ವೋಟ್ ಹಾಕದ್ದಕ್ಕೆ ತನ್ನ ಉಗುಳನ್ನ ಯುವಕನಿಗೆ ತಿನ್ನಿಸಿದ ಜನಪ್ರತಿನಿಧಿ
ಬಿಹಾರ : ವೋಟ್ ಹಾಕುವುದು ಪ್ರಜೆಗಳಾದ ನಮ್ಮ ಅಂದ್ರೆ ಪ್ರತಿಯೊಬ್ರ ಹಕ್ಕು.. ಅಂತೆಯೇ ನಮಗಿಷ್ಟ ಬಂದವರಿಗೆ ವೋಟ್ ಮಾಡಿ ಸರಿಯಾದ ಜನನಾಯಕನ ಆಯ್ಕೆ ಮಾಡಿಕೊಳ್ಳುವ ಹಕ್ಕನ್ನ ನಮ್ಮ ಸಂವಿಧಾನ ನಮಗೆ ಕೊಟ್ಟಿದೆ..
ಆದ್ರೆ ಕೆಲವೆಡೆ ಜನಪ್ರತಿನಿಧಿಗಳು ಹೆದರಿಸಿ ಬೆದರಿಸಿ , ಭಯಗೊಳಿಸಿ ಮತಹಾಕಿಸಿಕೊಳ್ಳುವ ಅನೇಕ ಪ್ರಕರಣಗಳು ಆಗಾಗ ಬೆಳಕಿಗೆ ಬಂದಿದೆ.. ಆದ್ರೆ ಇಲ್ಲೊಬ್ಬ ಜನನಾಯಕನೊಬ್ಬ ಅಟ್ಟಹಾಸದ ಎಲ್ಲ ಎಲ್ಲೆ ಮೀರಿದ್ದಾನೆ..
ತನಗೆ ಮತಹಾಕಲಿಲ್ಲ ಎಂಬ ಕಾರಣಕ್ಕೆ ತಾನು ಉಗುಳಿದ್ದನ್ನು ತಿನ್ನುವಂತೆ ಯುವಕನೊಬ್ಬನಿಗೆ ಒತ್ತಾಯಿಸಿದ್ದಾನೆ.. ಇಂತಹದೊಂದು ಘಟನೆ ಬಿಹಾರದ ಔರಂಗಾಬಾದ್ನಲ್ಲಿ ನಡೆದಿದೆ.
ಹಲ್ಲು ನೋವಿನಿಂದ ಪತ್ತೆಯಾಯ್ತು ಒಮಿಕ್ರಾನ್ ಸೋಂಕು
ಅಭ್ಯರ್ಥಿ ಬಲವಂತ್ ಕುಮಾರ್ ಸೋಲಿನ ಬಳಿಕ ಇಬ್ಬರು ಯುವಕರಾದ ಅನಿಲ್ ಕುಮಾರ್ ಮತ್ತು ಮಂಜೀತ್ಗೆ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾನೆ. ಒಳಿಕ ನೆಲದ ಮೇಲೆ ಉಗುಳಿದನ್ನು ಒತ್ತಾಯಿಸಿ ತಿನ್ನಿಸಿದ್ದಾನೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಈ ಬಗ್ಗೆ ಮಾಹಿತಿ ಪಡೆದು ಔರಂಗಾಬಾದ್ ಎಸ್ಪಿ ಕಾಂತೇಶ್ ಕುಮಾರ್ ಮಿಶ್ರಾ ಅವರು ಅಂಬಾ ಪೊಲೀಸರಿಗೆ ನೀಡಿದ ಸೂಚನೆ ಮೇರೆಗೆ ಆರೋಪಿ ಬಲ್ವಂತ್ ಸಿಂಗ್ ನನ್ನು ಬಂಧಿಸಿದ್ದಾರೆ. ಸಂತ್ರಸ್ತ ಯುವಕರ ವಿಚಾರಣೆ ನಡೆಸಲಾಗಿದೆ. ಆರೋಪಿ ಮುಖಂಡ ಗ್ರಾಮಾಂತರ ಚುನಾವಣೆಗೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದನು. ಇದೀಗ ಆತನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ವಿಚಾರಣೆ ಜಾರಿಯಲ್ಲಿದೆ..