ವಿ.ಕೆ.ಶಶಿಕಲಾ 2021 ರ ಜನವರಿ 27 ರಂದು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ

ವಿ.ಕೆ.ಶಶಿಕಲಾ 2021 ರ ಜನವರಿ 27 ರಂದು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ

ಚೆನ್ನೈ, ಸೆಪ್ಟೆಂಬರ್16: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಅಪ್ತ ಸ್ನೇಹಿತೆ ವಿ.ಕೆ.ಶಶಿಕಲಾ ಅವರು 2021 ರ ಜನವರಿ 27 ರಂದು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಮಾಹಿತಿ ಹಕ್ಕು ಬಹಿರಂಗ ಪಡಿಸಿದೆ.
ಬೆಂಗಳೂರು ಕಾರ್ಯಕರ್ತ ಮತ್ತು ವಕೀಲರ ಪ್ರಶ್ನೆಗೆ ಕೇಂದ್ರ ಜೈಲು ಪ್ರಾಧಿಕಾರ ನೀಡಿದ ಮಾಹಿತಿ ಹಕ್ಕು (ಆರ್‌ಟಿಐ) ಉತ್ತರದಿಂದ ಈ ಮಾಹಿತಿ ದೊರಕಿದ್ದು, ದಂಡವನ್ನು ಪಾವತಿಸಿದರೆ ಶಶಿಕಲಾ ಅವರನ್ನು ಜನವರಿಯಲ್ಲಿ ಬಿಡುಗಡೆ ಮಾಡಬಹುದು ಎಂದು ಮಾಹಿತಿ ಲಭ್ಯವಾಗಿದೆ.
ತಮಿಳುನಾಡಿನ ಅಸಮಾನ ಆಸ್ತಿ ಪ್ರಕರಣದಲ್ಲಿ ಅಪರಾಧಿ ಸಂಖ್ಯೆ 9234 ರ ಶಶಿಕಲಾ ಪ್ರಸ್ತುತ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ಶಶಿಕಲಾ ಅವರ ಸೋದರಳಿಯ ಸುಧಾಕರನ್ ಮತ್ತು ಅವರ ಆಪ್ತ ಜೆ.ಇಲವರಸಿ ಸಹ ಅವರೊಂದಿಗೆ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.
ಅವರ ಉತ್ತಮ ನಡವಳಿಕೆಯಿಂದಾಗಿ ಸೆಪ್ಟೆಂಬರ್ ಅಂತ್ಯದ ವೇಳೆಗೆ ಜೈಲಿನಿಂದ ಹೊರನಡೆಯಬಹುದು ಎಂದು ಶಶಿಕಲಾ ಪರ ವಕೀಲ ರಾಜಾ ಸೆಂಥೂರ್ ಪಾಂಡಿಯನ್ ಹೇಳಿದ್ದಾರೆ.
ಆರ್‌ಟಿಐ ಮಾಹಿತಿ ಪ್ರಕಾರ, ಇನ್-ಡೀಫಾಲ್ಟ್ ದಂಡವನ್ನು ಪಾವತಿಸದಿದ್ದರೆ, ಅವರ ಬಿಡುಗಡೆಯ ದಿನಾಂಕ ಫೆಬ್ರವರಿ 27, 2022 ಆಗಿರುತ್ತದೆ, ಅವರು ಪೆರೋಲ್ ಸೌಲಭ್ಯವನ್ನು ಬಳಸಿಕೊಂಡರೆ ಬಹುಶಃ ಬಿಡುಗಡೆಯ ದಿನಾಂಕ ಬದಲಾಗಬಹುದು.
ಪತಿ ನಟರಾಜನ್ ಅನಾರೋಗ್ಯದಿಂದ ಬಳಲುತ್ತಿದ್ದ ಐದು ದಿನಗಳ ಕಾಲ 2017 ರ ಅಕ್ಟೋಬರ್‌ನಲ್ಲಿ ಶಶಿಕಲಾ ಪೆರೋಲ್‌ನಲ್ಲಿದ್ದರು. ನಟರಾಜನ್ ನಿಧನರಾದಾಗ ಮಾರ್ಚ್ 2019 ರಲ್ಲಿ ಆಕೆಗೆ ಮತ್ತೆ 12 ದಿನಗಳ ಕಾಲ ಪೆರೋಲ್ ನೀಡಲಾಯಿತು.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This