VIRAT KOHLI | ವಿರಾಟ್ ಕೊಹ್ಲಿಗೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗನ ಟಿಪ್ಸ್
ಈ ಬಾರಿ ಇಂಡಿಯನ್ ಪ್ರಿಮಿಯರ್ ಲೀಗ್ ವಿರಾಟ್ ಕೊಹ್ಲಿ ಪಾಲಿಗೆ ಅತ್ಯಂತ ಕೆಟ್ಟ ಸೀಸನ್ ಆಗಿದೆ. ಕ್ಯಾಪ್ಟನ್ಸಿ ಜವಾಬ್ದಾರಿ ಬಿಟ್ಟು ಕೇವಲ ಬ್ಯಾಟರ್ ಆಗಿ ಬ್ಯಾಟ್ ಬೀಸಿದ್ರೂ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಪರ ಕಮಾಲ್ ಮಾಡಲಿಲ್ಲ. ಬದಲಿಗೆ ಟೂರ್ನಿ ಉದ್ದಕ್ಕೂ ವೈಫಲ್ಯ ಅನುಭವಿಸಿದ್ರು.
ಈ ಸೀಸನ್ ನಲ್ಲಿ ವಿರಾಟ್ ಕೊಹ್ಲಿ 16 ಪಂದ್ಯಗಳನ್ನಾಡಿದ್ದಾರೆ. ಈ ಪೈಕಿ 341 ರನ್ ಮಾತ್ರ ಗಳಿಸಿದ್ದಾರೆ. 22.73ರ ಸರಾಸರಿ ಹಾಗೂ 115.78ರ ಸ್ಟ್ರೈಕ್ ರೇಟ್ ಹೊಂದಿದ್ದ ವಿರಾಟ್, ಬ್ಯಾಟ್ನಿಂದ ಮೂಡಿದ್ದು ಎರಡು ಅರ್ಧಶತಕಗಳು ಮಾತ್ರ.
ಇದು ಆರ್ ಸಿಬಿ ತಂಡದ ಮೇಲೂ ಸಾಕಷ್ಟು ಪರಿಣಾಮ ಬೀರಿತ್ತು ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಯಾಕಂದರೇ ಒಂದು ವೇಳೆ ವಿರಾಟ್ ಕೊಹ್ಲಿ ಮೊದಲಿನ ಫಾರ್ಮ್ ನಲ್ಲಿ ಈ ಸೀಸನ್ ನಲ್ಲಿ ಅಬ್ಬರಿಸಿದ್ರೆ ಆರ್ ಸಿಬಿ ಇಂದು ಫೈನಲ್ ಪಂದ್ಯದಲ್ಲಿ ಕಾಣಿಸಿಕೊಳ್ಳುತ್ತಿತ್ತು ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಆದ್ರೆ ನಿರ್ಣಾಯಕ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ವೈಫಲ್ಯ ತಂಡಕ್ಕೆ ಸಾಕಷ್ಟು ದುಬಾರಿ ಆಯ್ತು. ಅಲ್ಲದೇ ತಂಡ ಟೂರ್ನಿಯಿಂದ ಈಗಾಗಲೇ ಹೊರಬಿದ್ದಿದೆ. ಇದಕ್ಕೆ ವಿರಾಟ್ ಕೊಹ್ಲಿ ಪ್ರಮುಖ ಕಾರಣ ಎಂದು ಕೆಲವರು ವಾದಿಸುತ್ತಿದ್ದಾರೆ. ಆದ್ರೆ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಮೈಕಲ್ ವಾನ್ ವಿರಾಟ್ ಕೊಹ್ಲಿ ಬೆನ್ನಿಗೆ ನಿಂತಿದ್ದಾರೆ.
ವಿರಾಟ್ ಕೊಹ್ಲಿಯ ಸದ್ಯ ಫಾರ್ಮ್ ಬಗ್ಗೆ ಮಾತನಾಡಿರುವ ವಾನ್, ವಿರಾಟ್ ಕೊಹ್ಲಿ ಸದ್ಯಕ್ಕೆ ಸ್ವಲ್ಪ ಕಾಲ ವಿಶ್ರಾಂತಿ ಪಡೆಯಬೇಕು, ಆ ನಂತರ ಉತ್ತಮ ಮನಸ್ಥಿತಿಯೊಂದಿಗೆ ಕ್ರಿಕೆಟ್ ಮೈದಾನಕ್ಕೆ ಇಳಿಯಬೇಕು ಎಂದಿದ್ದಾರೆ.
ವಿರಾಟ್ ಕೊಹ್ಲಿ ಸುಲಭವಲ್ಲದ ಹಂತಗಳಲ್ಲಿ ಯಶಸ್ವಿಯಾಗಿ ಮುನ್ನಡೆಯುವ ದಿಗ್ಗಜ ಆಟಗಾರ. ಎರಡು-ಮೂರು ವರ್ಷಗಳ ಹಿಂದೆ ವಿರಾಟ್ ಕೊಹ್ಲಿ ಮೈದಾನಕ್ಕಿಳಿದರೆ ಸೆಂಚುರಿ ಬಾರಿಸಲಿದ್ದಾರೆ ಎಂಬ ನಂಬಿಕೆ ಇರುತ್ತಿತ್ತು. ಆದರೆ ಇದೀಗ ಸ್ವಲ್ಪಮಟ್ಟಿನ ಫಾರ್ಮ್ ಕಳೆದುಕೊಂಡಿದ್ದು, ಅವರಿಗೆ ವಿಶ್ರಾಂತಿ ಅಗತ್ಯವಿದೆ. ಆದ್ದರಿಂದ ವಿರಾಟ್ ಕೊಹ್ಲಿ, ಕೆಲಕಾಲ ಕುಟುಂಬದೊಂದಿಗೆ ಕಾಲ ಕಳೆದು ನಂತರ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿ ಎಂದು ಮೈಕಲ್ ವಾನ್ ಸಂದರ್ಶನವೊಂದರಲಿತಿಳಿಸಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಪ್ರತಿಬಾರಿ ಮೈದಾನಕ್ಕಿಳಿದಾಗ ವಿಶ್ವ ಕ್ರಿಕೆಟ್ ಆತನ ಬ್ಯಾಟ್ನಿಂದ ಶತಕವನ್ನ ನಿರೀಕ್ಷಿಸುತ್ತದೆ. ಆದರೆ ವೃತ್ತಿ ಬದುಕಿನ ಉದ್ದಕ್ಕೂ ಒಳ್ಳೆಯ ಸಂಗತಿಗಳೊಂದಿಗೆ ಮುನ್ನಡೆಯಲು ಯಾರಿಗೂ ಸಾಧ್ಯವಿಲ್ಲ. ವಿರಾಟ್ ಕೊಹ್ಲಿ ಸ್ಪರ್ಧಾತ್ಮಕ ಕ್ರಿಕೆಟ್ನಲ್ಲಿ ಸ್ವಲ್ಪಮಟ್ಟಿನ ಹಿನ್ನಡೆಯನ್ನು ಎದುರಿಸುತ್ತಿದ್ದಾರೆ ಎಂದಿದ್ದಾರೆ ವಾನ್. virat-kohli-Michael Vaughan advises Virat Kohli to rediscover his youthfulness








