NCA ಮುಖ್ಯಸ್ಥನ ಸ್ಥಾನದ ಆಫರ್ ತಿರಸ್ಕರಿಸಿದ ವಿವಿಎಸ್ ಲಕ್ಷ್ಮಣ್, ದ್ರಾವಿಡ್ ಸ್ಥಾನ ತುಂಬಲಾಗಲ್ಲ ಎಂದ ಸ್ಟೈಲಿಷ್ ಕ್ರಿಕೆಟರ್..!
ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಮುಂದಿನ ಕೋಚ್ ಆಗ್ತಾರಾ..? ಯಸ್ ಅನ್ನುತ್ತಿವೆ ಬಲವಾದ ಮೂಲಗಳು. ಆದರೆ ಅಧಿಕೃತವಾಗಿ ಯಾವುದೂ ಕೂಡ ನಿರ್ಧಾರವಾಗಿಲ್ಲ. ರಾಹುಲ್ ದ್ರಾವಿಡ್ ಎನ್ಸಿಎ ಮುಖ್ಯಸ್ಥನಾಗಿ ಯುವ ಆಟಗಾರರನ್ನು ತಯಾರು ಮಾಡುತ್ತಿದ್ದರು. ಆದರೆ ಈಗ ಆ ಹುದ್ದೆಗೆ ಹೊಸ ಆಯ್ಕೆ ನಡೆಯುತ್ತಿದೆ. ಹೀಗಾಗಿ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಕೋಚ್ ಆಗಬಹುದು ಅನ್ನುವ ಲೆಕ್ಕಾಚಾರ ಜೋರಾಗಿ ಶುರುವಾಗಿದೆ.
ದ್ರಾವಿಡ್ ಟೀಂ ಇಂಡಿಯಾದ ಮುಖ್ಯ ತರಬೇತುದಾರನಾದರೆ, ಯಾರು ಎನ್ಸಿಎ ಮುಖ್ಯಸ್ಥರಾಗುತ್ತಾರೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಬಿಸಿಸಿಐ ಆ ಹುದ್ದೆಗೆ ವಿವಿಎಸ್ ಲಕ್ಷ್ಮಣ್ ಸೂಕ್ತ ಎಂದು ಯೋಚನೆ ಮಾಡುತ್ತಿದೆ. ಆದರೆ ದೈನಿಕ್ ಜಾಗರಣದಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಮಂಡಳಿಯು ಲಕ್ಷ್ಮಣ್ ಅವರನ್ನು ಸಂಪರ್ಕಿಸಿದಾಗ, ಅವರು ನೇರವಾಗಿ ಈ ಹುದ್ದೆಯನ್ನು ನಿರಾಕರಿಸಿದ್ದಾರೆ . ಅಷ್ಟೇ ಅಲ್ಲ ದ್ರಾವಿಡ್ ಜಾಗ ತುಂಬಲು ಅಸಾಧ್ಯ ಎಂದು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.
ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆ 2 ವರ್ಷಗಳ ಗುತ್ತಿಗೆ ಆಧಾರದಲ್ಲಿರಲಿದೆ. ಒಟ್ಟು 10 ಕೋಟಿ ರೂಪಾಯಿ ಸಂಭಾವನೆಯೂ ಸಿಗಲಿದೆ. ಆದರೆ ರವಿಶಾಸ್ತ್ತ್ರಿ ಬಳಿಕ ಕೋಚ್ ಯಾರಾಗ್ತಾರೆ ಅನ್ನುವ ಕುತೂಹಲವೂ ಇದೆ.