ViratKohli | ನಾಯಕ ಯಾವಾಗಲೂ ನಾಯಕನೇ : ಅಜಯ್ ಜಡೇಜಾ
ನವದೆಹಲಿ : ಆಟಗಾರರು ಬರುತ್ತಾರೆ, ಹೋಗುತ್ತಾರೆ. ಆದ್ರೆ ನಾಯಕ ಯಾವಾಗಲೂ ನಾಯಕನಾಗಿಯೇ ಉಳಿಯುತ್ತಾನೆ ಎಂದು ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರನ್ನು ಉದ್ದೇಶಿಸಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಜಯ್ ಜಡೇಜಾ ಅಭಿಪ್ರಾಯಪಟ್ಟಿದ್ದಾರೆ. viratkohli-leader-always-remains-a-leader ajay jadeja
ಭಾನುವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮೊದಲಿನ ಜೋಷ್ ನಲ್ಲಿ ಕಾಣಿಸಿಕೊಂಡಿದ್ದರು. ಈ ಸಂಬಂಧ ಕ್ರಿಕ್ ಬಜ್ ಜೊತೆ ಮಾತನಾಡಿದ ಜಡೇಜಾ, ನಾಯಕತ್ವ ತೊರೆದ ಮಾತ್ರಕ್ಕೆ ವಿರಾಟ್ ಕೊಹ್ಲಿ ಮೂಲೆಗುಂಪಾಗುವುದಿಲ್ಲ.
ಭಾರತ ತಂಡದಲ್ಲಿ ಸ್ಥಾನ ಪಡೆದ ಆರಂಭದ ದಿನಗಳಿಂದಲೂ ಅವರಲ್ಲಿನ ನಾಯಕತ್ವದ ಸಾಮರ್ಥ್ಯವನ್ನು ನೋಡುತ್ತಿದ್ದೇವೆ.
ವಿರಾಟ್ ಕೊಹ್ಲಿ ನಾಯಕರಾಗಿ ಆಯ್ಕೆಯಾದ ಕೊನೇ ಬೆಂಚ್ ನವರೆನಲ್ಲ. ನಾಯಕರಾಗಿಲ್ಲದ ಸಂದರ್ಭದಲ್ಲಿಯೂ ವಿರಾಟ್ ಕೊಹ್ಲಿ ನಾಯಕತ್ವದ ಗುಣಗಳನ್ನು ಹೊಂದಿದ್ದರು.
2011 ರಲ್ಲಿ ಭಾರತ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಹೆಗಲ ಮೇಲೆ ಎತ್ತಿಕೊಳ್ಳುವಂತೆ ಯಾರೋಬ್ಬರು ವಿರಾಟ್ ಗೆ ಹೇಳಿರಲಿಲ್ಲ. ಕೊಹ್ಲಿ ಯಾವಾಗಲೂ ನಾಯಕರಾಗಿರುತ್ತಾರೆ ಎಂದು ಅಜಯ್ ಹೇಳಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ತಮಗೆ ತಾವೇ ತಡೆಯೊಡ್ಡಿಕೊಂಡಿದ್ದಾರೆಯೇ ಎಂಬ ಬಗ್ಗೆ ಅನುಮಾನ ನನಗಿದ್ದು, ಅವರ ಮನಸ್ಥಿತಿಯೇ ಅವರನ್ನ ಯಶಸ್ಸಿನತ್ತ ಮುನ್ನಡೆಸಿದೆ.
ಈಗ ಬೇರೆ ಯಾರಿಂದಲೋ ಆಯ್ಕೆಯಾದ ಐವರು, ವಿರಾಟ್ ನಾಯಕನಲ್ಲ ಎಂದು ಹೇಳಬಹುದು. ಆಟಗಾರರು ಮತ್ತು ಆಯ್ಕೆಗಾರರು ಬರ್ತಾರೆ, ಹೋಗ್ತಾರೆ. ಆದ್ರೆ ನಾಯಕ ಯಾವಾಗಲೂ ನಾಯಕನಾಗಿಯೇ ಉಳಿಯುತ್ತಾನೆ ಎಂದಿದ್ದಾರೆ ಅಜಯ್ ಜಡೇಜಾ.