ಮಾಸ್ಕ್ ಧರಿಸಿ.. ಸಾಮಾಜಿಕ ಅಂತರ ಕಾಯ್ದುಕೊಳ್ಳಿ.. ಮಾರ್ಗಸೂಚಿಗಳನ್ನು ಪಾಲಿಸಿ – ವಿರಾಟ್ ಕೊಹ್ಲಿ..!

1 min read
virat kohli covid -19 saakshatv

ಮಾಸ್ಕ್ ಧರಿಸಿ.. ಸಾಮಾಜಿಕ ಅಂತರ ಕಾಯ್ದುಕೊಳ್ಳಿ.. ಮಾರ್ಗಸೂಚಿಗಳನ್ನು ಪಾಲಿಸಿ – ವಿರಾಟ್ ಕೊಹ್ಲಿ..!

virat kohli covid -19  saakshatvಭಾರತದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಹಿಡಿತಕ್ಕೆ ನಿಲುಕದಂತೆ ದಿನೇ ದಿನೇ ಮಿತಿ ಮೀರಿ ಹೋಗುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರ ಮತ್ತು ಆಯಾ ರಾಜ್ಯ ಸರ್ಕಾರಗಳು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಕೆಲವೊಂದು ರಾಜ್ಯಗಳಲ್ಲಿ ಲಾಕ್ ಡೌನ್ ಕೂಡ ಮಾಡಲಾಗಿದೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ನಿನ್ನೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ರು. ಕೋವಿಡ್ ಸೋಂಕು ತಡೆಗಟ್ಟಲು ಮತ್ತು ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ರು.

Virat Kohli urges citizens to follow COVID-19 protocols
ಇದ್ರ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ದೇಶದ ನಾಗರಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿಕೊಳ್ಳಿ.. ಸ್ಯಾನಿಟೈಸರ್ ಬಳಸಿಕೊಳ್ಳಿ.. ಅಗತ್ಯವಿದ್ರೆ ಮಾತ್ರ ಮನೆಯಿಂದ ಹೊರಗಡೆ ಹೋಗಿ ಅಂತ ವಿರಾಟ್ ಕೊಹ್ಲಿ ಮನವಿ ಮಾಡಿಕೊಂಡಿದ್ದಾರೆ.
ಕೋರೋನಾ ಸೋಂಕಿನ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಕೋವಿಡ್ ವಾರಿಯಸ್‍ಗಳಿಗೂ ಸಹಕಾರ ನೀಡಬೇಕು. ದೇಶ ಸುರಕ್ಷೆತೆಯಿಂದ ಇದ್ದಾಗ ಜನರು ಸುರಕ್ಷತೆಯಿಂದ ಇರುತ್ತಾರೆ. ನಿಮ್ಮ ಜವಾಬ್ದಾರಿಗಳನ್ನು ನೀವು ಮೊದಲು ಅರಿತುಕೊಂಡು ಜಾಗೃತರಾಗಿರಿ. ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಿ. ಜೈ ಹಿಂದ್ ಅಂತ ವಿರಾಟ್ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd