Virender Sehwag | ವೀರೇಂದ್ರ ಸೆಹ್ವಾಗ್ ಗೆ ಈ ದಿನಾಂಕ ತುಂಬಾ ವಿಶೇಷ..!!!
ಟೀಂ ಇಂಡಿಯಾದ ಮಾಜಿ ಓಪನರ್, ನಜಫ್ ಗಢ್ ನವಾಬ್, ಮುಲ್ತಾನ್ ಕಾ ಸುಲ್ತಾನ್ ವೀರೇಂದ್ರ ಸೆಹ್ವಾಗ್ ಕ್ರಿಕೆಟ್‌ಗೆ ವಿದಾಯ ಹೇಳಿ ಸುಮಾರು ಹತ್ತು ವರ್ಷಗಳು ಕಳೆದ್ರೂ ಅವರು ಸ್ಥಾಪಿಸಿದ ಕೆಲವು ದಾಖಲೆಗಳು ಹಾಗೇ ಇವೆ.
ಅದರಲ್ಲೂ ವೀರೂ ರು ಟೆಸ್ಟ್‌ನಲ್ಲಿ ಸಾಧಿಸಿದ ಡಬಲ್ ಟ್ರಿಪಲ್ ಶತಕ ದಾಖಲೆ ಕೂಡ ಒಂದು. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಈ ದಾಖಲೆಯನ್ನು ಸಾಧಿಸಿಲ್ಲ.
ಒಟ್ಟಾರೆಯಾಗಿ ಡಾನ್ ಬ್ರಾಡ್ಮನ್, ಬ್ರಿಯಾನ್ ಲಾರಾ ಮತ್ತು ಕ್ರಿಸ್ ಗೇಲ್ ಮಾತ್ರ ಈ ದಾಖಲೆಯನ್ನು ಸಾಧಿಸಿದ್ದಾರೆ.
ಆದ್ರೆ ವಿಶೇಷ ಎಂಬಂತೆ ಸೆಹ್ವಾಗ್ ಸಾಧಿಸಿದ ಎರಡು ತ್ರಿಪಲ್ ಸೆಂಚೂರಿಗಳು ಇದೇ ದಿನಾಂಕದಂದು ಬಂದಿರೋದು ವಿಶೇಷವಾಗಿದೆ.
ಮಾರ್ಚ್ 29, 2004 ರಂದು ಪಾಕಿಸ್ತಾನದ ವಿರುದ್ಧದ ಮುಲ್ತಾನ್ ಟೆಸ್ಟ್‌ನಲ್ಲಿ ಅವರು ತಮ್ಮ ಮೊದಲ ಟ್ರಿಪಲ್ (309) ಸೆಂಚೂರಿ ಬಾರಿಸಿದ್ದರು.
ಇದಾದ ಸರಿಯಾಗಿ ನಾಲ್ಕು ವರ್ಷಗಳ ನಂತರ ಮಾರ್ಚ್ 29, 2008 ರಂದು ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಎರಡನೇ ಟ್ರಿಪಲ್ (319) ಸೆಂಚೂರಿ ಗಳಿಸಿದರು.
ಇದು ಸೆಹ್ವಾಗ್ ಅವರ ಕ್ರಿಕೆಟ್ ವೃತ್ತಿಜೀವನದಲ್ಲಿ ತುಂಬಾ ವಿಶೇಷ, ಭಾವನಾತ್ಮಕ ಮತ್ತು ಅದೃಷ್ಟದ ದಿನಾಂಕವಾಗಿದೆ .
ಕಾಕತಾಳೀಯವೆಂಬಂತೆ, ಸೆಹ್ವಾಗ್ ಅವರ ಕಾರು ಸಂಖ್ಯೆ (2903) ಸಹ ಅದೇ ದಿನಾಂಕದೊಂದಿಗೆ ಸಂಬಂಧಿಸಿದೆ.
ಇತ್ತೀಚೆಗೆ (ಮಾರ್ಚ್ 29, 2022) ಸೆಹ್ವಾಗ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಯಾವ ದಿನಾಂಕ .. ಮಾರ್ಚ್ 29 .. ನನ್ನ ಕ್ರಿಕೆಟ್ ಜೀವನದಲ್ಲಿ ಬಹಳ ವಿಶೇಷವಾದ ದಿನ.
ಮುಲ್ತಾನ್ ಟೆಸ್ಟ್‌ನಲ್ಲಿ (ಪಾಕಿಸ್ತಾನ ವಿರುದ್ಧ) ಅದೇ ದಿನ ನನ್ನ ಮೊದಲ ಟ್ರಿಪಲ್ ಸೆಂಚುರಿ ಬಾರಿಸಿದ್ದೆ. ನಾಲ್ಕು ವರ್ಷಗಳ ನಂತರ ಇದೇ ದಿನಾಂಕದಂದು ಮತ್ತೊಮ್ಮೆ ದಕ್ಷಿಣ ಆಫ್ರಿಕಾ ವಿರುದ್ಧ ಈ ಸಾಧನೆ ಮಾಡಿದೆ.
ಕಾಕತಾಳೀಯವೆಂಬಂತೆ ನನ್ನ ಕಾರ್ ನಂಬರ್ (2903) ಕೂಡ ಅದೇ ಎಂದು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. virender-sehwag-significance-march-29-his-life