Jaiswal : ಯಶಸ್ವಿ ಜೈಸ್ವಾಲ್ ಬಗ್ಗೆ ಸೆಹ್ವಾಗ್ ಹೇಳಿದ್ದೇನು..?
ಈ ಬಾರಿಯ ಐಪಿಎಲ್ ಕಪ್ ಗೆಲ್ಲುವ ಗುರಿ ಹೊಂದಿರುವ ರಾಜಸ್ಥಾನ್ ರಾಯಲ್ಸ್ ತಂಡ ಲೀಗ್ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಶುಕ್ರವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಸಿಎಸ್ ಕೆ ವಿರುದ್ಧ ಐದು ವಿಕೆಟ್ ಗಳಿಂದ ಜಯ ಸಾಧಿಸಿದ ರಾಜಸ್ಥಾನ, ಸುಧಾರಿತ ರನ್ ರೇಟ್ ನೊಂದಿಗೆ ಎರಡನೇ ಸ್ಥಾನ ಪಡೆದು ಪ್ಲೇ ಆಫ್ ಗೆ ಲಗ್ಗೆ ಇಟ್ಟಿದೆ. ಕ್ವಾಲಿಫೈಯರ್-1 ಮೇ 24 ರಂದು ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್‌ಗೆ ಲಗ್ಗೆ ಇಡಲಿದೆ.
CSK ವಿರುದ್ಧದ ಪಂದ್ಯದಲ್ಲಿ ಫಾರ್ಮ್‌ನಲ್ಲಿದ್ದ ಜಾಸ್ ಬಟ್ಲರ್ ಮತ್ತು ನಾಯಕ ಸಂಜು ಸ್ಯಾಮ್ಸನ್ ಚೇಸ್ ಮಾಡಲು ವಿಫಲರಾದರು. ಈ ಹಂತದಲ್ಲಿ ಯುವ ಆರಂಭಿಕ ಜೈಸ್ವಾಲ್ ನಿರ್ಣಾಯಕ ಇನ್ನಿಂಗ್ಸ್ ಆಡಿದರು. ರನ್ ಗಳಿಸುವ ಕಷ್ಟದ ಹಂತದಲ್ಲಿ ಗುಣಮಟ್ಟದ ಇನ್ನಿಂಗ್ಸ್‌ನಿಂದ ಯಶಸ್ವಿ 44 ಎಸೆತಗಳಲ್ಲಿ 8 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 59 ರನ್ ಗಳಿಸಿದರು. ಈ ಹಿನ್ನಲೆಯಲ್ಲಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಜೈಸ್ವಾಲ್ ಬಗ್ಗೆ ಕುತೂಹಲಕಾರಿ ಮಾತುಗಳನ್ನಾಡಿದ್ದಾರೆ.
“ಈ ಋತುವಿನಲ್ಲಿ ಬಟ್ಲರ್ ಮತ್ತು ಸ್ಯಾಮ್ಸನ್ ಅನೇಕ ಪಂದ್ಯಗಳಲ್ಲಿ ಉತ್ತಮ ಇನ್ನಿಂಗ್ಸ್ ಆಡಿದ್ದಾರೆ. ಒಂದು ಅವರು ವಿಫಲವಾದರೆ ಆ ಜವಾಬ್ದಾರಿಯನ್ನು ಮತ್ತೊಬ್ಬರು ತೆಗೆದುಕೊಳ್ಳಬೇಕಾಗುತ್ತದೆ. ಜೈಶ್ವಾಲ್ ಮತ್ತು ಅಶ್ವಿನ್ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲೂ ಇದೇ ರೀತಿ ಮಾಡಿದ್ದಾರೆ. ಯಶಸ್ವಿ ಜೈಸ್ವಾಲ್ ಬಟ್ಲರ್ ಸ್ಯಾಮ್ಸನ್‌ಗಿಂತ ಉತ್ತಮವಾಗಿ ಕಾಣುತ್ತಿದ್ದರು. ಇಬ್ಬರು ಪ್ರಮುಖ ಬ್ಯಾಟ್ಸ್‌ಮನ್‌ಗಳು ಔಟಾದ ನಂತರ ಜೈಶ್ವಾಲ್ ಬ್ಯಾಟಿಂಗ್‌ನಲ್ಲಿ ಸ್ವಲ್ಪ ನಿಧಾನವಾದರು. ಆ ಸಮಯದಲ್ಲಿ ಅದು ತುಂಬಾ ಅಗತ್ಯವಾಗಿತ್ತು. ಏಕೆಂದರೆ ರಾಜಸ್ಥಾನದಲ್ಲಿ ಧೋನಿಯಂತಹ ಫಿನಿಶರ್ ಇಲ್ಲ. ಅದೃಷ್ಟವಶಾತ್ ಅಶ್ವಿನ್ ಆ ಜವಾಬ್ದಾರಿ ನಿರ್ವಹಿಸಿದರು. ಒತ್ತಡದಲ್ಲಿ ಬ್ಯಾಟ್ ಬೀಸಿದ ಜೈಶ್ವಾಲ್ ಅವರ ಅಮೋಘ ಪ್ರದರ್ಶನವನ್ನು ಮೆಚ್ಚಲೇಬೇಕು.
ಜೈಶ್ವಾಲ್ ಅಶ್ವಿನ್ ಜೊತೆ ಆಟ ಮುಗಿಸಿದ್ದರೆ ಖುಷಿಯಾಗುತ್ತಿತ್ತು. ಈ ಸಂದರ್ಭದಲ್ಲಿ ನಾನು ಜೈಶ್ವಾಲ್ ಗೆ ಒಂದು ಸಲಹೆಯನ್ನು ನೀಡಲು ಬಯಸುತ್ತೇನೆ. “ನೀವು ಉತ್ತಮವಾಗಿ ಆಡುತ್ತಿರುವಾಗ ದೊಡ್ಡ ಸ್ಕೋರ್ ಮಾಡಲು ಪ್ರಯತ್ನಿಸಿ. ಮುಂದಿನ ಪಂದ್ಯದಲ್ಲಿ ನೀವು ಬೇಗನೆ ಔಟಾದರೆ, ಆ ಅವಕಾಶ ಮತ್ತೆ ಬರುವುದಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ.