Virat Kohli : ಸಚಿನ್ ದಾಖಲೆ ಹಿಂದಿಟ್ಟ ವಿರಾಟ್
ಟೀಮ್ ಇಂಡಿಯಾದ ರನ್ ಮಷೀನ್ ವಿರಾಟ್ ಕೊಹ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಬರ್ಸಾಪಾರಾ ಮೈದಾನದಲ್ಲಿ ಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಕರ್ಷಕ ಶತಕ ಸಿಡಿಸಿದರು. ವಿರಾಟ್ ಕೊಹ್ಲಿ 87 ಎಸೆತದಲ್ಲಿ 12 ಬೌಂಡರಿ 1ಸಿಕ್ಸರ್ ಸೇರಿ ಒಟ್ಟು 113 ರನ್ ಹೊಡೆದರು.
ಇದರೊಂದಿಗೆ ವಿರಾಟ್ ಕೊಹ್ಲಿ ತವರಿನಲ್ಲಿ 20ನೇ ಏಕದಿನ ಶತಕ ಸಿಡಿಸಿ ಸಚಿನ್ ಅವರ ದಾಖಲೆಯನ್ನು ಸರಿಗಟ್ಟಿದರು. ಸಚಿನ್ ತೆಂಡೂಲ್ಕರ್ ತವರಿನಲ್ಲಿ 20 ಶತಕ ಸಿಡಿಸಿದ್ದಾರೆ.
2019ರ ನಂತರ ವಿರಾಟ್ ಕೊಹ್ಲಿ 20ನೇ ಶತಕ ಸಿಡಿಸಿದ್ದಾರೆ. ಕಳೆದ ತಿಂಗಳು ಚಿತ್ತಾಗಾಂಗ್ನಲ್ಲಿ ವಿರಾಟ್ ಶತಕ ಸಿಡಿಸಿದ್ದರು.
ಈ ಶತಕ ಸಿಡಿಸುವ ಮೂಲಕ್ ಸಚಿನ್ ಅವರ ಮತ್ತೊಂದು ದಾಖಲೆಯನ್ನು ವಿರಾಟ್ ಮುರಿದಿದ್ದಾರೆ. ಸಚಿನ್ ತೆಂಡೂಲ್ಕರ್ ಶ್ರೀಲಂಕಾ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ 8 ಶತಕ ಸಿಡಿಸಿದ್ದರು. ಇದೀಗ ವಿರಾಟ್ ಲಂಕಾ ವಿರುದ್ಧ 9ನೇ ಏಕದಿನ ಶತಕ ಸಿಡಿಸಿದ್ದಾರೆ.