Friday, September 22, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ವಯನಾಡಿನ ವೈತಿರಿ ಸಂಪೂರ್ಣ ಲಸಿಕೆ ನೀಡಿರುವ ಕೇರಳ ರಾಜ್ಯದ ಮೊದಲ ಪ್ರವಾಸಿ ತಾಣ

Mahesh M Dhandu by Mahesh M Dhandu
July 31, 2021
in National, Newsbeat, ದೇಶ - ವಿದೇಶ
Wayanad saaksha tv
Share on FacebookShare on TwitterShare on WhatsappShare on Telegram

ವಯನಾಡಿನ ವೈತಿರಿ ಸಂಪೂರ್ಣ ಲಸಿಕೆ ನೀಡಿರುವ ಕೇರಳ ರಾಜ್ಯದ ಮೊದಲ ಪ್ರವಾಸಿ ತಾಣ

ಕೇರಳ ಪ್ರವಾಸೋದ್ಯಮ ವಲಯದವರಿಗೆ ಕೋವಿಡ್‌ ಲಸಿಕಾ ಅಭಿಯಾನಕ್ಕೆ ಚುರುಕು

Related posts

ಮಹಿಳಾ ಮೀಸಲಾತಿ ಮಸೂದೆ ಪಾಸ್; ವಿರೋಧಿಸಿದವರು ಯಾರು ಗೊತ್ತಾ?

ಇಂದು ರಾಜ್ಯಸಭೆಯಲ್ಲಿ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆ

September 21, 2023
108 ಅಡಿ ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆ

108 ಅಡಿ ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆ

September 21, 2023

ಬೆಂಗಳೂರು : ಕೇರಳ ರಾಜ್ಯದ ಪ್ರವಾಸೋದ್ಯಮ ಕೇಂದ್ರಗಳನ್ನು ಆರೋಗ್ಯಕರಗೊಳಿಸಲು ಮತ್ತು ಆತಿಥ್ಯಕ್ಕೆ ಸುಜ್ಜುಗೊಳಿಸುವ ನಿಟ್ಟಿನಲ್ಲಿ ಪ್ರವಾಸಿ ವಲಯಕ್ಕೆ ಸಂಬಂಧಿಸಿದ ಎಲ್ಲರಿಗೂ ಕರೋನಾ ಲಸಿಕೆ ನೀಡುವ ಕಾರ್ಯವನ್ನು ಕೇರಳ ಸರಕಾರ ಚುರುಕುಗೊಳಿಸಿದೆ. ವಯನಾಡು ಜಿಲ್ಲೆಯ ವೈತಿರಿ ಪ್ರವಾಸೋದ್ಯಮ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಅಲ್ಲಿನ ಎಲ್ಲಾ ನಾಗರೀಕರಿಗೂ ಲಸಿಕೆ ನೀಡಿದ ಮೊದಲ ಪ್ರವಾಸಿ ತಾಣವಾಗಿದೆ ಎಂದು ಕೇರಳ ಪ್ರವಾಸೋದ್ಯಮ ಸಚಿವರಾದ ಶ್ರೀ ಪಿ ಎ ಮೊಹಮ್ಮದ್‌ ರಿಯಾಸ್‌ ತಿಳಿಸಿದ್ದಾರೆ.

ರಾಜ್ಯಾದ್ಯಂತ ಪ್ರವಾಸೋದ್ಯಮ ಕೇಂದ್ರಗಳನ್ನು ಆರೋಗ್ಯಕರ ಮತ್ತು ಆತಿಥ್ಯಕ್ಕೆ ಸಜ್ಜುಗೊಳಿಸಲು ಅಭಿಯಾನ ಸಿದ್ಧಪಡಿಸಿರುವ ಬಗ್ಗೆ ಘೋಷಿಸಿದ ಅವರು, ಸಾಂಕ್ರಾಮಿಕ ರೋಗ ಕಡಿಮೆಯಾದಾಗ ಪ್ರವಾಸಿಗರನ್ನು ಸೆಳೆಯಲಿರುವ ಹಿನ್ನಲೆಯಲ್ಲಿ ಪ್ರವಾಸಿ ವಲಯಕ್ಕೆ ಸಂಬಂಧಿಸಿದ ಎಲ್ಲಾ ಜನರಿಗೂ ಪೂರ್ಣವಾಗಿ ಲಸಿಕೆ ನೀಡುವುದು ನಮ್ಮ ಉದ್ದೇಶವಾಗಿದೆ. ಆರೋಗ್ಯ ಇಲಾಖೆ, ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡಿರುವ ಖಾಸಗಿ ಸಂಸ್ಥೆಗಳು ಹಾಗೂ ಸಂಘದ ಬೆಂಬಲದೊಂದಿಗೆ ಈ ಅಭಿಯಾನ ಆಯೋಜಿಸಲಾಗಿದೆ. ಈ ತಿಂಗಳು ವೈತಿರಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಲಸಿಕೆ ಅಭಿಯಾನದ ಮೂಲಕ ಒಟ್ಟು 5395 ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ.

ಪ್ರವಾಸೋದ್ಯಮ ತಾಣವಾದ ಹಚ್ಚಹರಿಸಿರಿನ ಬೆಟ್ಟಗಳಿಂದ ಕೂಡಿದ ಜಿಲ್ಲೆ ವೈತಿರಿ ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿದ್ದು, ವೈತಿರಿ ತಾಲೂಕು ಕೇಂದ್ರ ಅಸ್ಪತ್ರೆ ಹಾಗೂ ಸುಗಂಧಗಿರಿ ಪ್ರಾಥಮಿಕ ಅರೋಗ್ಯ ಕೇಂದ್ರಗಳ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳು ಅಭಿಯಾನ ನಡೆಸಿದ್ದಾರೆ.

“ಸಾಂಕ್ರಾಮಿಕ ನಂತರದ ಹಂತದಲ್ಲಿ, ಪ್ರವಾಸಿಗರು ಸಮಯ ಕಳೆಯಲು ಸುರಕ್ಷಿತವಾದ ಮತ್ತು ಸೂಕ್ತವಾದ ಸ್ಥಳಗಳನ್ನು ಹುಡುಕುತ್ತಾರೆ. ರಾಜ್ಯಾದ್ಯಂತ ಎಲ್ಲಾ ಸ್ಥಳಗಳಲ್ಲಿ ಎಲ್ಲಾ ಜನರಿಗೆ ಕೋವಿಡ್ 19 ಲಸಿಕೆ ನೀಡುವುದನ್ನು ಅತ್ಯಂತ ಮುಖ್ಯ ಎಂದು ಸರ್ಕಾರ ಪರಿಗಣಿಸಿದೆ,” ಎಂದು ಶ್ರೀ ಮೊಹಮ್ಮದ್ ರಿಯಾಸ್ ಹೇಳಿದ್ದಾರೆ.

Wayanad saaksha tv

“ಪ್ರಾಕೃತಿಕ ಸೌಂದರ್ಯದ ತಾಣವಾದ ವಯನಾಡು ಅದ್ಭುತವಾದ ಪ್ರವಾಸೋದ್ಯಮ ತಾಣವಾಗಿದೆ. ನಾವು ಸಾಹಸ ಪ್ರವಾಸೋದ್ಯಮ ಸೇರಿದಂತೆ ರಜಾದಿನಗಳು ಮತ್ತು ಬಿಡುವಿನ ಸಮಯದ ಚಟುವಟಿಕೆಗಳ ಸಮೃದ್ಧ ಮಿಶ್ರಣಕ್ಕೆ ತಾಣಗಳನ್ನು ಅಭಿವೃದ್ಧಿಪಡಿಸುವ ಪ್ರಮುಖ ಯೋಜನೆ ಹೊಂದಿದ್ದೇವೆ” ಎಂದು ಮೊಹಮ್ಮದ್ ಹೇಳಿದ್ದಾರೆ.

“ಲಸಿಕೆ ಅಭಿಯಾನ ಧ್ಯೇಯವನ್ನು ಪೂರ್ಣಗೊಳಿಸುವ ದಿಕ್ಕಿನಲ್ಲಿ ಉತ್ತಮವಾಗಿ ನಡೆಯುತ್ತಿದೆ. ಪ್ರವಾಸೋದ್ಯಮ ಇಲಾಖೆಯೊಂದಿಗೆ, ಉದ್ದಿಮೆ ಸಮಿತಿಗಳು ಮತ್ತು ಉದ್ಯೋಗಿ ವೇದಿಕೆಗಳು ಹಾಗೂ ಸ್ಥಳೀಯ ಸಮುದಾಯಗಳು ಇದರ ಯಶಸ್ಸಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ,” ಎಂದು ಕೇರಳ ಸರ್ಕಾರದ, ಪ್ರವಾಸೋದ್ಯಮದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ವಿ ವೇಣು, ಐಎಎಸ್ ಹೇಳಿದ್ದಾರೆ.

