾಟ್ ಕೆಮ್ಮಿದ್ರೂ ತಪ್ಪು, ಸುಮ್ಮನಿದ್ದರೂ ತಪ್ಪು ಎಂಬಂತಾಗಿದೆ.
ಹೌದು..! ವಿರಾಟ್ ಕೊಹ್ಲಿ ಮೊದಲಿನಂತೆ ಸೆಂಚೂರಿಗಳನ್ನ ಬಾರಿಸುತ್ತಿಲ್ಲ. ಈ ಹಿಂದೆ ಏಳು ಪಂದ್ಯಕ್ಕೆ ಒಂದು ಸೆಂಚೂರಿ ಎಂಬಂತೆ ವಿರಾಟ್ ಶತಕದ ಸಂಭ್ರಮ ಆಚರಿಸುತ್ತಿದ್ದರು. ಪ್ರತಿ ಸರಣಿಯಲ್ಲೂ ಕನಿಷ್ಠ ಒಂದು ಸೆಂಚೂರಿ ಬಾರಿಸುತ್ತಿದ್ದರು. ವಿರಾಟ್ ಕ್ರೀಸ್ ಗೆ ಬಂದ್ರೆ ಸೆಂಚೂರಿ ಪಕ್ಕಾ ಅನ್ನೋ ರೀತಿಯಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಬೀಸುತ್ತಿದ್ದರು.
ಆದ್ರೆ ಈಗ ವಿರಾಟ್ ಬ್ಯಾಟ್ ನಿಂದ ಶತಕ ಸಿಡಿಯುತ್ತಿಲ್ಲ. ಕೊಹ್ಲಿ ಬ್ಯಾಟ್ ಆಕಾಶವನ್ನ ನೋಡಿ ಎರಡು ವರ್ಷಗಳೇ ಕಳೆದಿದೆ. ಹೀಗಾಗಿ ವಿರಾಟ್ ಕೊಹ್ಲಿಯ 71ನೇ ಶತಕಕ್ಕಾಗಿ ಇಡೀ ಕ್ರಿಕೆಟ್ ಜಗತ್ತೇ ಪ್ರಾರ್ಥಿಸುತ್ತಿದೆ.
ಈ ಮಧ್ಯೆ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ದದ ಮೂರು ಮ್ಯಾಚ್ ಗಳ ಸರಣಿಯಲ್ಲಿ ವಿಫಲರಾಗಿದ್ದು, ಅವರನ್ನು ವಿರೋಧಿಸುವವರಿಗೆ ಹಾಲು ಕುಡಿದಂತೆ ಆಗಿದೆ. ವಿರಾಟ್ ಕೊಹ್ಲಿ ವಿಂಡೀಸ್ ಸರಣಿಯಲ್ಲಿ ಕೇವಲ 26 ರನ್ ಗಳಿಸಿದ್ಧಾರೆ. ಮೊದಲ ಪಂದ್ಯದಲ್ಲಿ 8, ಎರಡನೇ ಪಂದ್ಯದಲ್ಲಿ 18, ಮೂರನೇ ಪಂದ್ಯದಲ್ಲಿ ಸೊನ್ನೆ. ಹೀಗೆ 26 ರನ್ ಗಳಿಸಿದ್ದಾರೆ. ಹಾಗಾಗಿ ನೆಟ್ಟಿಗರು ವಿರಾಟ್ ವಿರುದ್ಧ ಮುಗಿಬಿದ್ದಿದ್ದಾರೆ.
ಅದರಲ್ಲೂ ವಿರಾಟ್ ಹೇಟರ್ಸ್, ಕೊಹ್ಲಿಗೆ ಚಾನ್ಸ್ ಕೊಟ್ಟಿದ್ದು ಸಾಕು, ಅವರನ್ನ ಕೈಬಿಟ್ಟು, ಹೊಸಬರಿಗೆ ಚಾನ್ಸ್ ನೀಡಿ ಎಂದು ಕಮೆಂಟ್ಸ್ ಮಾಡುತ್ತಿದ್ದಾರೆ. ಇದಕ್ಕೆ ವಿರಾಟ್ ಅಭಿಮಾನಿಗಳು ಮುಟ್ಟಿ ನೋಡಿಕೊಳ್ಳುವ ತಿರುಗೇಟುಗಳನ್ನ ನೀಡುತ್ತಿದ್ದಾರೆ.
ಅಂದಹಾಗೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಬುಸುಗುಡುತ್ತಿರೋರು ಇಲ್ಲಿ ಒಂದು ವಿಷಯವನ್ನ ಅರಿತುಕೊಳ್ಳಬೇಕು. ಅದು ಏನಂದರೇ ವಿರಾಟ್ ಕೊಹ್ಲಿ ಬ್ಯಾಡ್ ಪಾರ್ಮ್ ನಲ್ಲಿಲ್ಲ. ಬ್ಯಾಡ್ ಪಾರ್ಮ್ ನಲ್ಲಿದ್ದರೇ ದಕ್ಷಿಣಾಫ್ರಿಕಾ ವಿರುದ್ಧ ಸರಣಿಯ ಮೂರು ಪಂದ್ಯಗಳಲ್ಲಿ ಎರಡು ಅರ್ಧ ಶತಕಗಳನ್ನು ಸಿಡಿಸುತ್ತಿರಲಿಲ್ಲ.
ಇನ್ನು ವಿರಾಟ್ ಕೊಹ್ಲಿ ಕಳೆದ 10 ಇನ್ನಿಂಗ್ಸ್ ಗಳಲ್ಲಿ ಆರು ಅರ್ಧ ಶತಕಗಳನ್ನು ಸಿಡಿಸಿದ್ದಾರೆ. virat-kohli last 10 ODI innings Saakshatv ಇದು ಕಳಪೆ ಪಾರ್ಮ್ ಅಲ್ಲ ಅನ್ನೋದು ಕ್ರಿಕೆಟ್ ಬಗ್ಗೆ ಸಾಮಾನ್ಯ ಜ್ಞಾನ ಇರೋರಿಗು ಗೊತ್ತಾಗುತ್ತದೆ.










