virat kohli | ಕೊಹ್ಲಿ ಆಟಕ್ಕೆ ಪಾಕ್ ಆಟಗಾರರ ಸಲಾಂ
ಏಷ್ಯಾಕಪ್ 2022 ರಲ್ಲಿ ಟೀಂ ಇಂಡಿಯಾ ಆಟ ಮುಗಿದಿದೆ. ದುಬೈ ವೇದಿಕೆಯಾಗಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 102 ರನ್ ಗಳ ಅಂತರದೊಂದಿಗೆ ಗೆಲುವು ಸಾಧಿಸಿದೆ. ಈ ಮ್ಯಾಚ್ ನಲ್ಲಿ ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅದ್ಭುತ ಇನ್ನಿಂಗ್ಸ್ ಕಟ್ಟಿದ್ರು. 1020 ದಿನಗಳ ಬಳಿಕ ವಿರಾಟ್ ಕೊಹ್ಲಿ ಸೆಂಚೂರಿ ಸಿಡಿಸಿದ್ರು.
ಪಂದ್ಯದಲ್ಲಿ ಕೊಹ್ಲಿ ಆಕಾಶವೇ ಮಿತಿ ಎಂಬಂತೆ ಮಿಂಚಿದ್ರು. 61 ಎಸೆತಗಳಲ್ಲಿ 12 ಬೌಂಡರಿ, 6 ಸಿಕ್ಸರ್ ಗಳೊಂದಿಗೆ 122 ರನ್ ಗಳನ್ನು ಗಳಿಸಿದರು . ವಿರಾಟ್ ರ ಈ ಆಟಕ್ಕೆ ಇಡೀ ಇಡೀ ಕ್ರಿಕೆಟ್ ಲೋಕವೇ ಸಲಾಂ ಎನ್ನುತ್ತಿದೆ.

ಮುಖ್ಯವಾಗಿ ಟ್ವಿಟ್ಟರ್ ವೇದಿಕೆಯಾಗಿ ಪಾಕಿಸ್ತಾನ ಕ್ರಿಕೆಟಿಗರು ಕೊಹ್ಲಿಯನ್ನ ಹಾಡಿಹೋಗಲಿದ್ದಾರೆ. ಟ್ವಿಟ್ಟರ್ ನಲ್ಲಿ ಹಾಸನ್ ಅಲಿ, ಮೊಮ್ಮದ್ ಅಮೀರ್, ಕಮ್ರಾನ್ ಅಕ್ಮಲ್ ನಂತಹ ಆಟಗಾರರು ಕೊಹ್ಲಿಯನ್ನ ಅಭಿನಂದಿಸಿದ್ರು.
ಫಾರ್ಮ್ ತಾತ್ಕಾಲಿಕ, ಕ್ಲಾಸ್ ಅನ್ನೋದು ಶಾಶ್ವತ ಎಂದಿಗೂ ಅದು ಹೋಗೋದಿಲ್ಲ. ಕೊಹ್ಲಿ ಆಟವನ್ನ ನೋಡುವುದಕ್ಕೆ ನನಗೆ ಇಷ್ಟವಾಗುತ್ತದೆ. ಈ ಮ್ಯಾಚ್ ನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಸೆಂಚೂರಿ ಸಾಧಿಸಿದರು. ಕೊಹ್ಲಿ ನಿಜವಾದ ಕಿಂಗ್ ಎಂದು ಅಕ್ಮಲ್ ಬರೆದುಕೊಂಡಿದ್ದಾರೆ.