Virat Kohli | ನಮ್ಮ ಹಾರ್ಟ್ ಬ್ರೇಕ್ ಆಯ್ತು ವಿರಾಟ್…!!
ಬೆಂಗಳೂರಿನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಪಿಂಕ್ ಬಾಲ್ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ನಿರಾಸೆ ಅನುಭವಿಸಿದರು.
ಕೊಹ್ಲಿ 48 ಎಸೆತಗಳಲ್ಲಿ ಕೇವಲ 23 ರನ್ ಗಳಿಸಿ ಪೆವಿಲಿಯನ್ ಸೇರಿದರು. ಭಾರತದ ಇನ್ನಿಂಗ್ಸ್‌ನಲ್ಲಿ ಧನಂಜಯ ಡಿಸಿಲ್ವಾ 23 ಓವರ್ ನಲ್ಲಿ ವಿರಾಟ್ ಕೊಹ್ಲಿ ಎಲ್ ಬಿ ಗೆ ವಿಕೆಟ್ ಒಪ್ಪಿಸಿದರು.
ಅಂಪೈರ್ ಔಟ್ ಎಂದು ಸೂಚಿಸುತ್ತಿದ್ದಂತೆ ಕ್ರೀಸ್ ನಲ್ಲಿದ್ದ ವಿರಾಟ್ ಕೊಹ್ಲಿ ಮುಖ ಬಾಡಿಯೋಯ್ತು. ಬೇಸರದಿಂದ ವಿರಾಟ್ ಕೊಹ್ಲಿ ಸ್ವಲ್ಪ ಸಮಯ ಕ್ರೀಸ್ ನಲ್ಲಿಯೇ ನಿಂತುಬಿಟ್ಟರು.
ಆ ಬಳಿಕ ನಿರಾಸೆಯಿಂದ ವಿರಾಟ್ ಕೊಹ್ಲಿ ಪೆವಿಯನ್ ನತ್ತ ಹೆಜ್ಜೆ ಹಾಕಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ನಡುವೆ ವಿರಾಟ್ ಗೆ ನೆಟ್ಟಿಗರು ಕೂಡ ಬೆಂಬಲ ಸೂಚಿಸುತ್ತಿದ್ದಾರೆ. ನಮ್ಮ ಹಾರ್ಟ್ ಬ್ರೇಕ್ ಆಗೋಯ್ತು.. ಬಾಲ್ ಆ ರೀತಿ ಟರ್ನ್ ಆಗುತ್ತೆ ಅಂತಾ ನಾವು ಅಂದುಕೊಂಡಿರಲಿಲ್ಲ ಎನ್ನುತ್ತಿದ್ದಾರೆ.
ಅಂದಹಾಗೆ ಬೆಂಗಳೂರಿನಲ್ಲಿ ಮ್ಯಾಚ್ ನಡೆಯುತ್ತಿರುವುದರಿಂದ ವಿರಾಟ್ ಕೊಹ್ಲಿ ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆಗಳಿವೆ. ವಿರಾಟ್ ಕೊಹ್ಲಿ ಹೇಳಿದಂತೆ ಬೆಂಗಳೂರು ಅವರಿಗೆ ತವರಿನಂತೆ ಅನಿಸುತ್ತದೆ. ಮುಖ್ಯವಾಗಿ ಆರ್ ಸಿಬಿಯಿಂದಾಗಿ ವಿರಾಟ್ ಕೂಡ ಮತ್ತು ಬೆಂಗಳೂರಿಗೂ ಬಿಡಿಸಲಾಗದ ಸಂಬಂಧವಿದೆ.