Virat Kohli : ನಾರ್ವೆಯ ಕ್ವಿಕ್ ಸ್ಟೈಲ್ ಜೊತೆ ವಿರಾಟ್ ಕೊಹ್ಲಿ ಡ್ಯಾನ್ಸ್ ; ವಿಡಿಯೋ ವೈರಲ್….
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಮುಕ್ತಾಯದ ನಂತರ ನಾರ್ವೇಜಿಯನ್ ಡ್ಯಾನ್ಸ್ ಗ್ರೂಪ್ ಕ್ವಿಕ್ ಸ್ಟೈಲ್ ಅವನ್ನ ಭೇಟಿಯಾಗಿಯಾಗಿದ್ದಾರೆ. ಈ ವೇಳೆ ಸ್ಟಿರಿಯೋ ನೇಷನ್ ಹಾಡಿನ ಇಷ್ಕ್ ಗೆ ವಿರಾಟ್ ಹೆಜ್ಜೆ ಹಾಕಿರುವ ವಿಡಿಯೋ ವೈರಲ್ ಆಗುತ್ತಿದೆ.
ಕ್ವಿಕ್ ಸ್ಟೈಲ್ ತಂಡದವನೊಬ್ಬ ವೀಡಿಯೊ ಪ್ರಾರಂಭದಲ್ಲಿ ಕ್ರಿಕೆಟ್ ಬ್ಯಾಟ್ ಹಿಡಿದು ಏನು ಮಾಡಬೇಕೆಂದು ತೋಚದೇ ಇದ್ದಾಗೆ ಬಿಳಿ ಟೀ ಶರ್ಟ್ ಕಪ್ಪು ಜೀನ್ಸ್ ಧರಿಸಿ ಬರುವ ಕಿಂಗ್ ಕೋಹ್ಲಿ ಬ್ಯಾಟ್ ಹೇಗೆ ಬಳಸಬೇಕು ಎಂಬುದುನ್ನ ಸ್ಟೆಪ್ ಹಾಕುತ್ತಲೇ ತೋರಿಸುತ್ತಾರೆ.
ವಿರಾಟ್ ಜೊತೆ ಕ್ವಿಕ್ ಸ್ಟೈಲ್ ಇಬ್ಬರೂ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದು, “ವಿರಾಟ್ ಕ್ವಿಕ್ ಸ್ಟೈಲ್ ಬೇಟಿಯಾದಾಗ ಎಂದು ಶೀರ್ಷಿಕೆ ನೀಡಲಾಗಿದೆ. ಈಗಾಗಲೇ 2 ಮಿಲಿಯನ್ ವಿಕ್ಷಣೆ 5.4 ಲಕ್ಷ ಲೈಕ್ ಗಳಿಸಿಕೊಂಡಿದೆ.
ನಟಿ ಅನುಷ್ಕಾ ಶರ್ಮಾ ರಿಯಾಕ್ಟ್ ಮಾಡಿ ಫೈಯರ್ ಎಮೋಜಿಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. ವಿರಾಟ್ ಕೊಹ್ಲಿ ಡ್ಯಾನ್ಸ್ ಮೂವ್ ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮುನ್ನಾ “ನಾನು ಮುಂಬೈನಲ್ಲಿ ಯಾರನ್ನು ಭೇಟಿ ಮಾಡಿದ್ದೇನೆ ಎಂದು ಊಹಿಸಿ” ಎಂದು ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
Virat Kohli: Virat Kohli dances with Norway’s Quick Style; The video went viral….








