ADVERTISEMENT
Friday, April 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

RCBಯಿಂದ ವಿರಾಟ್ ಔಟ್.. ಸಂಜಯ್ ಬಂಗಾರ್ ಸ್ಪಷ್ಟನೆ..!!

Mahesh M Dhandu by Mahesh M Dhandu
April 28, 2022
in Newsbeat, Sports, ಕ್ರಿಕೆಟ್
Virat out of RCB .. Sanjay Bangar clarifies saaksha tv

Virat out of RCB .. Sanjay Bangar clarifies saaksha tv

Share on FacebookShare on TwitterShare on WhatsappShare on Telegram

RCBಯಿಂದ ವಿರಾಟ್ ಔಟ್.. ಸಂಜಯ್ ಬಂಗಾರ್ ಸ್ಪಷ್ಟನೆ..!!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ಮತ್ತೊಮ್ಮೆ ವಿಫಲರಾಗಿರೋದು ಗೊತ್ತಿರುವ ವಿಚಾರವೇ. ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಓಪನರ್ ಆಗಿ ಕಣಕ್ಕಿಳಿದಿದ್ದರು. ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಮೋಷನ್ ಪಡೆದರೂ ರನ್ ಗಳಿಸುವುರಲ್ಲಿ ವಿರಾಟ್ ಕೊಹ್ಲಿ ಮತ್ತೆ ವಿಫಲರಾದರು. ಮೊದಲ ಔವರ್ ನಲ್ಲಿ ಎರಡು ಬೌಂಡರಿಗಳನ್ನು ಬಾರಿಸಿದ ವಿರಾಟ್ ಕೊಹ್ಲಿ ಫಾರ್ಮ್ ಗೆ ಬಂದ ಸೂಚನೆ ನೀಡಿದರು. ಆದ್ರೆ ನಂತರದ ಔವರ್ ನಲ್ಲಿಯೇ ವಿರಾಟ್ ಕೊಹ್ಲಿ ಪ್ರಸಿದ್ಧ ಕೃಷ್ಣ ಬೌಲಿಂಗ್ ನಲ್ಲಿ ಪರಾಗ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು. ಇದರೊಂದಿಗೆ ವಿರಾಟ್ ಕೊಹ್ಲಿ 9 ರನ್ ಗಳಿಗೆ ಪೆವಿಲಿಯನ್ ಸೇರಿಕೊಂಡರು. ಇದಲ್ಲದೇ ಈ ಸೀಸನ್ ನಲ್ಲಿ ವಿರಾಟ್ ಕೊಹ್ಲಿ ಮೊದಲು ಮೂರನೇ ಕ್ರಮಾಂಕದಲ್ಲಿ 8 ಪಂದ್ಯಗಳನ್ನಾಡಿದ್ದಾರೆ. ಈ ಪೈಕಿ  17ರ ಸರಾಸರಿಯಲ್ಲಿ 119 ರನ್ ಕಲೆ ಹಾಕಿದ್ದಾರೆ. ಅಲ್ಲದೆ ಒಂದೇ ಪಂದ್ಯದಲ್ಲಿ 48 ರನ್ ಬಾರಿಸಿ ಮಿಂಚಿದ್ದಾರೆ. ಇವರ ಪ್ರಸಕ್ತ ಸಾಲಿನ ಸ್ಟ್ರೈಕ್ ರೇಟ್ ಸಹ 122.68 ಆಗಿದೆ. ಬೌಂಡರಿ ಸಿಕ್ಸರ್ ಗಳ ಚಿತ್ತಾರ ಬಿಡಿಸುತ್ತಿದ್ದ ಕೊಹ್ಲಿ ಈ ಬಾರಿ ಕೇವಲ 9 ಬೌಂಡರಿ, 2 ಸಿಕ್ಸರ್ ಬಾರಿಸಿದ್ದಾರೆ.

Related posts

ಸಂವಿಧಾನದ ಹೆಸರಲ್ಲಿ ರಾಜಕೀಯ ಮಾಡಬೇಡಿ ಮುಸ್ಲಿಂ ಮೀಸಲಾತಿ ಅಸಾಧ್ಯ ಎಂದ ಅಮಿತ್ ಶಾ

ಸಂವಿಧಾನದ ಹೆಸರಲ್ಲಿ ರಾಜಕೀಯ ಮಾಡಬೇಡಿ ಮುಸ್ಲಿಂ ಮೀಸಲಾತಿ ಅಸಾಧ್ಯ ಎಂದ ಅಮಿತ್ ಶಾ

April 17, 2026
ಆಂಟಿ ಎಂದು ಕರೆಯುವ ಮುನ್ನ ನೂರು ಬಾರಿ ಯೋಚಿಸಿ: ಎರಡು ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್

ಆಂಟಿ ಎಂದು ಕರೆಯುವ ಮುನ್ನ ನೂರು ಬಾರಿ ಯೋಚಿಸಿ: ಎರಡು ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್

April 17, 2026

ಒಟ್ಟಾರೆ ಸೀಸನ್ ನಲ್ಲಿ ವಿರಾಟ್ ಕೊಹ್ಲಿ 9 ಪಂದ್ಯಗಳಲ್ಲಿ ಕೇವಲ 128 ರನ್ ಗಳಷ್ಟೆ ಬಾರಿಸಿದ್ದಾರೆ. ಹೀಗಾಗಿ ಅವರನ್ನ ತಂಡದಿಂದ ಕೈಬಿಡಬೇಕು ಅನ್ನೋ ವಾದ ಜೋರಾಗಿದೆ. ಬ್ಯಾಡ್ ಫಾರ್ಮ್ ನಿಂದ ರನ್ ಗಳಿಸಲು ಪರದಾಡುತ್ತಿರುವ ವಿರಾಟ್ ಕೊಹ್ಲಿ ಬದಲಿಗೆ ಯುವ ಆಟಗಾರರಿಗೆ ಮಣೆ ಹಾಕುಬೇಕು ಎಂದು ಸೋಶಿಯಲ್ ಮೀಡಿಯಾ ಕ್ರಿಕೆಟ್ ಪಂಡಿತರು ವಾದ ಮಾಡುತ್ತಿದ್ದಾರೆ.

Virat out of RCB .. Sanjay Bangar clarifies saaksha tv

ಈ ವಾದ ಜೋರಾಗುತ್ತಿದ್ದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಡ್ ಕೋಚ್ ಸಂಜಯ್ ಬಂಗಾರ್ ತುಟಿಬಿಚ್ಚಿದ್ದು,  ವಿರಾಟ್ ಕೊಹ್ಲಿ ಅವರನ್ನ ತಂಡದಿಂದ ಹೊರಗಿಡುವ ಪ್ರಶ್ನೆ ಇಲ್ಲ ಎಂದು ಟೀಕಾಕಾರರಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ. ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಯಾವುದೇ ಆತಂಕಪಡುವ ಅವಶ್ಯಕತೆ ಇಲ್ಲ.  ವಿರಾಟ್ ಕೊಹ್ಲಿ ಶ್ರೇಷ್ಠ ಕ್ರಿಕೆಟಿಗ. ಈ ಹಿಂದೆಯೂ ಇಂತಹ ಹಲವು ಏಳುಬೀಳುಗಳನ್ನು ವಿರಾಟ್ ಕಂಡಿದ್ದಾರೆ. ನಾನು ಕೊಹ್ಲಿಯನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಕೆಲವು ಪಂದ್ಯಗಳಲ್ಲಿ ಕಡಿಮೆ ರನ್ ಗಳಿಸಿದರೂ ಮುಂದಿನ ಪಂದ್ಯಗಳಲ್ಲಿ ಮುಗಿಬೀಳುವ ಸಾಧ್ಯತೆಗಳಿವೆ. ಈ ಮಾತ್ರಕ್ಕೆ ಅವರನ್ನ ತಂಡದಿಂದ ಕೈ ಬಿಡಬೇಕು ಅನ್ನೋದು ಸರಿಯಲ್ಲ. ಯಾರಿಗೆ ಗೊತ್ತು.. ಮುಂಬರುವ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ರನ್ ಗಳಿಸಿ ಪಂದ್ಯಗಳನ್ನ ಗೆಲ್ಲಿಸಿಕೊಡಬಹುದು. ಅವರ ಬ್ಯಾಟಿಂಗ್ ಬಗ್ಗೆ ನಮಗೆ ಯಾವುದೇ ಅನುಮಾನವಿಲ್ಲ. ಏಕೆಂದರೆ ಅಭ್ಯಾಸದ ವೇಳೆ ಕೊಹ್ಲಿ ಎಲ್ಲರಿಗಿಂತ ಹೆಚ್ಚು ಕಷ್ಟಪಡುತ್ತಿದ್ದಾರೆ. ಅವರ ಹೊಡೆತಗಳ ಆಯ್ಕೆಯಲ್ಲೂ ನಿಖರತೆ ಇರುತ್ತದೆ. ಆದರೆ ಕೆಲವು ತಪ್ಪುಗಳಿಂದಾಗಿ ಬ್ಯಾಟಿಂಗ್‌ನಲ್ಲಿ ಮಿಂಚಲು ಸಾಧ್ಯವಾಗುತ್ತಿಲ್ಲ ಎಂದು ಸಂಜಯ್ ಬಂಗಾರ್ ಹೇಳಿದ್ಧಾರೆ.

ಇನ್ನು ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಇದಕ್ಕೂ ಮೊದಲು ಇನ್ನಿಂಗ್ಸ್ ಆರಂಭಿಸಿದ ಅನುಜ್ ರಾವತ್ ಮುಂಬೈ ಇಂಡಿಯನ್ಸ್ ವಿರುದ್ಧ 66 ರನ್ ಹೊರತುಪಡಿಸಿ ಉಳಿದ ಆರು ಪಂದ್ಯಗಳಲ್ಲಿ 63 ರನ್ ಗಳಿಸಿದ್ದರು.  ಕೊಹ್ಲಿಗೆ ಓಪನಿಂಗ್ ಮಾಡಿದ ಅನುಭವವಿದೆ. ಮುಂಬರುವ ಪಂದ್ಯಗಳಲ್ಲೂ ಮುಂದುವರಿಯುವ ಸಾಧ್ಯತೆ ಇದೆ. ಕೊಹ್ಲಿ ಹೊರತುಪಡಿಸಿದರೆ ಮ್ಯಾಕ್ಸ್ ವೆಲ್, ಕಾರ್ತಿಕ್ ಮತ್ತು ಶಹಬಾಜ್ ಅಹ್ಮದ್ ಫಾರ್ಮ್ ನಲ್ಲಿದ್ದಾರೆ.  ಒಂದು ಪಂದ್ಯದಲ್ಲಿ  ವಿಫಲರಾದ ಮಾತ್ರಕ್ಕೆ ಅವರನ್ನು ದೂಷಿಸುವ ಅಗತ್ಯವಿಲ್ಲ.  ನಮ್ಮ ತಂಡ ಈಗ ಏಳನೇ ಕ್ರಮಾಂಕದವರೆಗಿನ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದೆ. ಇದು ನಮಗೆ ಶಕ್ತಿ ಎಂದು ನಾನು ಹೇಳಬಲ್ಲೆ ಎಂದಿದ್ದಾರೆ ಸಂಜಯ್.

  Virat out of RCB .. Sanjay Bangar clarifies

Tags: #Saaksha TVCricketIPLRCBvirat kohli
ShareTweetSendShare
Join us on:

Related Posts

ಸಂವಿಧಾನದ ಹೆಸರಲ್ಲಿ ರಾಜಕೀಯ ಮಾಡಬೇಡಿ ಮುಸ್ಲಿಂ ಮೀಸಲಾತಿ ಅಸಾಧ್ಯ ಎಂದ ಅಮಿತ್ ಶಾ

ಸಂವಿಧಾನದ ಹೆಸರಲ್ಲಿ ರಾಜಕೀಯ ಮಾಡಬೇಡಿ ಮುಸ್ಲಿಂ ಮೀಸಲಾತಿ ಅಸಾಧ್ಯ ಎಂದ ಅಮಿತ್ ಶಾ

by Shwetha
April 17, 2026
0

ನವದೆಹಲಿ ಲೋಕಸಭೆಯಲ್ಲಿ ನಿನ್ನೆ ನಡೆದ ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗಳ ಮೇಲಿನ ಸುದೀರ್ಘ ಚರ್ಚೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು...

ಆಂಟಿ ಎಂದು ಕರೆಯುವ ಮುನ್ನ ನೂರು ಬಾರಿ ಯೋಚಿಸಿ: ಎರಡು ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್

ಆಂಟಿ ಎಂದು ಕರೆಯುವ ಮುನ್ನ ನೂರು ಬಾರಿ ಯೋಚಿಸಿ: ಎರಡು ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್

by Shwetha
April 17, 2026
0

ಬೆಂಗಳೂರು ಅಥವಾ ಇತರ ನಗರಗಳಲ್ಲಿ ಪರಿಚಯವಿಲ್ಲದ ಮಹಿಳೆಯರನ್ನು ಅಥವಾ ಸಹೋದ್ಯೋಗಿಗಳನ್ನು ಆಂಟಿ ಎಂದು ಕರೆಯುವುದು ಹಲವರಿಗೆ ಅಭ್ಯಾಸವಾಗಿಬಿಟ್ಟಿದೆ. ಕೆಲವರು ಗೌರವದಿಂದ ಕರೆದರೆ, ಇನ್ನು ಕೆಲವರು ಗೇಲಿ ಮಾಡಲು...

