Virat Kohli | ವಿರಾಟ್ ಕ್ರಿಕೆಟ್ ಪಯಣಕ್ಕೆ 14 ವರ್ಷ
ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕಾಲಿಟ್ಟು 14 ವರ್ಷ
2008 ಆಗಸ್ಟ್ 18 ರಂದು ಟೀಂ ಇಂಡಿಯಾಗೆ ಎಂಟ್ರಿ
14 ಕ್ರಿಕೆಟ್ ಪಯಣದಲ್ಲಿ 70 ಅಂತರಾಷ್ಟ್ರೀಯ ಶತಕ
ಆಧುನಿಕ ಕ್ರಿಕೆಟ್ ನ ಕಿಂಗ್ ಎಂದೇ ಖ್ಯಾತಿ ಪಡೆದ ಕೊಹ್ಲಿ
ಆಧುನಿಕ ಕ್ರಿಕೆಟ್ ನ ಕಿಂಗ್ ಎಂದು ಕರೆಯಲ್ಪಡುವ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 14 ವರ್ಷ ಪೂರೈಸಿದ್ದಾರೆ.
2008 ಆಗಸ್ಟ್ 18 ರಂದು ವಿರಾಟ್ ಕೊಹ್ಲಿ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದರು. ಅವರು ಮೊದಲ ಅಂತರಾಷ್ಟ್ರೀಯ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಆಡಿದ್ದರು.
ವಿರಾಟ್ ಕೊಹ್ಲಿ ತಮ್ಮ 14 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕಿನಲ್ಲಿ 102 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. 49.53 ರ ಸರಾಸರಿಯಲ್ಲಿ 8074 ರನ್ ಳನ್ನು ಗಳಿಸಿದ್ದಾರೆ.

ಇನ್ನು ಏಕದಿನ ಕ್ರಿಕೆಟ್ ನಲ್ಲಿ 262 ಪಂದ್ಯಗಳಲ್ಲಿ 12344 ರನ್ ಗಳನ್ನು ಬಾರಿಸಿದ್ದಾರೆ. ಇದರಲ್ಲಿ 43 ಶತಕಗಳನ್ನು ಸಿಡಿಸಿದ್ದಾರೆ. ಇನ್ನು ಟಿ 20 ಕ್ರಿಕೆಟ್ ನಲ್ಲಿ 99 ಪಂದ್ಯಗಳನ್ನಾಡಿದ್ದು 3308 ರನ್ ಗಳನ್ನು ಬಾರಿಸಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ ಮೊದಲ ಅಂತರಾಷ್ಟ್ರೀಯ ಪಂದ್ಯದಲ್ಲಿ 21 ಎಸೆತಗಳನ್ನು ಎದುರಿಸಿ 12 ರನ್ ಗಳಿಸಿದ್ದರು. ಆ ಪಂದ್ಯದಲ್ಲಿ ಭಾರತ 146 ರನ್ ಗಳಿಗೆ ಆಲ್ ಔಟ್ ಆಗಿತ್ತು.








