ಮದುವೆಗೆ ಬರುವ ಅತಿಥಿಗಳಿಗೆ ಜೋಡಿ ವಿಧಿಸಿದ ವಿಚಿತ್ರ ನಿರ್ಬಂಧಗಳ ನೋಡಿ ಹುಬ್ಬೇರಿಸಿದ ನೆಟ್ಟಿಗರು..!
ಇತ್ತೀಚೆಗೆ ವಿವಾಹಳು ಸಾಕಷ್ಟು ವಿಚಾರಗಳಿಂದ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.. ವಿಭಿನ್ನ ಸಂಪ್ರದಾಯ , ಶೈಲಿ , ಉಡುಪು ಇನ್ನೂ ಅನೇಕ ವಿಚಾರಗಳಿಂದ ಹಲವಾರು ವಿಡಿಯೋಗಳು , ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರೋದನ್ನ ನೋಡಿದ್ದೇವೆ..
ಅಂತಹದ್ದೇ ವಿಭಿನ್ನ ವಿಚಿತ್ರ ಎನಿಸುವಂತಹ ಮದುವೆ ಆಮಂತ್ರಣ ಪತ್ರಿಕೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದೆ.. ಸಾಮಾನ್ಯವಾಗಿ ವಿವಾಹಕ್ಕೆ ಕುಟುಂಬ ಸಮೇತರಾಗಿ ಬಂದು ವಧು-ವರರನ್ನು ಆಶೀರ್ವದಿಸಿ ಅಂತ ಬರೆದಿರಲಾಗುತ್ತೆ.. ಜೊತೆಗೆ ವಿಳಾಸವನ್ನ ಕಾಮನ್ ಆಗಿ ನೀಡಲಾಗುತ್ತೆ . ಆದರೆ ಇಲ್ಲೊಂದೆಡೆ ಮದುವೆಗೆ ಬರಬೇಕಾದರೆ ಅತಿಥಿಗಳಿಗೆ ಕೆಲವೊಂದು ವಿಚಿತ್ರ ನಿಯಮಗಳು ಹಾಗೂ ನಿರ್ಬಂಧಗಳನ್ನು ವಿಧಿಸಲಾಗಿದೆ.
ಹೌದು, ವಿವಾಹಕ್ಕೆ ಆಗಮಿಸುವ ಅತಿಥಿಗಳು ಏನು ಮಾಡಬೇಕು. ಏನು ಮಾಡಬಾರದು ಅಂತೆಲ್ಲಾ ಪಟ್ಟಿ ಮಾಡಿ ಮೇಲ್ ಮಾಡಲಾಗಿದೆ. ಮದುವೆಯ ದಿನದಂದು ಅತಿಥಿಗಳು ತಮ್ಮ ಹಾಜರಾತಿಯನ್ನು ತಿಳಿಸಬೇಕಾಗಿ ಈ-ಮೇಲ್ ಮೂಲಕ ಕೋರಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಮದುವೆಗೆ ಹಾಜರಾಗುವವರು ಕೆಲವು ನಿಯಮ, ನಿಬಂಧನೆಗಳನ್ನು ಅನುಸರಿಸಬೇಕಾಗಿ ಕೇಳಿಕೊಂಡಿದ್ದಾರೆ.
”ವಿವಾಹಕ್ಕೆ ಆಗಮಿಸುವವರು 15 ರಿಂದ 30 ನಿಮಿಷ ಬೇಗನೇ ಬರಬೇಕು. ಅಲ್ಲದೆ ಬಿಳಿ, ಕ್ರೀಮ್, ಬೂದು ಬಣ್ಣದ ಬಟ್ಟೆಗಳನ್ನು ಧರಿಸಿ ಬರಬೇಡಿ. ದಯವಿಟ್ಟು ತಲೆಗೂದಲನ್ನು ಬಾಬ್ ಕಟ್ ತರಹ ಅಥವಾ ಪೋಣಿಸಿ ಕಟ್ಟಿದರೆ ಮಾತ್ರ ವಿವಾಹಕ್ಕೆ ಹಾಜರಾಗಬೇಕು. ಮುಖಕ್ಕೆ ಮೇಕಪ್ ಹಚ್ಚಿಕೊಂಡು ಬರಬಾರದು. ಮದುವೆಯ ಕ್ಷಣಗಳನ್ನು ವಿಡಿಯೋ ಮಾಡಬಾರದು. ನಾವು ಸೂಚಿಸುವವರೆಗೂ ಫೇಸ್ ಬುಕ್ ಓಪನ್ ಮಾಡಬಾರದು” ಎಂದೆಲ್ಲಾ ನಿಬಂಧನೆ ವಿಧಿಸಿದ್ದಾರೆ.
ಅಷ್ಟೇ ಅಲ್ಲ ಚಿತ್ರಗಳನ್ನು ಪೋಸ್ಟ್ ಮಾಡಬೇಕಾದರೆ ಹ್ಯಾಶ್ ಟ್ಯಾಗ್ ಉಪಯೋಗಿಸಿ ಪೋಸ್ಟ್ ಮಾಡಬೇಕು. ವಧುವಿನ ಜತೆ ಯಾರೂ ಕೂಡ ಮಾತನಾಡಬಾರದು. ಕೊನೆಯದಾಗಿ ಮದುವೆಗೆ ಆಗಮಿಸುವವರು $75 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಉಡುಗೊರೆಗಳನ್ನು ತರಬೇಕು” ಎಂದು ತಮ್ಮ ನಿಬಂಧನೆಗಳನ್ನು ತಿಳಿಸಿದ್ದಾರೆ.
ಸದ್ಯ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅಲ್ಲದೆ ನೆಟ್ಟಿಗರು ಈ ಮದುವೆಗೆ ಬಹಿಷ್ಕಾರ ಹಾಕಿದ್ದಾರೆ.. ಇನ್ನೂ ಇಷ್ಟೆಲ್ಲಾ ನಿಯಮಗಳ ನಡುವೆ ನಿಜಕ್ಕೂ ಜನರು ಮದುವೆಗೆ ಹೋಗೋದಕ್ಕೆ ಇಷ್ಟ ಪಡ್ತಾರಾ,, ಅಥವಾ ಅತಿಥಿಗಳು ಬರಲೇ ಬಾರದು ಎಂದು ಈ ರೀತಿ ನಿಯಮಗಳನ್ನ ಹೇರಿದ್ದಾರಾ ಅಂತ ನೆಟ್ಟಿಗರು ಕಮೆಂಟ್ ಗಳನ್ನ ಮಾಡುತ್ತಿದ್ದಾರೆ.