ನಿರಾಸೆಯೊಂದಿಗೆ ಚುಟುಕು ಕ್ರಿಕೆಟ್ ನಾಯಕತ್ವಕ್ಕೆ ವಿದಾಯ ಹೇಳಿದ ಕೊಹ್ಲಿ

1 min read

ನಿರಾಸೆಯೊಂದಿಗೆ ಚುಟುಕು ಕ್ರಿಕೆಟ್ ನಾಯಕತ್ವಕ್ಕೆ ವಿದಾಯ ಹೇಳಿದ ಕೊಹ್ಲಿ

ವಿಶ್ವಕಪ್ ಗೆಲ್ಲುವ ಮೂಲಕ ಚುಟುಕು ಕ್ರಿಕೆಟ್ ನಾಯಕತ್ವಕ್ಕೆ ವಿದಾಯ ಹೇಳಬೇಕೆಂಬ ವಿರಾಟ್ ಕನಸು ನನಸಾದೆ ಉಳಿದಿದೆ.. ವಿರಾಟ್ ಕೊನೆಯ ನಾಯಕತ್ವದಲ್ಲಿ ನಮೀಬಿಯ ದೇಶದ ವಿರುದ್ಧ ಗೆದ್ದರು ಸೆಮಿಫೈನಲ್ ಗೆ ಏರುವಲ್ಲಿ ಭಾರತ ವಿಫಲವಾಯಿತು. ಈ ಮೂಲಕ ಪಂದ್ಯ ಗೆದ್ದರೂ ನಿರಾಸೆಯೊಂದಿಗೆ ವಿರಾಟ್ ನಾಯಕತ್ವಕ್ಕೆ ವಿದಾಯ ಹೇಳಬೇಕಿದೆ.

SENA ರಾಷ್ಟ್ರಗಳಲ್ಲಿ  T20I ಸರಣಿಗಳನ್ನು ಗೆದ್ದ ಏಕೈಕ ಭಾರತೀಯ ನಾಯಕ ಎಂಬ ದಾಖಲೆ ಕೂಡ ಕೊಹ್ಲಿ ಹೆಸರಿನಲ್ಲಿದೆ. ಇಂಗ್ಲೆಂಡ್  ದಕ್ಷಿಣ ಆಫ್ರಿಕಾ  ನ್ಯೂಜಿಲೆಂಡ್  ಮತ್ತು ಆಸ್ಟ್ರೇಲಿಯಾ  ವಿರುದ್ದ ಕೊಹ್ಲಿ ನಾಯಕತ್ವದಲ್ಲಿ ಮಾತ್ರ ಟೀಮ್ ಇಂಡಿಯಾ ಸರಣಿ ಗೆದ್ದಿತ್ತು.

ಹಾಗೆಯೇ ಟಿ20 ತಂಡ ನಾಯಕನಾಗಿ ವೇಗವಾಗಿ 1 ಸಾವಿರ ರನ್ ಪೂರೈಸಿದ ದಾಖಲೆ ಕೂಡ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ 30 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇನ್ನು ಒಟ್ಟು 94 ಟಿ20 ಪಂದ್ಯಗಳನ್ನಾಡಿರುವ ಕೊಹ್ಲಿ 3227 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್​ಗಳಿಸಿದ ಬ್ಯಾಟರ್ ಎಂಬ ದಾಖಲೆಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ನಾಯಕನ ಪಟ್ಟದಲ್ಲಿಯೇ ಹಲವು ದಾಖಲೆಗಳನ್ನ ಬರೆದ ಕೊಹ್ಲಿ, ಐ ಸಿ ಸಿ ನಡೆಸುವ ಪ್ರತಿಷ್ಟಿತ ಟೂರ್ನಿಗಳಲ್ಲಿ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ ಎನ್ನುವುದು ಮಾತ್ರ ಕಾಡುತ್ತಿರುತ್ತದೆ.

ವರ್ಷಾಂತ್ಯಕ್ಕೆ ಕ್ರಿಕೆಟ್ ಸಂಬಂಧಿಸಿದ 2 ಸಿನಿಮಾಗಳು ತೆರೆಗೆ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd