T20 WC : ಮೆಗಾ ಟೂರ್ನಿಗಳಿಗೆ ವಾಸೀಂ ಜಾಫರ್ ತಂಡ ಪ್ರಕಟ..
ಈ ವರ್ಷದ ದ್ವಿತೀಯಾರ್ಧದಲ್ಲಿ ಎರಡು ಐಸಿಸಿ ಮೆಗಾ ಈವೆಂಟ್‌ಗಳು ನಡೆಯಲಿವೆ.
ಏಷ್ಯಾಕಪ್, ಟಿ20 ವಿಶ್ವಕಪ್ ರೂಪದಲ್ಲಿ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ದೊಡ್ಡ ಹಬ್ಬ.
ಏಷ್ಯನ್ ಕಪ್ ಆಗಸ್ಟ್-ಸೆಪ್ಟೆಂಬರ್ ನಲ್ಲಿ ನಡೆಯಲಿದ್ದು, ಕಿರು ಸ್ವರೂಪದ ವಿಶ್ವಕಪ್ ಅಕ್ಟೋಬರ್-ನವೆಂಬರ್ ನಲ್ಲಿ ನಡೆಯಲಿದೆ.
ಇದರ ನಡುವೆ ಐಪಿಎಲ್ 2022 ರ ಸೀಸನ್ ನಲ್ಲಿ ತಿಲಕ್ ವರ್ಮಾ, ಉಮ್ರಾನ್ ಮಲ್ಲಿಕ್, ರಾಹುಲ್ ತ್ರಿಪಾಠಿ ತಮ್ಮನ್ನು ತಾವು ಸಾಬೀತು ಪಡಿಸಿಕೊಂಡಿದ್ದಾರೆ.
ವೃದ್ಧಿಮಾನ್ ಸಹಾ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಚಹಾಲ್, ಕುಲ್ ದೀಪ್ ಯಾದವ್, ದಿನೇಶ್ ಕಾರ್ತಿಕ್ ಮತ್ತೆ ಫಾರ್ಮ್ ಗೆ ಮರಳಿದ್ದಾರೆ.
ಇದರ ಬೆನ್ನಲ್ಲೇ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಈ ಎರಡು ಮೆಗಾ ಟೂರ್ನಿಗಳಿಗೆ ತಮ್ಮ ತಂಡವನ್ನು ಪ್ರಕಟಿಸಿದ್ದಾರೆ.
ಏಷ್ಯಾ ಕಪ್, ಟಿ20 ವಿಶ್ವಕಪ್‌ಗೆ ವಾಸಿಂ ಜಾಫರ್ ತಂಡ
ಕೆಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯಜುವೇಂದ್ರ ಚಾಹಲ್, ಜಸ್ಪ್ರೀತ್.
ಇತರೆ ಸದಸ್ಯರು: ರುತುರಾಜ್ ಗಾಯಕ್ವಾಡ್, ದಿನೇಶ್ ಕಾರ್ತಿಕ್ / ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್ / ಕುಲದೀಪ್ ಯಾದವ್, ಮೊಹಮ್ಮದ್ ಶಮಿ / ದೀಪಕ್ ಚಹಾರ್.
ಬ್ಯಾಕಪ್ ಆಟಗಾರರು: ಪೃಥ್ವಿ ಶಾ, ರಾಹುಲ್ ತ್ರಿಪಾಠಿ, ಟಿ. ನಟರಾಜನ್.
wasim-jaffer-india-squad-asia-cup-and-t20-world-cup