RCB | ಆರ್ ಸಿಬಿಯಿಂದ ದೂರ ಉಳಿತಾರಾ ವಿರಾಟ್..?
ಆರ್ ಸಿಬಿಯಿಂದ ದೂರ ಉಳಿತಾರಾ ವಿರಾಟ್ ಕೊಹ್ಲಿ..? ಸದ್ಯ ಎಲ್ಲ ಕ್ರಿಕೆಟ್ ಅಭಿಮಾನಿಗಳಲ್ಲಿ ಕಾಡುತ್ತಿರುವ ಮಿಲಿಯನ್ ಡಾಲರ್ ಗಳ ಪ್ರಶ್ನೆ ಇದು. ಹಾಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಲ್ಲಿ ಭಯ ಹುಟ್ಟಿಸಿರುವ ಪ್ರಶ್ನೆ ಕೂಡ ಹೌದು..!!
ಯಾಕಂದರೇ ಕಿಂಗ್ ವಿರಾಟ್ ಕೊಹ್ಲಿ ಖದಲ್ ಕಳೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿಯ ವೀರಾವೇಷ, ವಿರಾಟ ರೂಪ ಎಲ್ಲವೂ ಮಾಯವಾಗಿದೆ.
ಒಂದು ಮಾತಿನಲ್ಲಿ ಹೇಳೋದಾದ್ರೆ ವಿರಾಟ್ ಯ ಬ್ಯಾಟಿಂಗ್ ವೈಭವ ಕಣ್ಮರೆಯಾಗಿದೆ. 2019 ನಂತರ ವಿರಾಟ್ ಕೊಹ್ಲಿ ಬ್ಯಾಟಿಂಗ್ ನಲ್ಲಿ ಬದಲಾವಣೆಯಾಗಿದೆ.
ವಿರಾಟ್ ಕೊಹ್ಲಿ ಮೊದಲಿನಂತೆ ಅಬ್ಬರಿಸೋದನ್ನ ಬಿಟ್ಟುಬಿಟ್ಟಿದ್ದಾರೆ. ಪಂದ್ಯದಿಂದ ಪಂದ್ಯಕ್ಕೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದ ವಿರಾಟ್ ಕೊಹ್ಲಿ ಇದೀಗ ಪಂದ್ಯದಿಂದ ಪಂದ್ಯಕ್ಕೆ ಮತ್ತಷ್ಟು ಕಳೆಪೆಯಾಗುತ್ತಿದ್ದಾರೆ.
ಇದಕ್ಕೆ ತಾಜಾ ಉದಾಹರಣ 15ನೇ ಸೀಸನ್ ನ ಇಂಡಿಯನ್ ಪ್ರಿಮಿಯರ್ ಲೀಗ್..!! ಹೌದು ಈ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು.
ವಿರಾಟ್ ಕ್ಯಾಪ್ಟನ್ಸಿ ಬಿಟ್ಟ ನಂತರ ಯಾವುದೇ ಒತ್ತಡಗಳಿಲ್ಲದೇ ಫ್ರೀ ಆಗಿ ಬ್ಯಾಟ್ ಬೀಸ್ತಾರೆ. ಸುನಾಮಿಯಂತೆ ರನ್ ಗಳಿಸ್ತಾರೆ. ಹಳೆಯ ವಿರಾಟ್ ಕೊಹ್ಲಿ ಕಾಣಿಸ್ತಾರೆ..
ಅಂತಾ ಎಲ್ಲರೂ ಅಂದುಕೊಂಡಿದ್ದರು. ಆದ್ರೆ ಆ ಎಲ್ಲಾ ನಿರೀಕ್ಷೆಗಳು ಸುಳ್ಳಾಗಿವೆ. ವಿರಾಟ್ ಅಬ್ಬರಿಸೋದು ಇರಲಿ, ವಿಕೆಟ್ ಉಳಿಸಿಕೊಂಡರೇ ಸಾಕಾಗಿದೆ.
ಅಂದಹಾಗೆ ವಿರಾಟ್ ಕೊಹ್ಲಿ ಈ ಸೀಸನ್ನಲ್ಲಿ ಆಡಿರುವ 8 ಪಂದ್ಯಗಳಿಂದ ಕೇವಲ 119 ರನ್ ಗಳಿಸಿದ್ದಾರೆ. ಅವರ ಗರಿಷ್ಟ ಸ್ಕೋರ್ 48 ರನ್.
ಈ ಎಂಟು ಪಂದ್ಯಗಳಲ್ಲಿ ಎರಡು ಬಾರಿ ಡಕ್ ಔಟ್ ಆಗಿದ್ದಾರೆ. ಅದು ಕೂಡ ಬ್ಯಾಕ್ ಟು ಬ್ಯಾಕ್.
ಎಷ್ಟೇ ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಿದ್ದರೂ ವಿರಾಟ್ ಕೊಹ್ಲಿ ಹೀಗೆ ಬ್ಯಾಕ್ ಟು ಬ್ಯಾಕ್ ಔಟ್ ಆಗಿರಲಿಲ್ಲ.
ಸದ್ಯ ವಿರಾಟ್ ಫಾರ್ಮ್ ತಂಡಕ್ಕೆ ಹಿನ್ನೆಡೆಯನ್ನುಂಟು ಮಾಡುತ್ತಿದೆ. ವಿರಾಟ್ ವೈಫಲ್ಯ ತಂಡದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ.
ಹೀಗಾಗಿ ವಿರಾಟ್ ಕೊಹ್ಲಿ ಕೆಲವು ಪಂದ್ಯಗಳಿಂದ ದೂರ ಇರೋದು ಸೂಕ್ತ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ತಂಡದ ಹಿತ ದೃಷ್ಠಿಯಿಂದ ವಿರಾಟ್ ಕೊಹ್ಲಿಗೆ ಕೋಕ್ ನೀಡಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಅನ್ನೋ ವಾದವೂ ಈಗ ಕ್ರಿಕೆಟ್ ವಲಯದಲ್ಲಿ ಹರಿದಾಡುತ್ತಿದೆ.
ಹೀಗಾಗಿ ಮುಂದಿನ ದಿನಗಳಲ್ಲಿ ವಿರಾಟ್ ಕೊಹ್ಲಿ ಆರ್ ಸಿಬಿ ಪ್ಲೇಯಿಂಗ್ ನಲ್ಲಿ ಕಾಣಿಸದೇ ಇದ್ದರೂ ಅಚ್ಚರಿ ಪಡಬೇಕಿಲ್ಲ.