BIGG BOSS 8 : ಮನೆಯಲ್ಲಿ ಇರುವ ಎಲ್ಲರೂ ಫೇಕ್ – ಶಂಕರ್ ಅಶ್ವಥ್..!

1 min read

BIGG BOSS 8 : ಮನೆಯಲ್ಲಿ ಇರುವ ಎಲ್ಲರೂ ಫೇಕ್ – ಶಂಕರ್ ಅಶ್ವಥ್..!

ಬಿಗ್ ಬಾಸ್ 8ನೇ ಆವೃತ್ತಿಯಲ್ಲಿ 2 ವಾರಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ನಿನ್ನೆ  ಮನೆ ಮಂದಿಯ ಜೊತೆ ಕಿಚ್ಚ ಸುದೀಪ್ ವಾರ ಪಂಚಾಯತಿಯನ್ನೂ ನಡೆಸಿದ್ದಾರೆ. ಹಲವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನೂ ಕೆಲವೊಮ್ಮೆ ಎಲ್ಲರನ್ನೂ ನಕ್ಕಿಸಿ ಮನೆ ಮಂದಿಯ ಜೊತೆಗೆ ಆಡಿಯನ್ಸ್ ಗಳನ್ನೂ ಕೂಡ ತಮ್ಮದೇ ಶೈಲಿಯಲ್ಲಿ ಎಂಟರ್ ಟೈನ್ ಮಾಡಿದ್ದಾರೆ.

ಆರ್ಡರ್ ಮಾಡಿದ್ದು ವೆಜ್ ಬಂದಿದ್ದು ನಾನ್ ವೆಜ್… ಪಿಜ್ಜಾ ತಿಂದ ಮೇಲೆ 1 ಕೋಟಿ ರೂ. ಪರಿಹಾರಕ್ಕೆ ಬೇಡಿಕೆಯಿಟ್ಟ ಮಹಿಳೆ..!

ಈ ನಡುವೆ ಇಂದು ಅಂದ್ರೆ ಸೂಪರ್ ಸಂಡೇ ವಿಥ್ ಸುದೀಪ ಸಂಚಿಕೆಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಆದ್ರೆ  ಈ ಸಂಚಿಕೆಯ ಪ್ರೋಮೋ ಈಗಾಗಲೇ ರಿಲೀಸ್ ಆಗಿದ್ದು, ಪ್ರೋಮೋದಲ್ಲಿ ಶಂಕರ್ ಹೇಳಿಕೆ ಎಲ್ಲರನ್ನೂ ಅಚ್ಚರಿಗೆ ಗುರಿ ಮಾಡಿದೆ. ಹೌದು ಬಿಗ್ ಮನೆಯ ಮಂದಿಯೆಲ್ಲ ಫೇಕ್ ಅಂದಿದ್ದಾರೆ ಅಶ್ವಥ್. ಬೋರ್ಡ್ ನಲ್ಲಿ ಫೇಕ್ ಮತ್ತು ರಿಯಲ್ ಆಗಿರೋ ಒಬ್ಬ ಸದಸ್ಯರ ಫೋಟೋ ಪ್ರದರ್ಶಿಸುವಂತೆ ಸುದೀಪ್ ಸೂಚಿಸಿದ್ದಾರೆ.

ರಾಬರ್ಟ್ ಸಿನಿಮಾದ ದೃಶ್ಯದ ಪೈರೆಸಿ ಯತ್ನ : ಆರೋಪಿ ವಿರುದ್ಧ ಪ್ರಕರಣ ದಾಖಲು..!  

ಈ ವೇಳೆ ಅಶ್ವಥ್ ಅವರು ನೀವು ನೇರವಾಗಿ ಮಾತನಾಡಿ ಅಭಿಪ್ರಾಯ ಹೇಳುವಂತೆ ಹೇಳಿದ್ದೀರಿ. ಆದ್ರೆ ಈ ಮನೆಯಲ್ಲಿರುವ ಎಲ್ಲರೂ ಫೇಕ್. ಯಾರ ಬಗ್ಗೆ ಹೇಳಿದ್ರೆ ಪಕ್ಕದಲ್ಲಿ ಇನ್ಯಾರು ಚುಚ್ತಾರೆ ಅನ್ನೋ ಭಯ ಮತ್ತು ಅಳಕಿದೆ ಅಂತ ನೇರವಾಗಿಯೇ ಹೇಳಿ ಮನೆ ಮಂದಿಗೆ ಶಾಕ್ ನೀಡಿದ್ದಾರೆ. ಆದರೂ ಶಂಕರ್ ಅಶ್ವಥ್ ತಮ್ಮ ಕೈಯಲ್ಲಿ ಇಬ್ಬರ ಫೋಟೋ ಹಿಡಿದಿದ್ದು, ಯಾರದು ಎನ್ನುವ ಪ್ರಶ್ನೆಗೆ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ. ಇನ್ನುಳಿದಂತೆ ಮನೆಯ ಕೆಲವರು ಗೀತಾ ಭಾರತಿಗೆ ಫೇಕ್ ಅಂದ್ರೆ, ಪಾವಗಡದ ಮಂಜು ಅವರನ್ನ ರಿಯಲ್ ಅಂತ ಹೇಳಿರುವುದನ್ನೂ ನಾವು ಪ್ರೋಮೋದಲ್ಲಿ ನೋಡಬಹುದು.

ನಿದ್ದೆಗೆಟ್ರೆ ಭ್ರಮೆಯಲ್ಲಿ ಬದುಕುತ್ತಾರೆ ಮನುಷ್ಯರು : ಜೀವನದ ಸತ್ಯಗಳು..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd