ADVERTISEMENT
Thursday, July 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಕ್ರಿಕೆಟ್

ವಿಜಯ್ ಹಜಾರೆ ಅಖಾಡದಲ್ಲಿ ವಿರಾಟ್ ಆರ್ಭಟ: ಸಚಿನ್ ತೆಂಡೂಲ್ಕರ್ ದಾಖಲೆ ಧೂಳಿಪಟ

Virat's triumph at Vijay Hazare Stadium: Sachin Tendulkar's record shattered

Shwetha by Shwetha
December 25, 2025
in ಕ್ರಿಕೆಟ್, Newsbeat, Sports, State, ಕ್ರೀಡೆ, ಬೆಂಗಳೂರು, ರಾಜ್ಯ
Share on FacebookShare on TwitterShare on WhatsappShare on Telegram

ಬೆಂಗಳೂರು: ಬರೋಬ್ಬರಿ 15 ವರ್ಷಗಳ ಸುದೀರ್ಘ ಅವಧಿಯ ಬಳಿಕ ದೇಶೀಯ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟ ರನ್ ಮೆಷಿನ್ ವಿರಾಟ್ ಕೊಹ್ಲಿ, ತಮ್ಮ ಬ್ಯಾಟಿಂಗ್ ವೈಭವವನ್ನು ಪ್ರದರ್ಶಿಸುವ ಮೂಲಕ ಅಭಿಮಾನಿಗಳಿಗೆ ರಸದೌತಣ ನೀಡಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಆಂಧ್ರಪ್ರದೇಶದ ವಿರುದ್ಧ ಕಣಕ್ಕಿಳಿದ ಕೊಹ್ಲಿ, ಕೇವಲ ಶತಕ ಸಿಡಿಸಿ ಮಿಂಚಿದ್ದಲ್ಲದೆ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಹೆಸರಲ್ಲಿದ್ದ ಬೃಹತ್ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಕ್ರಿಕೆಟ್ ದೇವರ ದಾಖಲೆ ಅಳಿಸಿದ ಚೇಸಿಂಗ್ ಕಿಂಗ್

Related posts

bhagavad-gita-life-lessons-kannada-motivation

Astro- ಜೀವನದಲ್ಲಿ ಭರವಸೆಯ ನಂಬಿಕೆ ಕಳೆದುಕೊಂಡಾಗ ಧೈರ್ಯ ತುಂಬುವ ಭಗವದ್ಗೀತೆಯ 5 ಅಮೂಲ್ಯ ಮಾತುಗಳು..!

July 29, 2026
sathyanarayana-para-athletics-coach-success-story

ಅಂದು ಹೂ ಮಾರುತ್ತಿದ್ದ ಕೈಗಳಿಂದ ಇಂದು ಭಾರತಾಂಬೆಯ ಕೊರಳಿಗೆ ಪದಕಗಳ ಹಾರ..! ವಿಶೇಷ ಚೇತನ ಕ್ರೀಡಾಪಟುಗಳ ಬದುಕಿಗೆ ಬೆಳಕಾದ ” ಸತ್ಯ ” ಸಾಧನೆಯ ಯಶೋಗಾಥೆ..!

July 29, 2026

ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್‌ಗೆ ಇಳಿಯುತ್ತಿದ್ದಂತೆ ಇತಿಹಾಸ ನಿರ್ಮಾಣವಾಯಿತು. ತಮ್ಮ ಇನಿಂಗ್ಸ್‌ನ ಮೊದಲ ರನ್ ಗಳಿಸುತ್ತಿದ್ದಂತೆಯೇ, ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲಿ 16,000 ರನ್ ಪೂರೈಸಿದ ಭಾರತದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆದರೆ ಇಲ್ಲಿ ಪ್ರಮುಖವಾದ ಸಂಗತಿಯೆಂದರೆ ಅವರು ಈ ಮೈಲಿಗಲ್ಲು ತಲುಪಿದ ವೇಗ ಮತ್ತು ಕಾಯ್ದುಕೊಂಡಿರುವ ಸರಾಸರಿ.

