ಟಿ20ಯಲ್ಲಿ 11 ಸಾವಿರ ರನ್ ಪೂರೈಸಿದ ರನ್ ಮಷಿನ್ ಕೊಹ್ಲಿ…
ತವರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಟೀಂ ಇಂಡಿಯಾ ಪಾಲಾಗಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿದೆ. ಸರಣಿಯ ಎರಡನೇ ಪಂದ್ಯದಲ್ಲಿ ಭಾರತ 16 ರನ್ಗಳಿಂದ ದಕ್ಷಿಣ ಆಫ್ರಿಕಾವನ್ನ ಮಣಿಸಿತು.
ಈ ಪಂದ್ಯದಲ್ಲಿ ವಿರಾಟ್ ಮತ್ತೊಂದು ದಾಖಲೆಯನ್ನ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ಅರ್ಧಶತಕ ವಂಚಿತರಾದರೂ 49 ರನ್ ಸಿಡಿಸಿದ ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ T20 ಕ್ರಿಕೆಟ್ನಲ್ಲಿ 11 ಸಾವಿರ ರನ್ಗಳನ್ನು ಪೂರೈಸಿದ ಮೊದಲ ಭಾರತೀಯ ಆಟಗಾರನೆಂಬ ಸಾಧನೆ ಮಾಡಿದ್ದಾರೆ.
354 T20 ಪಂದ್ಯಗಳನ್ನಾಡಿರುವ ಕೊಹ್ಲಿ, ಅತಿ ವೇಗವಾಗಿ 11 ಸಾವಿರ ರನ್ಗಳನ್ನು ಪೂರೈಸಿದ ಟಿ20 ಕ್ರಿಕೆಟ್ ಆಟಗಾರನೆಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಈ ಮೂಲಕ ಕ್ರಿಸ್ ಗೇಲ್, ಕೀರಾನ್ ಪೊಲಾರ್ಡ್ ಮತ್ತು ಶೋಯೆಬ್ ಮಲಿಕ್ ಅವರನ್ನ ಹಿಂದಿಕ್ಕಿ ಮೊದಲ ಸ್ಥಾನದಲ್ಲಿದ್ದಾರೆ.
Virat Kohli: Run machine Kohli who completed 11 thousand runs in T20…