ತೀರ್ಪು ಪ್ರಶ್ನಿಸಿ ಸುಪ್ರೀಕೋರ್ಟ್ಗೆ ರಿಟ್ ಸಲ್ಲಿಸುತ್ತೇವೆ: ವಕೀಲ ಸಿರಾಜುದ್ದೀನ್ ಪಾಷಾ – Saaksha Tv
ಬೆಂಗಳೂರು: ಹಿಜಾಬ್ ವಿವಾಧ ಕುರಿತು ಹೈಕೋರ್ಟ್ ನಲ್ಲಿ ತೀರ್ಪು ಪ್ರಕಟಗೊಂಡ ಬೆನ್ನಲ್ಲೇ ತೀರ್ಪು ಪ್ರಶ್ನಿಸಿ ಇನ್ನೆರಡು ದಿನಗಳಲ್ಲಿ ಸುಪ್ರೀಂಕೋರ್ಟ್ಗೆ ಹೋಗುವುದಾಗಿ ಅರ್ಜಿದಾರರ ಪರ ವಕೀಲ ಸಿರಾಜುದ್ದೀನ್ ಪಾಷಾ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಿಜಾಬ್ ಸಂಬಂಧ ಹೈಕೋರ್ಟ್ ನೀಡಿರುವ ತೀರ್ಪನ್ನ ಗೌರವಿಸುತ್ತೇವೆ. ಹಿಜಾಬ್ ಧರಿಸುವುದು ಮೂಲಭೂತ ಹಕ್ಕು ಅಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಶಾಲೆ ಹಾಗೂ ಪದವಿ ತರಗತಿಯೊಳಗೆ ಹಿಜಾಬ್ ಧರಿಸಕೂಡದು ಎಂದು ಮಾತ್ರ ಹೇಳಿದೆ ಎಂದು ಹೇಳಿದರು.
ಅಲ್ಲದೇ ಶಾಲೆ ಹಾಗೂ ಕಾಲೇಜಿನ ಕ್ಯಾಂಪಸ್ ಒಳಗೆ ಧರಿಸಬಹುದಾಗಿದೆ. ತೀರ್ಪು ಪ್ರಶ್ನಿಸಿ ಇನ್ನೆರಡು ದಿನಗಳಲ್ಲಿ ಸುಪ್ರೀಕೋರ್ಟ್ಗೆ ರಿಟ್ ಸಲ್ಲಿಸುತ್ತೇವೆ ಎಂದು ಮಾಹಿತಿ ನೀಡಿದರು.
ತರಗತಿಗೆ ಹಿಜಾಬ್ ಧರಿಸಿ ಬರದಂತೆ ನಿರ್ಬಂಧಿಸಿರುವ ಕ್ರಮ ಪ್ರಶ್ನಿಸಿ ಉಡುಪಿಯ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಸೇರಿದಂತೆ ಇತರ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರು ಅರ್ಜಿ ಸಲ್ಲಿಸಿದ್ದರು. ಈ ಎಲ್ಲ ಅರ್ಜಿಗಳನ್ನು ತ್ರಿಸದಸ್ಯ ಪೀಠ ವಜಾ ಮಾಡಿ ಆದೇಶ ಮಾಡಿದೆ.
11 ದಿನಗಳ ವಿಚಾರಣೆ ಬಳಿಕ ಫೆಬ್ರವರಿ 25ರಂದು ಹೈಕೋರ್ಟ್ ತ್ರಿಸದಸ್ಯ ಪೀಠ ತೀರ್ಪು ಕಾಯ್ದಿರಿಸಿತ್ತು. ಮುಖ್ಯ ನ್ಯಾ. ರಿತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್, ನ್ಯಾ.ಜೆಎಂ ಖಾಜಿ ಅವರಿದ್ದ ಪೂರ್ಣ ಪೀಠ ಈ ತೀರ್ಪು ಪ್ರಕಟಿಸಿದೆ.