ಈ ಹಿಂದೆ ಸಚಿನ್ ತೆಂಡೂಲ್ಕರ್ ಅವರು ಲಿಸ್ಟ್ ಎ ಕ್ರಿಕೆಟ್‌ನಲ್ಲಿ 16 ಸಾವಿರ ರನ್ ಗಳಿಸಿದವರ ಪೈಕಿ ಅತ್ಯುತ್ತಮ ಸರಾಸರಿ ಹೊಂದಿದ ಬ್ಯಾಟರ್ ಆಗಿದ್ದರು. ಇದೀಗ ಆ ಕಿರೀಟ ವಿರಾಟ್ ಮುಡಿಗೇರಿದೆ. ಸಚಿನ್ ತೆಂಡೂಲ್ಕರ್ ಅವರು 16 ಸಾವಿರ ರನ್‌ಗಳ ಗಡಿಯನ್ನು ತಲುಪಲು 391 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರೆ, ವಿರಾಟ್ ಕೊಹ್ಲಿ ಕೇವಲ 330 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡುವ ಮೂಲಕ ಅತಿ ವೇಗವಾಗಿ ಈ ಮೈಲಿಗಲ್ಲು ತಲುಪಿದ ವಿಶ್ವದಾಖಲೆ ಬರೆದಿದ್ದಾರೆ.

ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಸರಾಸರಿಯ ಸರದಾರ

ವಿಶ್ವ ಕ್ರಿಕೆಟ್‌ನಲ್ಲಿ ಲಿಸ್ಟ್ ಎ ಮಾದರಿಯಲ್ಲಿ 16,000 ಕ್ಕೂ ಹೆಚ್ಚು ರನ್ ಗಳಿಸಿರುವ 9 ಮಂದಿ ದಿಗ್ಗಜ ಆಟಗಾರರ ಪಟ್ಟಿಯಲ್ಲಿ 50 ಕ್ಕಿಂತ ಹೆಚ್ಚು ಸರಾಸರಿ ಹೊಂದಿರುವ ವಿಶ್ವದ ಏಕೈಕ ಆಟಗಾರ ವಿರಾಟ್ ಕೊಹ್ಲಿ ಎಂಬುದು ಅವರ ಶ್ರೇಷ್ಠತೆಗೆ ಸಾಕ್ಷಿಯಾಗಿದೆ.

ಕೊಹ್ಲಿ ಪ್ರಸ್ತುತ 57.34ರ ಸರಾಸರಿ ಹೊಂದಿದ್ದರೆ, ಎರಡನೇ ಸ್ಥಾನದಲ್ಲಿರುವ ಸಚಿನ್ ತೆಂಡೂಲ್ಕರ್ 45.54 ಸರಾಸರಿ ಹೊಂದಿದ್ದಾರೆ. ಕುಮಾರ್ ಸಂಗಕ್ಕಾರ, ವಿವ್ ರಿಚರ್ಡ್ಸ್ ಮತ್ತು ರಿಕಿ ಪಾಂಟಿಂಗ್ ಅವರಂತಹ ದಂತಕಥೆಗಳನ್ನೂ ಹಿಂದಿಕ್ಕಿ ಕೊಹ್ಲಿ ಅಗ್ರಸ್ಥಾನದಲ್ಲಿ ವಿರಾಜಮಾನರಾಗಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲೂ 8 ಸಾವಿರದಿಂದ 14 ಸಾವಿರದವರೆಗಿನ ರನ್ ಮೈಲಿಗಲ್ಲುಗಳನ್ನು ಅತಿ ವೇಗವಾಗಿ ಕ್ರಮಿಸಿದ ಕೀರ್ತಿ ಕೊಹ್ಲಿಗಿದೆ.

ಶತಕದೊಂದಿಗೆ ದಿಲ್ಲಿಗೆ ಗೆಲುವು ತಂದುಕೊಟ್ಟ ವಿರಾಟ್

ಆಂಧ್ರಪ್ರದೇಶ ನೀಡಿದ್ದ 299 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಿಲ್ಲಿ ತಂಡಕ್ಕೆ ವಿರಾಟ್ ಕೊಹ್ಲಿ ಆಸರೆಯಾದರು. ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಕೊಹ್ಲಿ, ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು. ಕೇವಲ 100 ಎಸೆತಗಳನ್ನು ಎದುರಿಸಿದ ಅವರು 14 ಆಕರ್ಷಕ ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 131 ರನ್ ಸಿಡಿಸಿ ಔಟಾದರು.

