Wasim Jaffer | ರಿಷಬ್ ಪಂತ್ ಕ್ಯಾಪ್ಟನ್ಸಿ ಬಗ್ಗೆ ಜಾಫರ್ ಟೀಕೆ..!!
ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋತಿದ್ದು, ಡಿಸಿ ಕ್ಯಾಪ್ಟನ್ ರಿಷಬ್ ಪಂತ್ ನಾಯಕತ್ವದ ಬಗ್ಗೆ ಮಾಜಿ ಕ್ರಿಕೆಟಿಗ ವಾಸೀಂ ಜಾಫರ್ ಟೀಕೆ ಮಾಡಿದ್ದಾರೆ.
ರಿಷಬ್ ಪಂತ್ ತಂಡದ ಪ್ರಮುಖ ಬೌಲರ್ ಅಕ್ಷರ್ ಪಟೇಲ್ ಅವರ ಸೇವೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದ್ದಾರೆ.
ಅಕ್ಷರ್ ಪಟೇಲ್ ಅವರನ್ನು ಕಡೆಗಣಿಸಿ ಲಲಿತ್ ಯಾದವ್ ಅವರನ್ನ ಬೌಲಿಂಗ್ ದಾಳಿಗೆ ಇಳಿಸಿದ್ದು, ಪಂದ್ಯದ ಮೇಲೆ ಪರಿಣಾಮ ಬೀರಿದೆ. ಇಲ್ಲಿ ಡೆಲ್ಲಿ ನಾಯಕನ ತಂತ್ರಗಾರಿಕೆಯ ತಪ್ಪು ಎಂದು ಜಾಫರ್ ಅಭಿಪ್ರಾಯಪಟ್ಟಿದ್ದಾರೆ.
ರಿಷಬ್ ಪಂತ್ ನಿಜವಾದ ಟ್ರಿಕ್ ಅನ್ನು ಮಿಸ್ ಮಾಡಿಕೊಂಡರು. ಪಾರ್ಟ್ ಟೈಂ ಬೌಲರ್ ಲಲಿತ್ ಯಾದವ್ ಕೈಯಲ್ಲಿ ನಾಲ್ಕು ಓವರ್ ಗಳನ್ನು ಹಾಕಿಸಿದ್ದಾರೆ.
ಆದ್ರೆ ಅಕ್ಷರ್ ಪಟೇಲ್ ಕೈಯಲ್ಲಿ ಕೇವಲ ಎರಡು ಓವರ್ ಮಾತ್ರ ಮಾಡಿಸಿದರು. ಅಕ್ಷರ್ ಅವರ ಪೂರ್ತಿ ಕೋಟಾವನ್ನು ಪಂತ್ ಯಾಕೆ ಪೂರ್ಣಗೊಳಿಸಿಲ್ಲ ಅನ್ನೋದು ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ. wasim-jaffer-questions-rishabh-pant-tactics