vivo pro kabaddi – ರಾಷ್ಟ್ರಗೀತೆ ಹಾಡಿ ಚಾಲನೆ ನೀಡಿದ ರಿಷಬ್ ಶೆಟ್ಟಿ
ತುಳು ನಾಡಿನ ಮಣ್ಣಿನ ಸೊಗಡನ್ನ ದೇಶಾದ್ಯಂತ ಪಸರಿಸುವ ಮೂಲಕ ರಿಷಬ್ ಶೆಟ್ಟಿ ಅಂಡ್ ಟೀಮ್ ಅಪಾರ ಗೌರವಕ್ಕೆ ಪಾತ್ರವಾಗುತ್ತಿದೆ. ರಿಷಬ್ ನಟನೆ ಮತ್ತು ನಿರ್ದೇಶನದ ಕಾರಣಕ್ಕೆ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದಾರೆ.
ಅಂದ್ಹಾಗೆ ರಿಷಬ್ ಶೆಟ್ಟಿ ವಿವೋ ಪ್ರೋ ಕಬಡ್ಡಿ ಸೀಸನ್ 9 ರ ನಿನ್ನೆಯ ( ಅಕ್ಟೋಬರ್ 16 ) ಸಂಜೆ 7.30 ಕ್ಕೆ ಶುರುವಾಗುವ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿ ಚಾಲನೆ ನೀಡಿದರು.. ಈ ವೇಳೆ ಕಂಠೀರವ ಸ್ಟೇಡಿಯಮ್ ನಲ್ಲೂ ಕಾಂತಾರಮಯವಾಗಿದ್ದು ಕಂಡುಬಂತು,..
ರಿಷಬ್ ರಾಷ್ಟ್ರಗೀತೆ ಹಾಡಿ ಕಬಡ್ಡಿಗೆ ಚಾಲನೆ ನೀಡಿದರು.. ವಿಶೇಷ ಅಂದ್ರೆ ಪಂಚೆ ಧರಿಸಿಯೇ ರಿಷಬ್ ಸ್ಟೇಡಿಯಮ್ ಆಗಮಿಸಿದ್ದು ಎಲ್ಲರ ಗಮನ ಸೆಳೆದು ಮೆಚ್ಚುಗೆಯನ್ನೂ ಪಡೆಯಿತು.. ಈ ವೇಳೆ ಅಭಿಮಾನಿಗಳು ಕಾಂತಾರ , ರಿಷಬ್ ಶೆಟ್ಟಿ ಎಂದು ಕಿರುಚಿದ್ದಾರೆ.
ರಿಷಬ್ ಶೆಟ್ಟಿ ಬೆಂಗಳೂರು ಬುಲ್ಸ್ ಗೆ ಬೆಂಬಲಿಸಿದ್ದರು.. ಬೆಂಗಳೂರು ತಂಡ ಈ ಪಂದ್ಯದಲ್ಲಿ ಯೂಪಿ ಯೋಧಸ್ ವಿರುದ್ಧ ಸೋಲನುಭವಿಸಿತ್ತು.. ಈ ಮೂಲಕ ಬುಲ್ಸ್ ಗೆ ಸತತ 2 ನೇ ಸೋಲು ಇದಾಗಿತ್ತು.
vivo pro kabaddi – Rishabh Shetty led off by singing the national anthem