ರಹಾನೆ, ಪೂಜಾರ ಖೇಲ್ ಖತಂ… ವಿರಾಟ್ ಹೇಳಿದ್ದೇನು..?

1 min read
virat-kohli-pujara-rahane saaksha tv

ರಹಾನೆ, ಪೂಜಾರ ಖೇಲ್ ಖತಂ… ವಿರಾಟ್ ಹೇಳಿದ್ದೇನು..?

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹೀನಾಯವಾಗಿ ವೈಫಲ್ಯ ಕಂಡಿದ್ದ ಹಿರಿಯ ಆಟಗಾರರಾದ ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ ಪೂಜಾರ  ಪರ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪರೋಕ್ಷವಾಗಿ ಬ್ಯಾಟ್ ಬೀಸುತ್ತಿದ್ದಾರೆ.

ಮೂರನೇ ಟೆಸ್ಟ್ ನಲ್ಲಿ ಸೋಲಿನ ನಂತರ ಪೂಜಾರ, ರಹಾನೆ ಬಗ್ಗೆ  ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿರಾಟ್ ಕೊಹ್ಲಿ, ಕೆಲ ಆಸಕ್ತಿಕರ ಹೇಳಿಕೆಗಳನ್ನು ನೀಡಿದ್ದಾರೆ.

ಅವರಿಬ್ಬರ ಭವಿಷ್ಯವನ್ನು ನಿರ್ಧರಿಸುವುದು ನನ್ನ ಕೆಲಸವಲ್ಲ. ತಂಡಕ್ಕಾಗಿ ಅದೆಷ್ಟೊ ಗೆಲುವುಗಳನ್ನು ತಂದುಕೊಟ್ಟ ಅವರಿಬ್ಬರ ಬಗ್ಗೆ ನಾನು ಮಾತನಾಡುವುದು ಎಷ್ಟು ಸರಿ ಎಂದು ಮತ್ತೆ ಪ್ರಶ್ನೆ ಕೇಳಿದರು.

ಆಯ್ಕೆ ಸಮಿತಿ ಅವರಿಬ್ಬರನ್ನು ಆಯ್ಕೆ ಮಾಡಿದ್ರೆ ಖಂಡಿತ ನನ್ನ ಬೆಂಬಲ ಇರುತ್ತದೆ. ಅವರ ಅನುಭವ ತಂಡಕ್ಕೆ ಬೇಕಾಗಿದೆ ಎಂದು ವಿರಾಟ್ ಹೇಳಿದ್ದಾರೆ.

virat-kohli-pujara-rahane  saaksha tv

ಇನ್ನು ಕಳೆದ ವರ್ಷದಿಂದ ಪೂಜಾರ ಹಾಗೂ ರಹಾನೆ ದಯನೀಯವಾಗಿ ವಿಫಲರಾಗಿ ತಂಡಕ್ಕೆ ಹೊರೆಯಾಗಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅವರ ಪ್ರದರ್ಶನ ಇನ್ನೂ ಕೆಟ್ಟದಾಗಿದೆ.

ಈ ಮೂರು ಟೆಸ್ಟ್‌ಗಳ ಸರಣಿಯಲ್ಲಿ, ರಹಾನೆ 6 ಇನ್ನಿಂಗ್ಸ್‌ಗಳಲ್ಲಿ ಕೇವಲ 136 ರನ್ ಗಳಿಸಿದರೆ, ಪೂಜಾರ ಕೇವಲ 124 ರನ್ ಗಳಿಸಿದರು.

ಇವರಿಬ್ಬರು ಗಳಿಸಿದ ರನ್ ಗಳಿಗೆ ಹೋಲಿಸಿದರೆ.. ಎಕ್ಸ್ ಟ್ರಾ ರೂಪದಲ್ಲಿ ಟೀಂ ಇಂಡಿಯಾ ಹೆಚ್ಚು ರನ್ ಗಳಿಸಿದೆ.

ದಕ್ಷಿಣ ಆಫ್ರಿಕಾದ ಬೌಲರ್‌ಗಳು ಮೂರು ಟೆಸ್ಟ್‌ಗಳಲ್ಲಿ ಒಟ್ಟು 136 ಹೆಚ್ಚುವರಿ ರನ್ ಕೊಟ್ಟಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd