ಆರ್ಡರ್ ಮಾಡಿದ್ದು ವೆಜ್ ಬಂದಿದ್ದು ನಾನ್ ವೆಜ್… ಪಿಜ್ಜಾ ತಿಂದು 1 ಕೋಟಿ ರೂ. ಪರಿಹಾರಕ್ಕೆ ಬೇಡಿಕೆಯಿಟ್ಟ ಮಹಿಳೆ..!

1 min read

ಆರ್ಡರ್ ಮಾಡಿದ್ದು ವೆಜ್ ಬಂದಿದ್ದು ನಾನ್ ವೆಜ್… ಪಿಜ್ಜಾ ತಿಂದು 1 ಕೋಟಿ ರೂ. ಪರಿಹಾರಕ್ಕೆ ಬೇಡಿಕೆಯಿಟ್ಟ ಮಹಿಳೆ..!

ಉತ್ತರಪ್ರದೇಶ : ಕೆಲವೊಮ್ಮೆ ನಾವು ಆರ್ಡರ್ ಮಾಡೋದೆ ಒಂದು. ಆದ್ರೆ ಅದನ್ನ ತಪ್ಪಾಗಿ ಗ್ರಹಿಸಿ ಹೊಟೆಲ್ ಸಿಬ್ಬಂದಿ ತಂದುಕೊಡೋದೆ ಇನ್ನೊಂದಾಗಿರುತ್ತೆ. ಆದ್ರೆ ಅದಕ್ಕೆ ಹೊಟೆಲ್ ಸಿಬ್ಬಂದಿ ಕ್ಷಮೆಯಾಚಿಸುವುದು, ನಾವು ಹೋಗ್ಲಿ ಬಿಡು ಅಂತ ಸುಮ್ಮನಾಗೋದು. ಉಂಟು. ಇವೆಲ್ಲಾ ಕಾಮನ್ ಅಂತ ಬಿಟ್ಟುಹಾಕುವುದು ಉಂಟು. ಆದ್ರೆ ಇದೇ ಮಿಸ್ ಆಗಿ ವೆಜಿಟೇರಿಯನ್ಸ್ ಗೆ ವೆಜ್ ಬದಲಿಗೆ ನಾನ್ ವೆಜ್ ತಂದುಕೊಟ್ಬಿಟ್ರೆ…….!

ಇಂತಹದ್ದೇ ಒಂದು ಘಟನೆ ಉತ್ತರಪ್ರದೇಶದಲ್ಲಿ 2019ರಲ್ಲಿ ನಡೆದಿತ್ತು.. ಅಮೆರಿಕನ್ ಪಿಜ್ಜಾ ಔಟ್ ಲೆಟ್‍ ನಲ್ಲಿ ಆನ್ ಲೈನ್ ಮೂಲಕ ವೆಜ್ ಪಿಜ್ಜಾ ಆರ್ಡರ್ ಮಾಡಿದ್ದರು.  ಆದ್ರೆ ವೆಜ್  ಬದಲಾಗಿ ನಾನ್ ವೆಜ್ ಪಿಜ್ಜಾ ಕಳುಹಿಸಿಕೊಡಲಾಗಿದೆ. ಆದ್ರೆ ಅದು ನಾನ್ ವೆಜ್ ಎಂದು ಗೊತ್ತಾಗದೇ ಮಹಿಳೆ ಹಾಗೆಯೇ ಅದನ್ನ ತಿಂದಿದ್ದಾರೆ. ಬಳಿಕ ನಾನ್ ವೆಜ್ ಎಂದು ತಿಳಿದ ತಕ್ಷಣ  ಕೋಪಗೊಂಡು ಮಹಿಳೆಯು 1 ಕೋಟಿ ರೂಪಾಯಿ ಪರಿಹಾರಕ್ಕೆ ಬೇಡಿಕೆಯಿಟ್ಟು ಕೋರ್ಟ್ ಮೊರೆ ಹೋಗಿದ್ಧಾರೆ.

ರಾಬರ್ಟ್ ಸಿನಿಮಾದ ದೃಶ್ಯದ ಪೈರೆಸಿ ಯತ್ನ : ಆರೋಪಿ ವಿರುದ್ಧ ಪ್ರಕರಣ ದಾಖಲು..!  

ಹೌದು ಉತ್ತರ ಪ್ರದೇಶದ ಗಾಜಿಯಾಬಾದ್ ನಿವಾಸಿ ದೀಪಾಲಿ ತ್ಯಾಗ್ ಎಂಬಾಕೆ  ಅನ್ ಲೈನ್‍ ನಲ್ಲಿ ವೆಜ್ ಪಿಜ್ಜಾವನ್ನ ಆರ್ಡರ್ ಮಾಡಿದ್ದರು. ಆದರೆ  ಅವರಿಗೆ ವೆಜ್ ಬದಲಾಗಿ ನಾನ್‍ವೆಜ್ ಪಿಜ್ಜಾ ಬಂದಿದೆ. ಈ ಘಟನೆ 2019ರ ಮಾರ್ಚ್ 21 ರಂದು ನಡೆದಿತ್ತು. ಅಂದ್ರೆ ಘಟನೆ ನಡೆದು ಸುಮಾರು 2 ವರ್ಷಗಳೇ ಕಳೆದುಹೋಗಿದೆ.

ಇನ್ನೂ ಶುದ್ಧ ಸಸ್ಯಹಾರಿಯಾಗಿರುವ ನನಗೆ ಹಾಗೂ ನನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಹೀಗಾಗಿ ನನಗೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಮಹಿಳೆಯು ಗ್ರಾಹಕ ನ್ಯಾಯಾಲದ ಮೊರೆ ಹೋಗಿದ್ದಾರೆ.

ಸಾಲವನ್ನು ತಕ್ಷಣ ಹಿಂದಿರುಗಿಸುವಂತೆ ಪಾಕಿಸ್ತಾನಕ್ಕೆ ಯುಎಇ ಒತ್ತಾಯ

ಇನ್ನೂ ಕಂಪನಿಯು ಮಹಿಳೆಯ ಧಾರ್ಮಿಕ ಭಾವನೆಗೆ ಧಕ್ಕೆ ಮಾಡಿದೆ. ಮಾನಸಿಕ ನೆಮ್ಮದಿ ಹಾಳಾಗಿದೆ. ಹೀಗಾಗಿ ಹಲವಾರು ಆಚರಣೆಗಳ ಮೂಲಕವಾಗಿ ಹೋಗಬೇಕಾಗುತ್ತದೆ. ಇದಕ್ಕೆ ಬಹಳ ದುಡ್ಡು ಖರ್ಚಾಗುತ್ತೆ ಎಂದು ಮಹಿಳೆಯು 1 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿರೋದಾಗಿ ತಿಳಿದುಬಂದಿದೆ.

ನಿದ್ದೆಗೆಟ್ರೆ ಭ್ರಮೆಯಲ್ಲಿ ಬದುಕುತ್ತಾರೆ ಮನುಷ್ಯರು : ಜೀವನದ ಸತ್ಯಗಳು..!

ಇನ್ನೂ ಮಹಿಳೆಯ ದೂರಿಗೆ ಉತ್ತರವನ್ನು ಸಲ್ಲಿಸುವಂತೆ ಪಿಜ್ಜಾ ಕಂಪನಿಗೆ ದೆಹಲಿ ಜಿಲ್ಲಾ ಗ್ರಾಹಕ ವಿವಾದ ನಿವಾರಣಾ ಆಯೋಗವು ಆದೇಶ ನೀಡಿದೆ. ಈ ಪ್ರಕರಣದ ವಿಚಾರಣೆಯನ್ನ ಮತ್ತೆ ಮಾರ್ಚ್ 17ಕ್ಕೆ ಮುಂದೂಡಲಾಗಿದೆ.

ನಿದ್ದೆಗೆಟ್ಟರೆ ತೂಕ ಹೆಚ್ಚಾಗುತ್ತೆ : ಮನೋವಿಜ್ಞಾನದ 5 ಸತ್ಯಗಳು..!

ಅಫ್ಘಾನಿಸ್ಥಾನದಲ್ಲಿ ಲಿಂಗ ತಾರತಮ್ಯ : ಸಾರ್ವಜನಿಕವಾಗಿ ಹಾಡುವ ಸ್ವಾತಂತ್ರವನ್ನ ಕಸಿದ ಸರ್ಕಾರ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd