RCBಯಿಂದ ವಿರಾಟ್ ಔಟ್.. ಸಂಜಯ್ ಬಂಗಾರ್ ಸ್ಪಷ್ಟನೆ..!!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ಮತ್ತೊಮ್ಮೆ ವಿಫಲರಾಗಿರೋದು ಗೊತ್ತಿರುವ ವಿಚಾರವೇ. ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಓಪನರ್ ಆಗಿ ಕಣಕ್ಕಿಳಿದಿದ್ದರು. ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಮೋಷನ್ ಪಡೆದರೂ ರನ್ ಗಳಿಸುವುರಲ್ಲಿ ವಿರಾಟ್ ಕೊಹ್ಲಿ ಮತ್ತೆ ವಿಫಲರಾದರು. ಮೊದಲ ಔವರ್ ನಲ್ಲಿ ಎರಡು ಬೌಂಡರಿಗಳನ್ನು ಬಾರಿಸಿದ ವಿರಾಟ್ ಕೊಹ್ಲಿ ಫಾರ್ಮ್ ಗೆ ಬಂದ ಸೂಚನೆ ನೀಡಿದರು. ಆದ್ರೆ ನಂತರದ ಔವರ್ ನಲ್ಲಿಯೇ ವಿರಾಟ್ ಕೊಹ್ಲಿ ಪ್ರಸಿದ್ಧ ಕೃಷ್ಣ ಬೌಲಿಂಗ್ ನಲ್ಲಿ ಪರಾಗ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು. ಇದರೊಂದಿಗೆ ವಿರಾಟ್ ಕೊಹ್ಲಿ 9 ರನ್ ಗಳಿಗೆ ಪೆವಿಲಿಯನ್ ಸೇರಿಕೊಂಡರು. ಇದಲ್ಲದೇ ಈ ಸೀಸನ್ ನಲ್ಲಿ ವಿರಾಟ್ ಕೊಹ್ಲಿ ಮೊದಲು ಮೂರನೇ ಕ್ರಮಾಂಕದಲ್ಲಿ 8 ಪಂದ್ಯಗಳನ್ನಾಡಿದ್ದಾರೆ. ಈ ಪೈಕಿ 17ರ ಸರಾಸರಿಯಲ್ಲಿ 119 ರನ್ ಕಲೆ ಹಾಕಿದ್ದಾರೆ. ಅಲ್ಲದೆ ಒಂದೇ ಪಂದ್ಯದಲ್ಲಿ 48 ರನ್ ಬಾರಿಸಿ ಮಿಂಚಿದ್ದಾರೆ. ಇವರ ಪ್ರಸಕ್ತ ಸಾಲಿನ ಸ್ಟ್ರೈಕ್ ರೇಟ್ ಸಹ 122.68 ಆಗಿದೆ. ಬೌಂಡರಿ ಸಿಕ್ಸರ್ ಗಳ ಚಿತ್ತಾರ ಬಿಡಿಸುತ್ತಿದ್ದ ಕೊಹ್ಲಿ ಈ ಬಾರಿ ಕೇವಲ 9 ಬೌಂಡರಿ, 2 ಸಿಕ್ಸರ್ ಬಾರಿಸಿದ್ದಾರೆ.
ಒಟ್ಟಾರೆ ಸೀಸನ್ ನಲ್ಲಿ ವಿರಾಟ್ ಕೊಹ್ಲಿ 9 ಪಂದ್ಯಗಳಲ್ಲಿ ಕೇವಲ 128 ರನ್ ಗಳಷ್ಟೆ ಬಾರಿಸಿದ್ದಾರೆ. ಹೀಗಾಗಿ ಅವರನ್ನ ತಂಡದಿಂದ ಕೈಬಿಡಬೇಕು ಅನ್ನೋ ವಾದ ಜೋರಾಗಿದೆ. ಬ್ಯಾಡ್ ಫಾರ್ಮ್ ನಿಂದ ರನ್ ಗಳಿಸಲು ಪರದಾಡುತ್ತಿರುವ ವಿರಾಟ್ ಕೊಹ್ಲಿ ಬದಲಿಗೆ ಯುವ ಆಟಗಾರರಿಗೆ ಮಣೆ ಹಾಕುಬೇಕು ಎಂದು ಸೋಶಿಯಲ್ ಮೀಡಿಯಾ ಕ್ರಿಕೆಟ್ ಪಂಡಿತರು ವಾದ ಮಾಡುತ್ತಿದ್ದಾರೆ.
ಈ ವಾದ ಜೋರಾಗುತ್ತಿದ್ದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಡ್ ಕೋಚ್ ಸಂಜಯ್ ಬಂಗಾರ್ ತುಟಿಬಿಚ್ಚಿದ್ದು, ವಿರಾಟ್ ಕೊಹ್ಲಿ ಅವರನ್ನ ತಂಡದಿಂದ ಹೊರಗಿಡುವ ಪ್ರಶ್ನೆ ಇಲ್ಲ ಎಂದು ಟೀಕಾಕಾರರಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ. ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಯಾವುದೇ ಆತಂಕಪಡುವ ಅವಶ್ಯಕತೆ ಇಲ್ಲ. ವಿರಾಟ್ ಕೊಹ್ಲಿ ಶ್ರೇಷ್ಠ ಕ್ರಿಕೆಟಿಗ. ಈ ಹಿಂದೆಯೂ ಇಂತಹ ಹಲವು ಏಳುಬೀಳುಗಳನ್ನು ವಿರಾಟ್ ಕಂಡಿದ್ದಾರೆ. ನಾನು ಕೊಹ್ಲಿಯನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಕೆಲವು ಪಂದ್ಯಗಳಲ್ಲಿ ಕಡಿಮೆ ರನ್ ಗಳಿಸಿದರೂ ಮುಂದಿನ ಪಂದ್ಯಗಳಲ್ಲಿ ಮುಗಿಬೀಳುವ ಸಾಧ್ಯತೆಗಳಿವೆ. ಈ ಮಾತ್ರಕ್ಕೆ ಅವರನ್ನ ತಂಡದಿಂದ ಕೈ ಬಿಡಬೇಕು ಅನ್ನೋದು ಸರಿಯಲ್ಲ. ಯಾರಿಗೆ ಗೊತ್ತು.. ಮುಂಬರುವ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ರನ್ ಗಳಿಸಿ ಪಂದ್ಯಗಳನ್ನ ಗೆಲ್ಲಿಸಿಕೊಡಬಹುದು. ಅವರ ಬ್ಯಾಟಿಂಗ್ ಬಗ್ಗೆ ನಮಗೆ ಯಾವುದೇ ಅನುಮಾನವಿಲ್ಲ. ಏಕೆಂದರೆ ಅಭ್ಯಾಸದ ವೇಳೆ ಕೊಹ್ಲಿ ಎಲ್ಲರಿಗಿಂತ ಹೆಚ್ಚು ಕಷ್ಟಪಡುತ್ತಿದ್ದಾರೆ. ಅವರ ಹೊಡೆತಗಳ ಆಯ್ಕೆಯಲ್ಲೂ ನಿಖರತೆ ಇರುತ್ತದೆ. ಆದರೆ ಕೆಲವು ತಪ್ಪುಗಳಿಂದಾಗಿ ಬ್ಯಾಟಿಂಗ್‌ನಲ್ಲಿ ಮಿಂಚಲು ಸಾಧ್ಯವಾಗುತ್ತಿಲ್ಲ ಎಂದು ಸಂಜಯ್ ಬಂಗಾರ್ ಹೇಳಿದ್ಧಾರೆ.
ಇನ್ನು ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಇದಕ್ಕೂ ಮೊದಲು ಇನ್ನಿಂಗ್ಸ್ ಆರಂಭಿಸಿದ ಅನುಜ್ ರಾವತ್ ಮುಂಬೈ ಇಂಡಿಯನ್ಸ್ ವಿರುದ್ಧ 66 ರನ್ ಹೊರತುಪಡಿಸಿ ಉಳಿದ ಆರು ಪಂದ್ಯಗಳಲ್ಲಿ 63 ರನ್ ಗಳಿಸಿದ್ದರು. ಕೊಹ್ಲಿಗೆ ಓಪನಿಂಗ್ ಮಾಡಿದ ಅನುಭವವಿದೆ. ಮುಂಬರುವ ಪಂದ್ಯಗಳಲ್ಲೂ ಮುಂದುವರಿಯುವ ಸಾಧ್ಯತೆ ಇದೆ. ಕೊಹ್ಲಿ ಹೊರತುಪಡಿಸಿದರೆ ಮ್ಯಾಕ್ಸ್ ವೆಲ್, ಕಾರ್ತಿಕ್ ಮತ್ತು ಶಹಬಾಜ್ ಅಹ್ಮದ್ ಫಾರ್ಮ್ ನಲ್ಲಿದ್ದಾರೆ. ಒಂದು ಪಂದ್ಯದಲ್ಲಿ ವಿಫಲರಾದ ಮಾತ್ರಕ್ಕೆ ಅವರನ್ನು ದೂಷಿಸುವ ಅಗತ್ಯವಿಲ್ಲ. ನಮ್ಮ ತಂಡ ಈಗ ಏಳನೇ ಕ್ರಮಾಂಕದವರೆಗಿನ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದೆ. ಇದು ನಮಗೆ ಶಕ್ತಿ ಎಂದು ನಾನು ಹೇಳಬಲ್ಲೆ ಎಂದಿದ್ದಾರೆ ಸಂಜಯ್.
Virat out of RCB .. Sanjay Bangar clarifies