VVS Laxman | ಟೀಂ ಇಂಡಿಯಾಗೆ ತಾತ್ಕಾಲಿಕ ಕೋಚ್ ಲಕ್ಷ್ಮಣ್
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರು ಐರ್ಲೆಂಡ್ ಪ್ರವಾಸದ ವೇಳೆ ಟೀಮ್ ಇಂಡಿಯಾಗೆ ಕೋಚ್ ಆಗಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜೈ ಶಾ ಬಹಿರಂಗಪಡಿಸಿದ್ದಾರೆ.
ಟೀಂ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಟೆಸ್ಟ್ ತಂಡದ ಜೊತೆ ಇಂಗ್ಲೆಂಡ್ ಗೆ ಹೋಗಲಿದ್ದಾರೆ.
ಆಗ ಲಕ್ಷ್ಮಣ್ ಅವರು ಟೀಂ ಇಂಡಿಯಾಗೆ ತಾತ್ಕಾಲಿಕ ಕೋಚ್ ಆಗಿದ್ದಾರೆ.
ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧ ಐದು ಟಿ20 ಸರಣಿಗಳನ್ನು ಆಡಿದ ನಂತರ ಭಾರತ ಜೂನ್ 19 ರಂದು ಐರ್ಲೆಂಡ್ಗೆ ತೆರಳಲಿದೆ.
ಜೂನ್ 26 ಮತ್ತು 28 ರಂದು ಡಬ್ಲಿನ್ನಲ್ಲಿ ಎರಡು ಪಂದ್ಯಗಳು ನಡೆಯಲಿವೆ.