ಎಂಥ ಜನ ಇವರು… ನಿದ್ದೆಯಲ್ಲಿದ್ದ ಸಿಂಹದ ಜೊತೆ ಪಾಕಿಸ್ತಾನದ ನವದಂಪತಿ ಫೋಟೋಶೂಟ್ : ನೆಟ್ಟಿಗರಿಂದ ಛೀಮಾರಿ..!
ಪಾಕಿಸ್ತಾನ: ನವ ದಂಪತಿಗಳು ಭಿನ್ನ ವಿಭಿನ್ನವಾಗಿ ಫೋಟೋ ಶೂಟ್ ಮಾಡಿಸಿಕೊಳ್ಳಬೇಕು ಎಂದು ಆಸೆ ಪಡುವುದು ಸಹಜ. ಹಾಗಂತ ತಮ್ಮ ಸ್ವಾರ್ಥಕ್ಕಾಗಿ ಕಾಡುಪ್ರಾಣಿಗಳನ್ನ ಬಳಸಿಕೊಂಡ್ರೆ ಜನರು ಸುಮ್ಮನಿರುತ್ತಾರಾ.. ನೆಟ್ಟಿಗರು ಉಗಿಯದೇ ಬಿಡ್ತಾರಾ.
BIGG BOSS 8 : ಮನೆಯಲ್ಲಿ ಇರುವ ಎಲ್ಲರೂ ಫೇಕ್ – ಶಂಕರ್ ಅಶ್ವಥ್..!
ಪಾಕಿಸ್ತಾನದ ಲಾಹೋರ್ ಮೂಲದ ದಂಪತಿಯೊಂದು ನಿದ್ದೆ ಮಾಡುತ್ತಿದ್ದ ಒಂದು ಸಿಂಹದ ಮರಿ ಜೊತೆಗೆ ಫೋಟೋಶೂಟ್ ಮಾಡಿಸಿಕೊಂಡು ಇದೀಗ ನೆಟ್ಟಿಗರಿಂದ ಛೀ ತೂ ಎನಿಸಿಕೊಳ್ತಿದ್ದಾರೆ. ಹೌದು ತಮ್ಮ ವೆಡ್ಡಿಂಗ್ ಫೊಟೋಶೂಟ್ನಲ್ಲಿ ಸಿಂಹದ ಮರಿ ಅನ್ನ ಬಳಸಿಕೊಂಡು ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಆರ್ಡರ್ ಮಾಡಿದ್ದು ವೆಜ್ ಬಂದಿದ್ದು ನಾನ್ ವೆಜ್… ಪಿಜ್ಜಾ ತಿಂದು 1 ಕೋಟಿ ರೂ. ಪರಿಹಾರಕ್ಕೆ ಬೇಡಿಕೆಯಿಟ್ಟ ಮಹಿಳೆ..!
ಫೋಟೋ ಸ್ಟುಡಿಯೋದ ಒಬ್ಬರು ಸಿಂಹದ ಮರಿಯನ್ನು ಸ್ಟುಡಿಯೋಗೆ ತಂದಿದ್ದಾರೆ. ಈ ವೇಳೆ ದಂಪತಿ ಫೋಟೋಗೆ ಫೋಸ್ ಕೊಟ್ಟು ಸಾಮಾಜಿಕಜಾಲತಾಣದಲ್ಲಿ ನೆಟ್ಟಿಗರಿಂದ ಮುಖಭಂಗ ಮಾಡಿಸಿಕೊಂಡಿದೆ. ಇನ್ನೂ ವ್ಯಾಪಕ ಟೀಕೆಗಳು ವ್ಯಕ್ತವಾಗ್ತಿದ್ದಂತೆ ಸಿಂಹದ ಮರಿಯೊಂದಿಗಿನ ಫೋಟೋಗಳನ್ನ ಫೋಟೋಗ್ರಾಫರ್ ಇನ್ಸ್ಟಾಗ್ರಾಮ್ ಖಾತೆಯಿಂದ ತೆಗೆದುಹಾಕಿದ್ದಾರೆ.
https://twitter.com/wildpakistan/status/1368662296663363588








