ಕಲ್ಯಾಣ ಕರ್ನಾಟಕ ಉತ್ಸವ : ಸಿಎಂ ಭಾಷಣದ ಮುಖ್ಯಾಂಶಗಳು

1 min read
fuel price saaksha tv

ಕಲ್ಯಾಣ ಕರ್ನಾಟಕ ಉತ್ಸವ : ಸಿಎಂ ಭಾಷಣದ ಮುಖ್ಯಾಂಶಗಳು

ಕಲಬುರಗಿ : ನಗರದ ಡಿಆರ್ ಪೆÇಲೀಸ್ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ನಡೆಯುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಷ್ಟ್ರ ಧ್ವಜಾರೋಹಣ ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ತಮ್ಮ ಭಾಷಣದಲ್ಲಿ ಮುಖ್ಯಮಂತ್ರಿಗಳು, ಇಂದು ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳಿಗೆ ಐತಿಹಾಸಿಕ ದಿನ. ನಿಜಾಮರ ಕಪಿಮುಷ್ಟಿಯಿಂದ ಮುಕ್ತಿದ ಸಿಕ್ಕಿದ ಈ ದಿನ ಅವಿಸ್ಮರಣೀಯವಾಗಿದೆ. ಕಲ್ಯಾಣ ಕರ್ನಾಟಕ ವಿಮೋಚನೆಗೆ ಈ ಭಾಗದ ಹಲವು ಜನ ಹೋರಾಡಿದ್ದಾರೆ. ಹಿಂದುಳಿದ ಭಾಗದ ಸಮಗ್ರ ಅಭಿವೃದ್ಧಿಗೆ 371(ಜೆ) ಕಲಂ ಜಾರಿಗೆ ತರಲಾಗಿದೆ. 371(ಜೆ) ಕಲಂ ಜಾರಿಗೆ ಅಂದಿನ ಸಿಎಂ ಯಡಿಯೂರಪ್ಪನವರು ಕೇಂದ್ರದ ಮೇಲೆ ಒತ್ತಡ ಹೇರಿದ್ದರು. 371(ಜೆ) ಕಲಂನಿಂದ ಈ ಭಾಗದ ಲಕ್ಷಾಂತರ ಜನರಿಗೆ ಉದ್ಯೋಗ, ಶೈಕ್ಷಣಿಕ ಕ್ಷೇತ್ರದಲ್ಲಿ ಅವಕಾಶ ಸಿಕ್ಕಿದೆ. ಸಣ್ಣಪುಟ್ಟ ಕಾರ್ಯಕ್ರಮಗಳನ್ನ ಜಾರಿ ಮಾಡಿ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಹೀಗಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿಯಿರುವ ಹುದ್ದೆಗಳನ್ನ ಶೀಘ್ರವೇ ಭರ್ತಿ ಮಾಡಲಾಗುವುದು ಎಂದು ತಿಳಿಸಿದರು.

basavaraja bommai saaksha tv

ಇನ್ನು ಕೆಕೆಆರ್‍ಡಿಬಿ ಮಂಡಳಿಗೆ ಖಾಯಂ ಕಾರ್ಯದರ್ಶಿ ನೇಮಕ ಮಾಡಲಾಗುವುದು. ಬೆಂಗಳೂರಿನಲ್ಲಿರುವ 371(ಜೆ) ಕಚೇರಿಯನ್ನ ಕಲಬುರಗಿಗೆ ಶಿಫ್ಟ್ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು. ಕೆಕೆಆರ್‍ಡಿಬಿ ಮಂಡಳಿಗೆ 3000 ಕೋಟಿ ರೂಪಾಯಿ ಅನುದಾನ ನೀಡಲಾಗುವುದು. ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಈ ಹಣ ಸದ್ಬಳಕೆ ಮಾಡಲಾಗುವುದು. ಪ್ರತಿ ಮೂರು ತಿಂಗಳಿಗೊಮ್ಮೆ ಕೆಕೆಆರ್‍ಡಿಬಿ ಮತ್ತು ನಂಜುಂಡಪ್ಪ ವರದಿ ಪರಿಶೀಲನೆ ಮಾಡಲಾಗುವುದು. ಯಾದಗಿರಿಯಲ್ಲಿ ಫಾರ್ಮ ಪಾರ್ಕ್ ಮಾಡಲು ಎಲ್ಲಾ ರೀತಿಯ ಸೌಲಭ್ಯ ಒದಗಿಸಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆಗಳ ಮಹಾಪೂರವನ್ನೇ ಹರಿಸಿದರು.

ಕಲಬುರಗಿ ಜಿಲ್ಲೆಯನ್ನ ಸಿಮೆಂಟ್ ನಗರಿ ಅಂತಾ ಕರೆಯುತ್ತಾರೆ. ಆದರೆ ಈ ಭಾಗದ ಜನರಿಗೆ ಸಿಮೆಂಟ್ ಕಂಪನಿಗಳಿಂದ ಲಾಭವಾಗುತ್ತಿಲ್ಲ. ಈ ಭಾಗದ ನೆಲ ಜಲ ಸಂಪತ್ತು ಬಳಸಿಕೊಂಡು ಸಿಮೆಂಟ್ ಕಂಪನಿಗಳು ಶ್ರೀಮಂತವಾಗಿವೆ. ಸಿಮೆಂಟ್ ಕಂಪನಿಗಳು ಜನರಿಗೆ ಸಹಾಯ ಮಾಡಲೇಬೇಕು. ಇಲ್ಲಾಂದ್ರೆ ಸಿಮೆಂಟ್ ಕಂಪನಿಗಳು ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಿಮೆಂಟ್ ಕಂಪನಿಗಳಿಗೆ ಸಿಎಂ ಬೊಮ್ಮಾಯಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd