ಚಾಮರಾಜನಗರದಲ್ಲಿ ವಾರದಲ್ಲಿ 4 ದಿನ ಕಂಪ್ಲೀಟ್ ಲಾಕ್ ಡೌನ್
ಚಾಮರಾಜನಗರ : ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ತಗ್ಗಿಸುವ ಉದ್ದೇಶದಿಂದ ವಾರದಲ್ಲಿ ನಾಲ್ಕು ದಿನ ಕಂಪ್ಲೀಟ್ ಲಾಕ್ ಡೌನ್ ಗೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಜಿಲ್ಲೆಯಲ್ಲಿ ಜೂನ್ 14 ರಿಂದ 16 ರವರೆಗೆ ಹಾಫ್ ಲಾಕ್ ಡೌನ್ ಇದರಲಿದೆ. ಈ ವೇಳೆ ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ತರಕಾರಿ, ದಿನಸಿ ಖರೀದಿಗೆ ಮೂರು ದಿನ ಅವಕಾಶ ಕಲ್ಪಿಸಿದೆ.
ಇದಾದ ಬಳಿ ಜೂನ್ 17 ರಿಂದ 20 ರವರೆಗೆ ಜಿಲ್ಲೆಯಲ್ಲಿ ಕಂಪ್ಲೀಟ್ ಲಾಕ್ ಡೌನ್ ಇರಲಿದೆ.
ಗುರುವಾರ, ಶುಕ್ರವಾರ, ಶನಿವಾರ, ಭಾನುವಾರ ಯಾರೂ ಕೂಡ ಅನಗತ್ಯ ಸಂಚಾರ ಮಾಡದಂತೆ ಬ್ರೇಕ್ ಹಾಕಿದ್ದಾರೆ.
ಒಂದು ವೇಳೆ ನಿಯಮ ಉಲ್ಲಂಘಿಸಿ ಯಾರಾದರೂ ರಸ್ತೆಗಿಳಿದರೆ ಅಂತಹವರ ವಾಹನ ಸೀಜ್ ಮಾಡಲಾಗುತ್ತದೆ.
ಲಾಕ್ ಡೌನ್ ವೇಳೆ ಆಸ್ಪತ್ರೆ, ಮೆಡಿಕಲ್, ಹಾಲು, ಹಣ್ಣು, ಕೃಷಿ ಚಟುವಟಿಕೆ ನಡೆಸಲು ಅನುಮತಿ ಕೊಡಲಾಗಿದೆ.