ಲಾಕ್ ಡೌನ್ ಇಲ್ಲದೇ ಕೊರೊನಾ ನಿಯಂತ್ರಿಸುತ್ತೇವೆ: ಸುಧಾಕರ

1 min read
sudakar Saaksha Tv

ಲಾಕ್ ಡೌನ್ ಇಲ್ಲದೇ ಕೊರೊನಾ ನಿಯಂತ್ರಿಸುತ್ತೇವೆ: ಸುಧಾಕರ

ಬೆಂಗಳೂರು: ಈ ತಿಂಗಳ ಅಂತ್ಯದವರೆಗೂ ಈಗಿರುವ ಮಾರ್ಗಸೂಚಿ ಮುಂದುವರೆಯಲಿದ್ದು, ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು. ಜನರು ನಿರ್ಲಕ್ಷ್ಯ ಮಾಡದೆ, ಕಡ್ಡಾಯಾಗಿ ಮಾಸ್ಕ್ ನ್ನು ಧರಿಸಿ ಎಂದು ಡಾ. ಸುಧಾಕರ ಮನವಿ ಮಾಡಿಕೊಂಡರು.

ಮಾಧ್ಯಮದವರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ. ಸುಧಾಕರ ಲಾಕ್ ಡೌನ್ ಮುಖಾಂತರ ಕೊರೊನಾ ನಿಯಂತ್ರಣವಾಗುವುದಿಲ್ಲ, ಎರಡು ಬಾರಿ ಲಾಕ್ ಡೌನ್ ಮಾಡಿದ್ದಕ್ಕೆ ಜನರಿಗೆ ಸಾಕಷ್ಟು ತೊಂದರೆಯಾಗಿತ್ತು. ಆದ್ದರಿಂದ ಲಾಕ್ ಡೌನ್ ಮಾಡದೆ ಅಗತ್ಯ ಕ್ರಮ ತೆಗೆದುಕೊಳ್ಳೋ ಕೆಲಸ ಮಾಡಿ ಎಂದು ಹೇಳಿದರು.

Omicron cases Saaksha TV
ಅಲ್ಲದೇ ಜನರಿಗೆ ತೊಂದರೆಯಾಗದಂತೆ ಕ್ರಮಗಳನ್ನು ಕೈಗೊಳ್ಳಿ. ಒಂದು ತಿಂಗಳ ಕಾಲ ಸಭೆ ಸಮಾರಂಭಗಳನ್ನು ಮೂದಡಬೇಕು. ಪ್ರತಿಶತ 5 ರಿಂದ 6 ರಷ್ಟು ಜನ ಮಾತ್ರ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಇದು ಸಮಾಧಾನಕ ಸಂಗತಿಯಾಗಿದೆ. ಆರ್ಥಿಕ ನಷ್ಟವಾಗದಂತೆ ಕಾರ್ಯ ನಿರ್ವಹಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದಾರೆ.

ಹಾಗೇ ಕಳೆದ ವಾರದಿಂದ ವೀಕೆಂಡ್ ಲಾಕ್ ಡೌನ್ ಮಾಡಿದ್ದರೂ, ಕೊರೊನಾ ಸೊಂಕು ಕಡಿಮೆಯಾಗಿಲ್ಲ. ಸೋಂಕು 5 ರಿಂದ 6 ಪಟ್ಟು ವೇಗವಾಗಿ ಹರಡುತ್ತಿರುವುದಾಗಿ ತಜ್ಞನರು ಅಭಿಪ್ರಾಯಪಟ್ಟಿದ್ದಾರೆ. ಮೂರನೇ ಅಲೆಯು ಇನ್ನೂ ಪೀಕ್ ಗೆ ಹೋಗಿಲ್ಲ, ಬರುವ ತಿಂಗಳು ಮೊದಲ ವಾರ ಪೀಕ್ ಗೆ ಹೋಗುತ್ತದೆ ನಂತರ 3 ಮತ್ತು 4 ನೇ ವಾರ ಕಡಿಮೆಯಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಆದಕಾರಣ ಜನರು ಕಡ್ಡಾಯವಾಗಿ ಎರಡನೇ ಡೋಸ್ ಹಾಕಿಸಿಕೊಳ್ಳಿ, ಮೂರನೇ ಡೋಸ್ ಅರ್ಹರಿದ್ದವರು ಮೂರನೇ ಡೋಸ್ ತೆಗೆದುಕೊಳ್ಳಿ. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಕೊರೊನಾ ನಿಯಂತ್ರಿಸಲು ಸಹಕರಿಸಬೇಕು ಎಂದು ಮಾತನಾಡಿದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd