ನಮ್ಮ ವಿರುದ್ಧ ಇಡೀ ದೇಶವಾಡುತ್ತಿದೆ : ಟೀಂ ಇಂಡಿಯಾ ಆಟಗಾರರ ಆಕ್ರೋಶ

1 min read
Virat kohli team india player shows-frustration on south africa saaksha tv

ನಮ್ಮ ವಿರುದ್ಧ ಇಡೀ ದೇಶವಾಡುತ್ತಿದೆ : ಟೀಂ ಇಂಡಿಯಾ ಆಟಗಾರರ ಆಕ್ರೋಶ

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಸಹನೆ ತೋರಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಷಯಕ್ಕೆ ಹೋಗುವುದಾದರೆ.. ಟೀಂ ಇಂಡಿಯಾದ ನೀಡಿರುವ 212 ರನ್ ಗಳ ಗುರಿಯನ್ನ ಬೆನ್ನಟ್ಟಿರುವ ದಕ್ಷಿಣ ಆಫ್ರಿಕಾ ದ್ವಿತೀಯ ಇನ್ನಿಂಗ್ಸ್ ನ  21ನೇ ಓವರನ್ನು ರವಿಚಂದ್ರನ್ ಅಶ್ವಿನ್ ಎಸೆದರು.

ಈ ಓವರ್ ನ ನಾಲ್ಕನೇ ಎಸೆತದಲ್ಲಿ ಡೀನ್ ಎಲ್ಗರ್ ಎಲ್ ಬಿ ಬಲೆಗೆ ಬಿದ್ದಿದ್ದರು.  ಫೀಲ್ಡ್ ಅಂಪೈರ್ ಎರಾಸ್ಮಸ್ ಅದನ್ನ ಔಟ್ ಎಂದು ಘೋಷಿಸಿದ್ದರು. ಆದ್ರೆ ಎಲ್ಗರ್  ಡಿಆರ್ ಎಸ್ ಮೊರೆ ಹೋದರು.

ಚೆಂಡಿನ ಲೈನ್ ಅಂಡ್ ಲೆಂಥ್ ಎಲ್ಲವೂ ಎಲ್ಗರ್ ವಿರುದ್ಧವಾಗಿಯೇ ಇತ್ತು. ಇದರಿಂದ ಟೀಂ ಇಂಡಿಯಾ ಆಟಗಾರರು ಸಂಭ್ರಮದಲ್ಲಿದ್ದರು.

ಆದ್ರೆ ಫಲಿತಾಂಶ ಟೀಂ ಇಂಡಿಯಾದ ವಿರುದ್ಧದವಾಗಿತ್ತು.  ‘ಬಾಲ್ ಟ್ರ್ಯಾಕರ್’ ನಲ್ಲಿ ಚೆಂಡು ವಿಕೆಟ್‌ಗಳ ಮೇಲೆ ಹೋಗುತ್ತಿರುವುದನ್ನು ತೋರಿಸಿತು.

ಇದರಿಂದ ಅಂಪೇರ್ ನಾಟೌಟ್ ಎಂದು ತೋರಿಸಿದರು. ಇದರಿಂದ ಟೀಂ ಇಂಡಿಯಾ ಆಟಗಾರರು ಶಾಕ್ ಗುರಿಯಾದರು, ಅಲ್ಲದೇ  ಮೈದಾನದಲ್ಲಿಯೇ ತಮ್ಮ ಅಸಮಾಧಾನ ಹೊರಹಾಕಿದರು.

Virat kohli team india player shows-frustration on south africa  saaksha tv

ಟೀಂ ಇಂಡಿಯಾದ ಆಟಗಾರರು ಒಬ್ಬೊಬ್ಬರಾಗಿಯೇ ವಿಕೆಟ್ ಮೈಕ್ ಬಳಿ ಹೋಗಿ,  ಸೂಪರ್ ಸ್ಪೋರ್ಟ್ಸ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಸೂಪರ್ ಸ್ಪೋರ್ಟ್ಸ್… ಗೆಲುವಿಗಾಗಿ ಉತ್ತಮ ಮಾರ್ಗಗಳನ್ನು ನೋಡಿ ಎಂದು ಅಶ್ವಿನ್ ಹೇಳಿದ್ದಾರೆ.

ಕೆಎಲ್ ರಾಹುಲ್, “ಇಡೀ ದೇಶವು 11 ಆಟಗಾರರ ವಿರುದ್ಧ ಆಡುತ್ತಿದೆ ಎಂದು, ‘ನೀವು ಆಟಕ್ಕೆ ಕೆಟ್ಟ ಹೆಸರು ತರುತ್ತಿದ್ದೀರಿ’ ಎಂದೂ ಮಯಾಂಕ್ ಪ್ರತಿಕ್ರಿಯಿಸಿದ್ದಾರೆ.

ಕೊಹ್ಲಿ  ಸ್ಟಂಪ್ ಬಳಿ ನಿಂತು, “ನಾವು ಯಾವಾಗಲೂ ನಮ್ಮ ಮೇಲೆಯೇ ಕಣ್ಣು ಇಟ್ಟಿರುತ್ತೀರಿ.  ನಿಮ್ಮ ತಂಡವನ್ನೂ ನೋಡಿಕೊಳ್ಳಿ ಎಂದು ಆಕ್ರೋಶ ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd