Vivo : ವಿವೋ ಮೊಬೈಲ್ ಕಂಪನಿಯ 27 ಸಾವಿರ ಮೊಬೈಲ್ ಗಳ ರಫ್ತು ತಡೆದ ಕಂದಾಯ ಇಲಾಖೆ
ವಿದೇಶಕ್ಕೆ ರಫ್ತಾಗಬೇಕಿದ್ದ 27 ಸಾವಿರ Vivo ಕಂಪನಿಯ ಫೋನ್ ಗಳನ್ನ ದೆಹಲಿಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ವಿಭಾಗ ಅಧಿಕಾರಿಗಳಿಂದ ತಡೆ ಹಿಡಿಯಲಾಗಿದೆ..
ಡಿವೈಸ್ ಮಾದರಿಗಳು ಮತ್ತು ಅವುಗಳ ಮೌಲ್ಯವನ್ನು ತಪ್ಪಾಗಿ ನೀಡಿರುವ ಆರೋಪದ ಹಿನ್ನೆಲೆ ಡಿ.2 ರಿಂದ ಸುಮಾರು ಒಟ್ಟು 15 ದಶಲಕ್ಷ ಡಾಲರ್ ಮೌಲ್ಯದ ಸರಕನ್ನು ತಡೆಹಿಡಿಯಲಾಗಿದೆ ಎಂದು ವರದಿಯಾಗಿದೆ.
ಆದ್ರೆ ಹಣಕಾಸು ಸಚಿವಾಲಯ ಮತ್ತು Vivo ಕಂಪನಿ ಈ ಬಗ್ಗೆ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.
ವಿವೋ ಕಮ್ಯುನಿಕೇಷನ್ಸ್ ಟೆಕ್ನಾಲಜಿ ಕಂಪನಿ ಭಾರತ ಘಟಕದಿಂದ ಈ ಫೋನ್ ಗಳನ್ನು ತಯಾರಿಸಲಾಗಿದೆ.
ವಿವೋ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.