ಪ್ರತ್ಯೇಕ ಪಹಣಿ (RTC) ಪಡೆಯಲು ಪೋಡಿ ಏಕೆ ಮುಖ್ಯ? ಪೋಡಿ ಇಲ್ಲದೆ ಜಮೀನು ಮಾರಲು ಸಾಧ್ಯವೇ?

ಪ್ರತ್ಯೇಕ ಪಹಣಿ (RTC) ಪಡೆಯಲು ಪೋಡಿ ಏಕೆ ಮುಖ್ಯ? ಪೋಡಿ ಇಲ್ಲದೆ ಜಮೀನು ಮಾರಲು ಸಾಧ್ಯವೇ?

by Shwetha
April 17, 2026
0

ಗ್ರಾಮೀಣ ಭಾಗದ ರೈತರಲ್ಲಿ ಜಮೀನಿನ ಹಕ್ಕು ಮತ್ತು ಗಡಿ ವಿವಾದಗಳು ಸರ್ವೇ ಸಾಮಾನ್ಯ. ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರವೇ ಪೋಡಿ. ಬಹುತೇಕ ರೈತರಿಗೆ ಪೋಡಿ ಎಂದರೆ ಏನು,...

ಯೋಗೇಶ್ ಗೌಡ ಹತ್ಯೆ ಪ್ರಕರಣ ವಿನಯ್ ಕುಲಕರ್ಣಿ ಸೇರಿ 17 ಮಂದಿ ದೋಷಿ ಪಾಪಪ್ರಜ್ಞೆಯಿಂದ ಸತ್ಯ ಬಿಚ್ಚಿಟ್ಟ ಮಾಫಿ ಸಾಕ್ಷಿ ಬಸವರಾಜ್ ಮುತ್ತಗಿ

ಯೋಗೇಶ್ ಗೌಡ ಹತ್ಯೆ ಪ್ರಕರಣ ವಿನಯ್ ಕುಲಕರ್ಣಿ ಸೇರಿ 17 ಮಂದಿ ದೋಷಿ ಪಾಪಪ್ರಜ್ಞೆಯಿಂದ ಸತ್ಯ ಬಿಚ್ಚಿಟ್ಟ ಮಾಫಿ ಸಾಕ್ಷಿ ಬಸವರಾಜ್ ಮುತ್ತಗಿ

by Shwetha
April 17, 2026
0

ಧಾರವಾಡದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣವು ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಭಾರೀ ಸಂಚಲನ ಸೃಷ್ಟಿಸಿದೆ. ಹಲವು ವರ್ಷಗಳಿಂದ ಕುತೂಹಲ ಕೆರಳಿಸಿದ್ದ ಈ...

ನಿಮ್ಮ ಪ್ಲಾನ್ ನೋಡಿ ಚಾಣಕ್ಯನೇ ಬೆಚ್ಚಿ ಬೀಳುತ್ತಿದ್ದ ಅಮಿತ್ ಶಾ ಗೆ ಪ್ರಿಯಾಂಕಾ ಗಾಂಧಿ ನೀಡಿದ ಖಡಕ್ ತಿರುಗೇಟು

ನಿಮ್ಮ ಪ್ಲಾನ್ ನೋಡಿ ಚಾಣಕ್ಯನೇ ಬೆಚ್ಚಿ ಬೀಳುತ್ತಿದ್ದ ಅಮಿತ್ ಶಾ ಗೆ ಪ್ರಿಯಾಂಕಾ ಗಾಂಧಿ ನೀಡಿದ ಖಡಕ್ ತಿರುಗೇಟು

by Shwetha
April 17, 2026
0

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಕುರಿತು ನಡೆದ ಚರ್ಚೆಯು ಕೇವಲ ರಾಜಕೀಯ ಸಂಘರ್ಷಕ್ಕೆ ಮಾತ್ರವಲ್ಲದೆ ಹಾಸ್ಯ ಮತ್ತು ಚುಚ್ಚುಮಾತಿನ ಪ್ರಸಂಗಗಳಿಗೂ ಸಾಕ್ಷಿಯಾಯಿತು. ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram