ಮಹಾತ್ಮ ಗಾಂಧಿಯಂತೆ ನಾವು ಭಾರತವನ್ನ ಒಗ್ಗೂಡಿಸುವ ಪ್ರಯತ್ನ ಮಾಡುತ್ತೇವೆ – ರಾಹುಲ್ ಗಾಂಧಿ…
ಭಾರತ್ ಜೊಡೋ ಯಾತ್ರೆಯಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾನುವಾರ ಮಹಾತ್ಮ ಗಾಂಧಿ ಅವರ ಜನ್ಮದಿನದಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು ಮತ್ತು ಈ ಸಂದರ್ಭದಲ್ಲಿ “ನಾವು ಭಾರತವನ್ನು ಒಗ್ಗೂಡಿಸಲು ಪ್ರತಿಜ್ಞೆ ಮಾಡುತ್ತೇವೆ” ಎಂದು ಹೇಳಿದ್ದಾರೆ.
“ಬಾಪು ನಮಗೆ ಸತ್ಯ ಮತ್ತು ಅಹಿಂಸೆಯ ಹಾದಿಯಲ್ಲಿ ನಡೆಯಲು ಕಲಿಸಿದರು. ಅವರು ಪ್ರೀತಿ, ಸಹಾನುಭೂತಿ, ಸಾಮರಸ್ಯ ಮತ್ತು ಮಾನವೀಯತೆಯ ಅರ್ಥವನ್ನು ವಿವರಿಸಿದರು” ಎಂದು ಕಾಂಗ್ರೆಸ್ ನಾಯಕ ಟ್ವೀಟ್ ಮಾಡಿದ್ದಾರೆ.
“ಇಂದು ಗಾಂಧಿ ಜಯಂತಿಯಂದು, ಅವರು ಅನ್ಯಾಯದ ವಿರುದ್ಧ ದೇಶವನ್ನು ಒಗ್ಗೂಡಿಸಿದಂತೆ, ನಾವು ನಮ್ಮ ಭಾರತವನ್ನು ಒಂದುಗೂಡಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತೇವೆ” ಎಂದು ರಾಹುಲ್ ಗಾಂಧೀ ಟ್ವೀಟ್ ಮಾಡಿದ್ದಾರೆ.
ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ ವಿಡಿಯೋ ಗ್ಲಿಂಪ್ಸ್ ಜೊತೆಗೆ ಮಹಾತ್ಮ ಗಾಂಧಿಯವರ ವೀಡಿಯೋ ಮಾಂಟೇಜ್ ಸಹ ಹಂಚಿಕೊಂಡಿದ್ದಾರೆ.
We pledge to unite India like Mahatma Gandhi united country against injustice: Rahul