ನಾವು ಈಗ ಬಾಂಬೆ ಟೀಂ ಅಲ್ಲ, ಬಿಜೆಪಿ ಟೀಂ : ಆರ್.ಶಂಕರ್
ಮೈಸೂರು : ನಾವು ಈಗ ಬಾಂಬೆ ಟೀಂ ಅಲ್ಲ, ಎಲ್ಲರೂ ಬಿಜೆಪಿ ಟೀಂ ಎಂದು ನೂತನ ಸಚಿವ ಆರ್.ಶಂಕರ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೀಗ ಬಾಂಬೆ ಟೀಂ ಅಲ್ಲ. ನಾವು 17 ಮಂದಿ ಶಾಸಕರು ಮತ್ತೊಮ್ಮೆ ಸಭೆ ಸೇರಲಿದ್ದೇವೆ. ಹಾಗಂತ ಅದು ಪಕ್ಷ ವಿರೋಧಿ ಚಟುವಟಿಕೆ ಅಲ್ಲ ಎಂದು ತಿಳಿಸಿದರು.
ಇದೇ ವೇಳೆ ಮುನಿರತ್ನ, ಹೆಚ್ ವಿಶ್ವನಾಥ್ ಗೆ ಸಚಿವ ಸ್ಥಾನ ತಪ್ಪಿದ ವಿಚಾರವಾಗಿ ಮಾತನಾಡಿ, ನಮ್ಮ ಗುರು ಹೆಚ್.ವಿಶ್ವನಾಥ್, ಮುನಿರತ್ನಗೆ ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ.
ಪಕ್ಷದ ಚೌಕಟ್ಟಿನಲ್ಲಿದ್ದಾಗ ಇತಿಮಿತಿಯೊಳಗೆ ಇರಬೇಕಾಗುತ್ತದೆ. ಸಚಿವ ನಾಗೇಶ್ಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿರುವುದು ಸ್ವಲ್ಪ ಸಮಾಧಾನ ತಂದಿದೆ. ನನಗೆ ಯಾವುದೇ ಖಾತೆ ನೀಡಿದರೂ ಶಕ್ತಿಮೀರಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಇನ್ನು ಕುರುಬರಿಗೆ ಎಸ್ ಟಿ ಮೀಸಲಾತಿ ಹೋರಾಟದ ಬಗ್ಗೆ ಮಾತನಾಡಿ, ಅಳದೆ ಇದ್ದರೆ ತಾಯಿ ಕೂಡ ಮಗುವಿಗೆ ಹಾಲು ನೀಡುವುದಿಲ್ಲ.
ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ, ಗಮನ ಸೆಳೆಯಲು ಮಾತ್ರ ಹೋರಾಟ. ಈಶ್ವರಪ್ಪ ಹೋರಾಟದ ನೇತೃತ್ವ ವಹಿಸಿದ್ದಾರೆ. ನಾನು ಕುರುಬ ಸಮಾಜದ ಸಾಮಾನ್ಯ ವ್ಯಕ್ತಿಯಾಗಿ ಪಾಲ್ಗೊಳ್ಳುತ್ತೇನೆ ಎಂದು ತಿಳಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel