ಬೆಂಗಳೂರು: ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ 2,900 ಎಕರೆಗೆ ವಕ್ಫ್ ನೋಟಿಸ್ (Waqf Notice) ನೀಡಿತ್ತು. ಹೀಗಾಗಿ ಬಿಜೆಪಿಗೆ ಮುಜುಗರ ಮಾಡಲು ಯತ್ನಾಳ್ ಮುಂದಾಗಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ಈ ಸಮಸ್ಯೆ ಯಡಿಯೂರಪ್ಪ, ಬೊಮ್ಮಾಯಿ ಕಾಲದಲ್ಲಿ ಆಗಿದ್ದು. ಹೆಚ್ಚು ದಿನ ಸತ್ಯ ಮುಚ್ಚಿಡಲು ಆಗುವುದಿಲ್ಲ. ಬಿಜೆಪಿಯವರು ನಮ್ಮ ಮೇಲೆ ನೊಟೀಸ್ ಕೊಟ್ಟಿರುವ ಕುರಿತು ಆರೋಪ ಮಾಡಿದ್ದರು. ಹಾಗಾಗದರೆ, ಇವರು ಅಧಿಕಾರದಲ್ಲಿ ಇದ್ದಾಗ ಏನು ಮಾಡಿದ್ರು? ಕುಮಾರ್ ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿ ವಕ್ಫ್ ನೊಟೀಸ್ ಜಾರಿ ಮಾಡಿದ್ದಾರೆ. ಈ ಸಮಿತಿ 2,900 ಎಕರೆಗೆ ನೊಟೀಸ್ ಜಾರಿ ಮಾಡಿದೆ. ಸಿದ್ದರಾಮಯ್ಯ (Siddaramaiah) ಅವಧಿಯಲ್ಲಿ 300 ಎಕರೆಗೆ ನೊಟೀಸ್ ಜಾರಿ ಆಗಿದೆ ಎಂದಿದ್ದಾರೆ.
ಯತ್ನಾಳ್ ಟೀಮ್ ಬಿಜೆಪಿ ನಾಯಕರಿಗೆ ಮುಖಭಂಗ ಮಾಡಲು ಹೊರಟಿದೆ. ಬಿಜೆಪಿ ಕಾಲದಲ್ಲೇ ಹೆಚ್ಚು ವಕ್ಫ್ ನೊಟೀಸ್ ಕೊಟ್ಟಿದ್ದಾರಲ್ಲ, ಅದನ್ನೆಲ್ಲ ಎಕ್ಸ್‌ಪೋಸ್ ಮಾಡಲು ಯತ್ನಾಳ್ ಹೋಗ್ತಿದ್ದಾರೆ ಎಂದಿದ್ದಾರೆ.