ಈ ಅಭಿಯಾನದಲ್ಲಿ ಹೋಟೆಲ್, ರೆಸಾರ್ಟ್ ಗಳು ಮತ್ತು ಹೋಂಸ್ಟೇಗಳು, ಪ್ರವಾಸಿ ಮಾರ್ಗದರ್ಶಕರು, ಟ್ಯಾಕ್ಸಿ ಹಾಗೂ ಆಟೋರಿಕ್ಷಾ ಚಾಲಕರು ಮತ್ತು ಪ್ರವಾಸೋದ್ಯಮ ಕೇಂದ್ರಗಳ ವ್ಯಾಪಾರಿಗಳೂ ಸೇರಿದಂತೆ ಪ್ರವಾಸ ಮತ್ತು ಆತಿಥ್ಯ ಉದ್ದಿಮೆಗೆ ಸಂಬಂಧಿಸಿದ ಎಲ್ಲಾ ಸೇವಾದಾರರಿಗೂ ಲಸಿಕೆಯನ್ನು ನೀಡಲಾಗಿದೆ.

ಅಭಿಯಾನದಿಂದ ರಕ್ಷೆ ಪಡೆದ ಪ್ರಮುಖ ತಾಣಗಳು ಅಲಪ್ಪುಳ, ಮುನ್ನಾರ್, ಕೊಚ್ಚಿ ಕೋಟೆ, ಕುಮಾರಕೋಮ್, ಕೋವಲಂ ಮತ್ತು ವಾರ್ಕಲ ಸೇರಿದಂತೆ, ರಾಜ್ಯದ ಉದ್ದಗಲಕ್ಕೂ ಹರಡಿದೆ.

“ಈ ಅಭಿಯಾನ ಕೇರಳವನ್ನು ನಿಜಕ್ಕೂ ಸಾಂಕ್ರಾಮಿಕ ನಂತರದ ಹಂತದಲ್ಲಿ ಭೇಟಿ ನೀಡಲು ಅಪಾಯ ರಹಿತ ಸ್ಥಳವಾಗಿಸಲಿದೆ. ಪ್ರವಾಸಿಗರು ಭೇಟಿ ನೀಡಲು ಆಯ್ಕೆಮಾಡಲು ಆತ್ಮವಿಶ್ವಾಸ ಹೆಚ್ಚಿಸಲು, ಭವಿಷ್ಯದಲ್ಲಿ ಇದು ಪ್ರಮುಖ ಅಂಶವಾಗಲಿದೆ”, ಎಂದು ಕೇರಳ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾದ ಶ್ರೀ ವಿ ಆರ್ ಕೃಷ್ಣ ತೇಜ, ಐಎಎಸ್ ಹೇಳಿದ್ದಾರೆ.

Tags: Corona ViruskeralaWayanad
ShareTweetSendShare
Join us on:

Related Posts

ಮಹಿಳಾ ಮೀಸಲಾತಿ ಮಸೂದೆ ಪಾಸ್; ವಿರೋಧಿಸಿದವರು ಯಾರು ಗೊತ್ತಾ?

ಇಂದು ರಾಜ್ಯಸಭೆಯಲ್ಲಿ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆ

by Honnappa Lakkammanavar
September 21, 2023
0

ಮಹಿಳಾ ಮೀಸಲಾತಿ ಮಸೂದೆ(Women’s Reservation Bill)ಗೆ ಲೋಕಸಭೆಯಲ್ಲಿ ಅಂಗೀಕಾರಗೊಂಡ ನಂತರ ರಾಜ್ಯಸಭೆಯಲ್ಲಿ ಕೂಡ ಮಂಡನೆಯಾಗಲಿದೆ. ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನ...

108 ಅಡಿ ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆ

108 ಅಡಿ ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆ

by Honnappa Lakkammanavar
September 21, 2023
0

ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚವ್ಹಾಣ್ ಅವರು ಶಿವನಿಗೆ ಸಮರ್ಪಿತವಾದ 12 ಜ್ಯೋತಿರ್ಲಿಂಗಗಳಲ್ಲಿ ಒಂದನ್ನು ಹೊಂದಿರುವ ಓಂಕಾರೇಶ್ವರದಲ್ಲಿ 108 ಅಡಿ ಎತ್ತರದ ಶಂಕರಾಚಾರ್ಯರ ಭವ್ಯವಾದ ಪ್ರತಿಮೆ ಅನಾವರಣಗೊಳಿಸಲಿದ್ದಾರೆ....

ಭಾರತದ ಪ್ರಯಾಣ ಸಲಹೆಯನ್ನು ತಿರಸ್ಕರಿಸಿದ ಕೆನಡಾ

ಭಾರತದ ಪ್ರಯಾಣ ಸಲಹೆಯನ್ನು ತಿರಸ್ಕರಿಸಿದ ಕೆನಡಾ

by Honnappa Lakkammanavar
September 21, 2023
0

ಖಲಿಸ್ತಾನಿ ವಿಚಾರವಾಗಿ ಭಾರತ ಹಾಗೂ ಕೆನಡಾ ನಡುವಿನ ಸಂಬಂಧ ಹದಗೆಟ್ಟಿದೆ. ಅಲ್ಲಿನ ಭಾರತೀಯ ನಾಗರಿಕರಿಗೆ ಎಚ್ಚರದಿಂದಿರಲು ಕೇಂದ್ರ ಸರ್ಕಾರ ಸಲಹೆ ನೀಡಿದೆ. ಭಾರತೀಯ ಸಂಸ್ಥೆಗಳ ಮೇಲೆ ಕೆನಡಾದಲ್ಲಿ...

ಕೆನಡಾದಲ್ಲಿ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿದ ಭಾರತ

ಕೆನಡಾದಲ್ಲಿ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿದ ಭಾರತ

by Honnappa Lakkammanavar
September 21, 2023
0

ಭಾರತ(India) ಹಾಗೂ ಕೆನಡಾ(Canada) ಮಧ್ಯೆದ ಸಂಬಂಧ ಮತ್ತಷ್ಟು ಉದ್ವಿಗ್ನತೆಗೆ ತಿರುಗುತ್ತಿದೆ. ಈ ಮಧ್ಯೆ ಭಾರತವು ಕೆನಡಾದ ಪ್ರಜೆಗಳಿಗೆ ವೀಸಾ(Visa) ಸೇವೆಗಳನ್ನು ಅನಿರ್ದಿಷ್ಟವಾಗಿ ಸ್ಥಗಿತಗೊಳಿಸಿದೆ. ಖಲಿಸ್ತಾನಿ ಉಗ್ರ ಹರ್ದೀಪ್...

ಮಹಿಳಾ ಮೀಸಲಾತಿ ಮಸೂದೆ ಪಾಸ್; ವಿರೋಧಿಸಿದವರು ಯಾರು ಗೊತ್ತಾ?

ಮಹಿಳಾ ಮೀಸಲಾತಿ ಮಸೂದೆ ಪಾಸ್; ವಿರೋಧಿಸಿದವರು ಯಾರು ಗೊತ್ತಾ?

by Honnappa Lakkammanavar
September 20, 2023
0

ನವದೆಹಲಿ : ನಾರಿಶಕ್ತಿ ವಂದನ್‌ ಅಧಿನಿಯಮಕ್ಕೆ (Nari Shakti Vandan Adhiniyam) ಲೋಕಸಭೆ (Lok Sabaha) ಅನುಮೋದನೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಚರ್ಚೆ ನಡೆದಿತ್ತು. ನಂತರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಬಾರ್ ನಲ್ಲಿ ರಾಮಾಯಣದ ವೀಡಿಯೋ ; ಓರ್ವ ಅರೆಸ್ಟ್!

ಬೆಂಗಳೂರಲ್ಲಿ ಮದ್ಯ ನಿಷೇಧ!

September 21, 2023
ಕುಡಿದ ಮತ್ತಿನಲ್ಲಿ ಮದುವೆಯಾದ ಯುವಕರಿಬ್ಬರು, ನಂತರ ಸಂಸಾರ ನಡೆಸುವಂತೆ ಯುವಕನ ಪಟ್ಟು  

ಈ ಡಾಕ್ಟರ್‌ ಕ್ವಾರ್ಟರ್ಸ್‌ ತುಂಬಾ ಕ್ವಾರ್ಟರ್‌ ಬಾಟಲ್‌

September 21, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram