Virat Kohli : RCB ಮಹಿಳಾ ತಂಡಕ್ಕೆ ಸ್ಪೂರ್ತಿ ತುಂಬಿದ ವಿರಾಟ್ ಕೊಹ್ಲಿ….
ಭಾರತದ ಬ್ಯಾಟಿಂಗ್ ಸೂಪರ್ಸ್ಟಾರ್ ವಿರಾಟ್ ಕೊಹ್ಲಿ ಟೆಸ್ಟ್ ಸರಣಿಯ ನಂತರ ಏಕದಿನ ಸರಣಿ ಆಡಲು ಮುಂಬನಲ್ಲಿ ಬೀಡು ಬಿಟ್ಟಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.
ಇದಕ್ಕೂ ಮೊದಲಿ ಮುಂಬೈನಲ್ಲಿ ನಡೆಯುತ್ತಿರುವ ಮಹಿಳಾ ಐಪಿಲ್ ಕಡೆ ಗಮನ ಹರಿಸಿದ ವಿರಾಟ್ ಕೊಹ್ಲಿ ಮಹಿಳಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ಕ್ರಿಕೆಟ್ ತಂಡವನ್ನ ಭೇಟಿ ಮಾಡಿ ಅವರೊಂದಿಗೆ ಮಾತುಕತೆ ನಡೆಸಿ ಸ್ಪೂರ್ತಿ ತುಂಬಿದ್ದಾರೆ. ಸತತ ಸೋಲುಗಳಿಂದ ನಿರಾಶೆ ಅನುಭವಿಸಿದ ತಂಡಕ್ಕೆ ವಿರಾಟ್ ಹೆಚ್ಚು ಅಗತ್ಯವಿರುವ ಟಿಪ್ಸ್ ನೀಡಿ ಧೈರ್ಯ ತೋರಿಸಿದ್ದಾರೆ.
ಗುರುವಾರ RCB ಅಧಿಕೃತ ಟ್ವಿಟರ್ ಹ್ಯಾಂಡಲ್ ನಿಂದ ಹಂಚಿಕೊಂಡ ವೀಡಿಯೊದಲ್ಲಿ ವಿರಾಟ್ ಮಾತನಾಡುತ್ತಾ “ ನಾನು 15 ವರ್ಷಗಳಿಂದ IPL ಆಡುತ್ತಿದ್ದೇನೆ. ನಾನು ಇಲ್ಲಿಯವರಗೆ ಟ್ರೋಫಿ ಗೆದ್ದಿಲ್ಲ. ಆದರೇ ಇದು ಪ್ರತಿ ವರ್ಷ ನಾನು ಆಡುವ ಉತ್ಸಾಹವನ್ನ ತಡೆದಿಲ್ಲ. ನಾನು ಮಾಡಬಹುದಾದದ್ದು ಸಹ ಅಷ್ಟೇ ಪ್ರತಿ ಪಂದ್ಯ ಮತ್ತು ಟೂರ್ನಯಲ್ಲಿ ಪರಿಶ್ರಮವಿಟ್ಟು ಆಡುವುದು. ನಾನು ಗೆದ್ದರೆ ಗ್ರೇಟ್ . ಅಕಸ್ಮಾತ್ ನಾವು ಸೋತರೆ ಅದರದೇ ಚಿಂತನೆಯಲ್ಲಿ ಸಮಾಧಿ ಕಟ್ಟಬೇಕಿಲ್ಲ. ಈಗಿರುವ ಸ್ಥಿತಿ ಎಷ್ಟು ಕೆಟ್ಟದಾಗಿದೆ ಎನ್ನುವುದಕ್ಕಿತ ಮುಂದಿನ ಅವಕಾಶಗಳ ಬಗ್ಗೆ ಯೋಚಿಸಬೇಕು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ನಾವು ಇಲ್ಲಿಯವರೆಗೆ ಒಂದು ಕಪ್ ಗೆದ್ದಿಲ್ಲ. ಆದರೂ ನಾವು ವಿಶ್ವದ ಅತ್ಯುತ್ತಮ ಫ್ಯಾನ್ಸ್ ಹೊಂದಿದ್ದೇವೆ ಎಂದು ಭಾವಿಸುತ್ತೇನೆ ಯಾಕೆಂದರೆ ನಾವು ಯಾವಾಗಲೂ ಪಂದ್ಯಕ್ಕೆ ಬದ್ಧರಾಗಿರುತ್ತೇವೆ. ಅದು ನಮ್ಮ ಅಭಿಮಾನಿಗಳಿಗೆ ಅತ್ಯಂತ ವಿಶೇಷವಾದ ವಿಷಯವಾಗಿದೆ. ನಾವು ಪ್ರತಿ ವರ್ಷ ಕಪ್ ಗೆದ್ದು ಕೊಡುವ ಗ್ಯಾರಂಟಿ ಇಲ್ಲ ಆದರೇ ಪ್ರತಿವರ್ಷ ನಾವು ನಮ್ಮ 110% ನೀಡುವ ಗ್ಯಾರಂಟಿ ಇದೆ. ನೀವು ಶ್ರಮಿಸಬಹುದಾದದ್ದು ಅಷ್ಟೆ ಎಂದು ಕೊಹ್ಲಿ ಹೇಳಿದ್ದಾರೆ. ಈ ಸೆಷನ್ ನಂತರ RCB ತಂಡ UPW ವಾರಿಯರ್ ವಿರುದ್ಧ WPL ನಲ್ಲಿ ಉತ್ತಮ ಪ್ರದರ್ಶನ ನೀಡಿ ಮೊದಲ ಗೆಲುವು ದಾಖಲಿಸಿದ್ದು ಎರಡು ಪಾಯಿಂಟ್ ಗಳನ್ನ ಗಳಿಸಿದೆ.
Virat Kohli : Virat Kohli inspired the RCB women’s team….