ವಿರಾಟ್ ಸುದೀರ್ಘ ಬ್ಯಾಟಿಂಗ್.. ದ್ರಾವಿಡ್ ಸಲಹೆ Virat saaksha tv
ಇದೇ ತಿಂಗಳ 26 ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಆರಂಭವಾಗಲಿದ್ದು. ಹರಿಣಗಳ ಬೇಟೆಗೆ ಟೀಂ ಇಂಡಿಯಾ ಸಜ್ಜಾಗುತ್ತಿದೆ. ಸದ್ಯ ಆಫ್ರಿಕಾದಲ್ಲಿ ಕ್ವಾರಂಟೈನ್ ಮುಗಿಸಿರುವ ಟೀಂ ಇಂಡಿಯಾ ಇಂದಿನಿಂದ ಪ್ರಾಕ್ಟೀಸ್ ಆರಂಭಸಿದೆ.
ಟೀಂ ಇಂಡಿಯಾ ಆಟಗಾರರು ಮೈದಾನದಲ್ಲಿ ಬೆವರಿಳಿಸುತ್ತಿರುವ ವಿಡಿಯೋವನ್ನು ಬಿಸಿಸಿಐ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದೆ.
ವಿಡಿಯೋದಲ್ಲಿ ಪ್ರಾಕ್ಟೀಸ್ ಸೆಷನ್ ಆರಂಭಿಸೋದಕ್ಕೂ ಮುನ್ನ ಆಟಗಾರರು ಜಾಗಿಂಗ್ ಮಾಡಿದ್ದಾರೆ.
ಇದೇ ಸಮಯದಲ್ಲಿ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡಿದ್ದು, ಹೆಚ್ ಕೋಚ್ ರಾಹುಲ್ ದ್ರಾವಿಡ್ ವಿರಾಟ್ ಗೆ ಕೆಲ ಸಲಹೆಗಳನ್ನು ನೀಡುತ್ತಿದ್ದಾರೆ.
ಇದಲ್ಲದೇ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ದೂರ ಉಳಿದಿದ್ದ ಬೂಮ್ರಾ, ಶಮಿ ನೆಟ್ಸ್ ನಲ್ಲಿ ಬೌಲಿಂಗ್ ಮಾಡಿದ್ದಾರೆ.
ಇವರ ಜೊತೆಗೆ ಇಶಾಂತ್ ಶರ್ಮ, ಹಿರಿಯ ಸ್ಪಿನ್ನರ್ ಅಶ್ವಿನ್ ಕೂಡ ಸುದೀರ್ಘವಾಗಿ ಬೌಲಿಂಗ್ ಮಾಡಿದ್ದಾರೆ.
ಈ ವಿಡಿಯೋವನ್ನು ಬಿಸಿಸಿಐ ಶೇರ್ ಮಾಡಿಕೊಂಡು ದಕ್ಷಿಣಾ ಆಫ್ರಿಕಾ ವಿರುದ್ಧದ ಪಂದ್ಯಕ್ಕಾಗಿ ಟೀಂ ಇಂಡಿಯಾ ಸಿದ್ದ ಎಂದು ಟ್ವೀಟ್ ಮಾಡಿದೆ.