ಏಕಾಂಗಿಯಾಗಿ ವಾಹನ ಚಲಾಯಿಸುವಾಗ ಮಾಸ್ಕ್ ಧರಿಸುವುದು ಕಡ್ಡಾಯ – ದೆಹಲಿ ಹೈಕೋರ್ಟ್

1 min read
Wearing a mask

ಏಕಾಂಗಿಯಾಗಿ ವಾಹನ ಚಲಾಯಿಸುವಾಗ ಮಾಸ್ಕ್ ಧರಿಸುವುದು ಕಡ್ಡಾಯ – ದೆಹಲಿ ಹೈಕೋರ್ಟ್

ನವದೆಹಲಿ: ಖಾಸಗಿ ವಾಹನದಲ್ಲಿ ಏಕಾಂಗಿಯಾಗಿ ವಾಹನ ಚಲಾಯಿಸುವಾಗ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.
ಇದು ಕೋವಿಡ್-19 ರ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳವಾಗಿದೆ ಎಂದು ದೆಹಲಿ ಹೈಕೋರ್ಟ್ ಬುಧವಾರ ತಿಳಿಸಿದ್ದು, ಮಾಸ್ಕ್ ಅನ್ನು ಸೋಂಕಿನ ಹರಡುವಿಕೆ ವಿರುದ್ಧ ಸುರಕ್ಷಾ ಕವಚ ಅಥವಾ ರಕ್ಷಣಾತ್ಮಕ ಗುರಾಣಿ ಎಂದು ಬಣ್ಣಿಸಿದೆ.
Wearing a mask

ಖಾಸಗಿ ಕಾರನ್ನು ಚಲಾಯಿಸುವಾಗ ಮಾಸ್ಕ್ ಧರಿಸದ ಕಾರಣಕ್ಕಾಗಿ ಚಲನ್ ವಿಧಿಸುವ ದೆಹಲಿ ಸರ್ಕಾರದ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಲು ನ್ಯಾಯಮೂರ್ತಿ ಪ್ರತಿಬಾ ಎಂ ಸಿಂಗ್ ನಿರಾಕರಿಸಿದರು. ಒಬ್ಬನೇ ವ್ಯಕ್ತಿಯು ಚಲಾಯಿಸುತ್ತಿದ್ದರೂ ಸಹ ಅದು ಸಾರ್ವಜನಿಕ ಸ್ಥಳವಾಗಲಿದೆ ಎಂದು ಹೇಳಿದೆ.

ಕಾರಿನಲ್ಲಿ ಏಕಾಂಗಿಯಾಗಿ ಕುಳಿತಾಗ ಹೊರಗಿನ ಪ್ರಪಂಚಕ್ಕೆ ಒಡ್ಡಿಕೊಳ್ಳುವ ಹಲವಾರು ಸಾಧ್ಯತೆಗಳಿವೆ.
ಹೀಗಾಗಿ, ವ್ಯಕ್ತಿಯು ಕಾರಿನಲ್ಲಿ ಏಕಾಂಗಿಯಾಗಿ ಪ್ರಯಾಣಿಸುತ್ತಿರುವುದರಿಂದ, ಕಾರು ಸಾರ್ವಜನಿಕ ಸ್ಥಳವಾಗುವುದಿಲ್ಲ ಎಂದು ಹೇಳಲಾಗುವುದಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.

ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ ಎಂದು ನ್ಯಾಯಾಲಯ ಹೇಳಿದೆ. ಒಬ್ಬ ವ್ಯಕ್ತಿಗೆ ಲಸಿಕೆ ನೀಡಲಾಗಿದೆಯೆ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ ಮಾಸ್ಕ್ ಅಗತ್ಯವಾಗಿವೆ ಎಂದು ಅದು ಹೇಳಿದೆ.

ಖಾಸಗಿ ವಾಹನದಲ್ಲಿ ಏಕಾಂಗಿಯಾಗಿ ವಾಹನ ಚಲಾಯಿಸುವಾಗ ಮಾಸ್ಕ್ ಧರಿಸದ ಕಾರಣಕ್ಕಾಗಿ ‘ಚಲನ್’ ಹೇರುವುದನ್ನು ಪ್ರಶ್ನಿಸಿದ ನಾಲ್ಕು ಅರ್ಜಿಗಳನ್ನು ವಜಾಗೊಳಿಸಿ ನ್ಯಾಯಮೂರ್ತಿ ಪ್ರತಿಬಾ ಎಂ ಸಿಂಗ್ ಅವರು ತೀರ್ಪು ನೀಡಿದರು.
Wearing a mask

ಕಳೆದ ವರ್ಷ ಏಪ್ರಿಲ್‌ನಲ್ಲಿ ಕಚೇರಿ ಆದೇಶದ ಮೂಲಕ ಅಧಿಕೃತ ಅಥವಾ ವೈಯಕ್ತಿಕ ವಾಹನವನ್ನು ಚಾಲನೆ ಮಾಡುವಾಗ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಮತ್ತು ಅದು ಜಾರಿಯಲ್ಲಿದೆ ಎಂದು ದೆಹಲಿ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು.

ಖಾಸಗಿ ವಾಹನವನ್ನು ಸಾರ್ವಜನಿಕ ಸ್ಥಳವಾಗಿ ಸುಪ್ರೀಂ ಕೋರ್ಟ್ ಪರಿಗಣಿಸಿದೆ ಎಂದು ಅದು ಹೇಳಿದೆ.

#Wearingmask #drivingalone

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd