Virat Kohli – ನನ್ನ GOAT ಎನ್ನಬೇಡಿ.. ನಾನು ಅರ್ಹನಲ್ಲ
ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸದ್ಯ ಅದ್ಭುತ ಫಾರ್ಮ್ ನಲ್ಲಿದ್ದಾರೆ.
ಟಿ 20 ವಿಶ್ವಕಪ್ ನಲ್ಲಿ ಮಿಂಚಿನ ಪ್ರದರ್ಶನ ನೀಡುತ್ತಿರುವ ವಿರಾಟ್ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿದ್ದಾರೆ.
ಪಾಕಿಸ್ತಾನ ತಂಡದ ವಿರುದ್ಧ ಅವಿಸ್ಮರಣೀಯ ಇನ್ನಿಂಗ್ಸ್ ಆಡಿದ ವಿರಾಟ್ ನೆದರ್ ಲ್ಯಾಂಡ್ ಮತ್ತೆ ತಮ್ಮ ಕ್ಲಾಸ್ ಪ್ರದರ್ಶನ ನೀಡಿದರು.
ಗುರುವಾರ ನಡೆದ ಪಂದ್ಯದಲ್ಲಿ 44 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ 62 ರನ್ ಗಳಿಸಿದರು.
ಇದರಲ್ಲಿ ಮೂರು ಬೌಂಡರಿ, ಎರಡು ಸಿಕ್ಸರ್ ಗಳಿವೆ.

ಈ ನಡುವೆ ವಿರಾಟ್ ಕೊಹ್ಲಿಯನ್ನ ಕ್ರಿಕೆಟ್ ಅಭಿಮಾನಿಗಳು GOAT Greatest of all Time ಅಂತಾ ಸಂಬೋಧನೆ ಮಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿ ಮಾಡುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿರಾಟ್ ಕೊಹ್ಲಿ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ತನ್ನ ಹೆಸರಿನ ಮುಂದೆ ಅಷ್ಟು ದೊಡ್ಡ ಟ್ಯಾಗ್ ಅನ್ನು ಹಾಕಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ನಾನು ಆ ಬಿರುದುಗೆ ಅರ್ಹನಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ನನ್ನ ಅಭಿಮಾನಿಗಳಾದ್ರೂ ಸರಿ GOAT ಅಂತಾ ಕರೆಯಬೇಡಿ, ಆ ರೀತಿ ಕರೆಸಿಕೊಳ್ಳುವ ಅರ್ಹತೆ ವಿಶ್ವ ಕ್ರಿಕೆಟ್ ನಲ್ಲಿ ಇಬ್ಬರಿಗೆ ಮಾತ್ರ ಇದೆ.
ಆ ಇಬ್ಬರು ನಾನು ಆರಾಧಿಸುವ ವಿವಿಎಸ್ ರಿಚರ್ಡ್, ಸಚಿನ್ ತೆಂಡುಲ್ಕರ್ ಅಂತಾ ವಿರಾಟ್ ಕೊಹ್ಲಿ ಹೇಳಿದ್ದಾರೆ.