ಇವರಿಗೆ ಉತ್ತಮ ಸಾಥ್ ನೀಡಿದ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ 44 ಎಸೆತಗಳಲ್ಲಿ 74 ರನ್ ಸಿಡಿಸಿದರೆ, ನಿತೀಶ್ ರಾಣಾ 56 ಎಸೆತಗಳಲ್ಲಿ 77 ರನ್ ಬಾರಿಸಿದರು. ಕೊಹ್ಲಿ ಎರಡನೇ ವಿಕೆಟ್‌ಗೆ ಪ್ರಿಯಾಂಶ್ ಜೊತೆ 113 ರನ್ ಮತ್ತು ಮೂರನೇ ವಿಕೆಟ್‌ಗೆ ನಿತೀಶ್ ರಾಣಾ ಜೊತೆ 159 ರನ್‌ಗಳ ಜೊತೆಯಾಟವಾಡಿ ತಂಡದ ಗೆಲುವನ್ನು ಸುಲಭಗೊಳಿಸಿದರು. ದಿಲ್ಲಿ ತಂಡ ಇನ್ನೂ 12.2 ಓವರ್‌ಗಳು ಬಾಕಿ ಇರುವಂತೆಯೇ 6 ವಿಕೆಟ್ ನಷ್ಟಕ್ಕೆ 300 ರನ್ ಗಳಿಸಿ ಭರ್ಜರಿ ಜಯ ಸಾಧಿಸಿತು.

ಆಂಧ್ರ ಪರ ರಿಕಿ ಭೂಯಿ ಏಕಾಂಗಿ ಹೋರಾಟ, ಸಿಮರ್‌ಜೀತ್‌ಗೆ ಒಲಿದ ಪಂದ್ಯಶ್ರೇಷ್ಠ

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಆಂಧ್ರಪ್ರದೇಶ ತಂಡಕ್ಕೆ ರಿಕಿ ಭೂಯಿ ಆಸರೆಯಾದರು. 105 ಎಸೆತಗಳಲ್ಲಿ 122 ರನ್ ಸಿಡಿಸುವ ಮೂಲಕ ತಂಡ ಗೌರವಯುತ ಮೊತ್ತ ಕಲೆಹಾಕಲು ಕಾರಣರಾದರು. ಆದರೆ ದಿಲ್ಲಿಯ ವೇಗಿ ಸಿಮರ್ ಜೀತ್ ಸಿಂಗ್ ಅವರ ಮಾರಕ ದಾಳಿಗೆ (54 ಕ್ಕೆ 5 ವಿಕೆಟ್) ಆಂಧ್ರ ತತ್ತರಿಸಿತು. ಅಂತಿಮವಾಗಿ 5 ವಿಕೆಟ್ ಪಡೆದ ಸಿಮರ್ ಜೀತ್ ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್

ಆಂಧ್ರ ಪ್ರದೇಶ: 50 ಓವರ್‌ಗಳಲ್ಲಿ 298/8
(ರಿಕಿ ಭೂಯಿ 122, ಶೇಖ್ ರಶೀದ್ 31, ಸಿಮರ್ ಜೀತ್ ಸಿಂಗ್ 5/54, ಪ್ರಿನ್ಸ್ ಯಾದವ್ 3/50)

ದಿಲ್ಲಿ: 37.4 ಓವರ್‌ಗಳಲ್ಲಿ 300/6
(ವಿರಾಟ್ ಕೊಹ್ಲಿ 131, ನಿತೀಶ್ ರಾಣಾ 77, ಪ್ರಿಯಾಂಶ್ ಆರ್ಯ 74, ಹೇಮಂತ್ ರೆಡ್ಡಿ 2/6)

ಫಲಿತಾಂಶ: ದಿಲ್ಲಿ ತಂಡಕ್ಕೆ 4 ವಿಕೆಟ್‌ಗಳ ಭರ್ಜರಿ ಜಯ.

ShareTweetSendShare
Join us on:

Related Posts

bhagavad-gita-life-lessons-kannada-motivation

Astro- ಜೀವನದಲ್ಲಿ ಭರವಸೆಯ ನಂಬಿಕೆ ಕಳೆದುಕೊಂಡಾಗ ಧೈರ್ಯ ತುಂಬುವ ಭಗವದ್ಗೀತೆಯ 5 ಅಮೂಲ್ಯ ಮಾತುಗಳು..!

by admin
July 29, 2026
0

ಪ್ರತಿಯೊಬ್ಬರ ನಿಜ ಜೀವನದ ಬದುಕಿನಲ್ಲೂ ಎಲ್ಲವನ್ನೂ ಕಳೆದುಕೊಂಡಂತೆ ಭಾಸವಾಗುವ ಒಂದು ಕ್ಷಣ ಬಂದೇ ಬರುತ್ತದೆ. ದುಃಖಗಳು ಅಂತ್ಯವಿಲ್ಲದಂತೆ ಕಾಣುತ್ತವೆ ಮತ್ತು ತೊಂದರೆಗಳು ಒಂದರ ನಂತರ ಒಂದರಂತೆ ಬರುತ್ತಲೇ...

sathyanarayana-para-athletics-coach-success-story

ಅಂದು ಹೂ ಮಾರುತ್ತಿದ್ದ ಕೈಗಳಿಂದ ಇಂದು ಭಾರತಾಂಬೆಯ ಕೊರಳಿಗೆ ಪದಕಗಳ ಹಾರ..! ವಿಶೇಷ ಚೇತನ ಕ್ರೀಡಾಪಟುಗಳ ಬದುಕಿಗೆ ಬೆಳಕಾದ ” ಸತ್ಯ ” ಸಾಧನೆಯ ಯಶೋಗಾಥೆ..!

by admin
July 29, 2026
0

ಅಂದು ಹೂ ಮಾರುತ್ತಿದ್ದ ಕೈಗಳಿಂದ ಇಂದು ಭಾರತಾಂಬೆಯ ಕೊರಳಿಗೆ ಪದಕಗಳ ಹಾರ..! ವಿಶೇಷ ಚೇತನ ಕ್ರೀಡಾಪಟುಗಳ ಬದುಕಿಗೆ ಬೆಳಕಾದ " ಸತ್ಯ " ಸಾಧನೆಯ ಯಶೋಗಾಥೆ..! ಸರಿ...

saransh-jain-test-call-up-india-srilanka-2026

Teamindia- ತಂದೆಯ ಕನಸನ್ನು ನನಸು ಮಾಡಿರುವ 33ರ ಹರೆಯದ ಸರನ್ಶ್..!

by admin
July 29, 2026
0

"ನೀನು ಇನ್ನೂ ಚೆನ್ನಾಗಿ ಆಡಿದ್ರೆ ನಾನು ಬೇಗ ಗುಣಮುಖನಾಗುತ್ತೇನೆ". ಇದು ಕ್ಯಾನ್ಸರ್‍ನಿಂದ ಬಳಲುತ್ತಿದ್ದ ತಂದೆ ತನ್ನ ಮಗನಿಗೆ ಬರೆದಿರುವ ಕೈಪಿಡಿಯ ಬರಹ. ತಂದೆಯ ಆಸೆಯಂತೆ ಮಗ ಇಂದು...

2ನೇ ಸಚಿವರ ಪಟ್ಟಿಯಲ್ಲಿ ನನ್ನ ಹೆಸರು ಇರಬಹುದು: ಜಮೀರ್ ಖಾನ್

2ನೇ ಸಚಿವರ ಪಟ್ಟಿಯಲ್ಲಿ ನನ್ನ ಹೆಸರು ಇರಬಹುದು: ಜಮೀರ್ ಖಾನ್

by Shwetha
July 29, 2026
0

ಮಾಜಿ ಸಚಿವ ಜಮೀರ್ ಖಾನ್ ಅವರು, ಸಚಿವ ಸಂಪುಟ ವಿಸ್ತರಣೆಯ ಎರಡನೇ ಪಟ್ಟಿಯಲ್ಲಿ ತಮ್ಮ ಹೆಸರು ಇರಬಹುದು ಎಂಬ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೊದಲ...

ಇದು ನೇರ ಚಾರಿತ್ರ್ಯ ವಧೆ: ಪ್ರಲ್ಹಾದ್ ಜೋಶಿ ವಿರುದ್ಧ ಸುಳ್ಳು ಹೇಳಿಕೆ ನೀಡಿದ ಪ್ರಿಯಾಂಕಾ ಗಾಂಧಿ- ಕ್ಷಮೆಯಾಚನೆಗೆ ಪಟ್ಟು ಹಿಡಿದ ಪ್ರಲ್ಹಾದ್ ಜೋಶಿ

ಇದು ನೇರ ಚಾರಿತ್ರ್ಯ ವಧೆ: ಪ್ರಲ್ಹಾದ್ ಜೋಶಿ ವಿರುದ್ಧ ಸುಳ್ಳು ಹೇಳಿಕೆ ನೀಡಿದ ಪ್ರಿಯಾಂಕಾ ಗಾಂಧಿ- ಕ್ಷಮೆಯಾಚನೆಗೆ ಪಟ್ಟು ಹಿಡಿದ ಪ್ರಲ್ಹಾದ್ ಜೋಶಿ

by Shwetha
July 29, 2026
0

ನವದೆಹಲಿ: ಲೋಕಸಭಾ ಅಧಿವೇಶನದಲ್ಲಿ ನಿನ್ನೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರೀ ವಾಕ್ಸಮರ ನಡೆದಿದೆ. ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ಕಾಂಗ್ರೆಸ್ ಸಂಸದೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram