ಮಗುವಿನ ನಗುವಿನಲ್ಲಿ ನಾವು ಚಿರುವನ್ನು ಕಾಣುತ್ತೇವೆ – ಅರ್ಜುನ್ ಸರ್ಜಾ ಭಾವುಕ ಮಾತು Chiru sarja baby
ಬೆಂಗಳೂರು, ಅಕ್ಟೋಬರ್23: ಗುರುವಾರ ಬೆಳಗ್ಗೆ 11.07 ಕ್ಕೆ ಮೇಘನಾ ಗಂಡು ಮಗುವಿಗೆ ಜನ್ಮನೀಡಿದ್ದಾರೆ. ಸರ್ಜಾ ಕುಟುಂಬದಲ್ಲಿ ಚಿರು ಅಗಲುವಿಕೆಯ ನಂತರ ಕಳೆದು ಹೋಗಿದ್ದ ನಗು ಈಗ ಮಗುವಿನ ರೂಪದಲ್ಲಿ ಮತ್ತೊಮ್ಮೆ ಮರಳಿ ಬಂದಿದೆ. Chiru sarja baby
ಹಿರಿಯ ನಟ ಚಿರು ಸೋದರ ಮಾವ ಅರ್ಜುನ್ ಸರ್ಜಾ ಅವರು ಮೇಘನಾ ರಾಜ್ ಅವರಿಗೆ ಗಂಡು ಮಗು ಆದ ಸುದ್ದಿ ತಿಳಿಯುತ್ತಿದ್ದಂತೆ ಸಂತೋಷ ಹಂಚಿಕೊಂಡಿದ್ದಾರೆ.
ಸುಮಾರು 36 ವರ್ಷಗಳ ಹಿಂದೆ ಚಿರು ಜನಿಸಿದ್ದಾಗ ಚೆನ್ನೈನಿಂದ ಬೆಂಗಳೂರಿಗೆ ಓಡಿ ಬಂದಿದ್ದೆ. ಇದೀಗ ಆತನ ಮಗುವನ್ನು ನೋಡಲು ಓಡಿ ಬರುತ್ತಿದ್ದೇನೆ. ನಿಜಕ್ಕೂ ಆ ದೇವರು ಒಂದು ಕಷ್ಟದ ಜತೆಗೆ ಸಂತೋಷದ ಸುದ್ದಿಯನ್ನೂ ಕರುಣಿಸಿದ್ದಾನೆ.
ಮಗುವಿನ ನಗುವಿನ ಸಂಭ್ರಮದಲ್ಲಿ ಸರ್ಜಾ ಕುಟುಂಬ
ಮಗು ನೋಡಲು ಚಿರುವಿನಂತೆ ಇದೆ. ಮೂಗು ಕಣ್ಣು ಎಲ್ಲವೂ ಚಿರುವನ್ನೇ ಹೋಲುತ್ತದೆ. ಈ ಶುಭ ಘಳಿಗೆಯ ಹೊತ್ತಿನಲ್ಲಿ ನಮ್ಮ ಹುಡುಗ ಚಿರು ಇದ್ದಿದ್ದರೆ ಅದೆಷ್ಟು ಸಂಭ್ರಮಿಸುತ್ತದ್ದನೋ ಗೊತ್ತಿಲ್ಲ. ಜೋರಾಗಿ ಕಿರುಚಿಕೊಂಡು ಮಾಮ ಗಂಡು ಮಗು ಎಂದು ಹೇಳುತ್ತಿದ್ದನೋ ಏನೋ.. ಇದೆಲ್ಲ ನೆನಪಿಸಿಕೊಂಡರೆ ಮನಸ್ಸಿಗೆ ತಂಬಾ ಕಷ್ಟವಾಗುತ್ತೆ. ಆದರೆ ಚಿರು ಕಳೆದುಕೊಂಡಿರುವ ದುಃಖವನ್ನು ಅವನ ಮಗು ಮುಖ ನೋಡಿ ಮರೆಯುತ್ತೇವೆ ಎಂದು ಹೇಳಿದ್ದಾರೆ.
ಚಿರು ದೂರ ಹೋದ ದಿನದಿಂದ ನಾನು ದೇವರ ಪೂಜೆ ಮಾಡುವುದನ್ನು ಬಿಟ್ಟು ಬಿಟ್ಟಿದ್ದೇನೆ. ಚಿರು ನೆನಪು ಕಾಡುತ್ತಲೇ ಇರುತ್ತದೆ. ಆದರೆ ಆ ನೋವನ್ನು ಕಡಿಮೆ ಮಾಡಲು ಜೂ. ಚಿರು ಆಗಮಿಸಿದ್ದಾನೆ. ಈಗಲೂ ಆತ ಎಲ್ಲೋ ಒಂದು ಕಡೆ ನಿಂತು ಇದೆಲ್ಲವನ್ನು ನೋಡುತ್ತಿರುತ್ತಾನೆ.
ನಮ್ಮ ತಾಯಿ ಮುತ್ತಜ್ಜಿ ಆದರೆ ನಾನು ತಾತನಾಗಿದ್ದೇನೆ. ನಮ್ಮ ಅಮ್ಮನ ಮುಖದಲ್ಲಿ ನಾಲ್ಕು ತಿಂಗಳ ಬಳಿಕ ಸಂತಸವನ್ನು ಕಾಣುತ್ತಿದ್ದೇನೆ. ಈ ಮಗು ಇಷ್ಟೊಂದು ಮನಸುಗಳಿಗೆ ಸಂತೋಷ ತರುತ್ತಾನೆ ಎಂದುಕೊಂಡಿರಲಿಲ್ಲ. ತಾಯಿ ಮತ್ತು ಮಗುವಿನ ಮೇಲೆ ನಿಮ್ಮ ಆಶೀರ್ವಾದವಿರಲಿ ಎಂದು ಅರ್ಜುನ್ ಸರ್ಜಾ ಭಾವುಕವಾಗಿ ಮಾತನಾಡಿದ್ದಾರೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel