ಬೇಲೂರು ಮಠ ಮತ್ತು ದಕ್ಷಿಣೇಶ್ವರ ಕಾಳಿ ದೇವಸ್ಥಾನಗಳ ಪ್ರತಿಕೃತಿ ಅಲ್ಲಿನ ರೈಲು ನಿಲ್ದಾಣಗಳು
ಬೇಲೂರು ಮಠ ಮತ್ತು ದಕ್ಷಿಣೇಶ್ವರ ಕಾಳಿ ದೇವಸ್ಥಾನ ಕೋಲ್ಕತ್ತಾದ ಸಮೀಪವಿರುವ ಆಧ್ಯಾತ್ಮಿಕ ತಾಣಗಳಾಗಿವೆ. ಮತ್ತ ಎರೆಡೂ ತಮ್ಮದೇ ಆದ ರೈಲ್ವೆ ನಿಲ್ದಾಣಗಳನ್ನು ಹೊಂದಿವೆ. ಈ ರೈಲ್ವೆ ನಿಲ್ದಾಣಗಳು ಮುಖ್ಯ ದೇವಾಲಯದಿಂದ ಕೇವಲ ಒಂದೆರಡು ನಿಮಿಷಗಳ ಪ್ರಯಾಣದ ಅತರದಲ್ಲಿವೆ. ಆದ್ರೆ ಈ ರೈಲು ನಿಲ್ದಾಣಗಳು ವೈಶಿಷ್ಟತೆ ಪಡೆದಿರುವುದು ಅವುಗಳ ವಾಸ್ತುಶಿಲ್ಪದಿಂದಾಗಿ.ಹೌದು.. ಬೇಲೂರು ಮಠ ಮತ್ತು ದಕ್ಷಿಣೇಶ್ವರ ರೈಲು ನಿಲ್ದಾಣಗಳು ಎಷ್ಟು ವಿಶಿಷ್ಟವಾಗಿವೆ ಎಂದರೆ ಅವುಗಳ ವಾಸ್ತುಶಿಲ್ಪ. ಟಿಕೆಟ್ ಕೌಂಟರ್ ಮತ್ತು ಈ ರೈಲ್ವೆ ನಿಲ್ದಾಣಗಳ ಆವರಣವು ಮುಖ್ಯ ದೇವಾಲಯಗಳ ನಿಖರವಾದ ಪ್ರತಿಕೃತಿಗಳಾಗಿವೆ, ಚಿಕಣಿ ರೂಪಗಳಲ್ಲಿ. ದಕ್ಷಿಣೇಶ್ವರ ನಿಲ್ದಾಣವು ಸೀಲ್ಡಾ-ಡಂಕುನಿ ಮಾರ್ಗದಲ್ಲಿದ್ದರೆ, ಬೇಲೂರು ಮಠವು ಹೌರಾದಿಂದ ವಿಶೇಷ ರೈಲು ಮಾರ್ಗವನ್ನು ಹೊಂದಿದೆ.
ಸುಮಾರು 164 ವರ್ಷಗಳ ಹಿಂದೆ ಪಶ್ಚಿಮ ಬಂಗಾಳದ ಜನ ಮೊದಲ ಬಾರಿಗೆ ರೈಲಿನಲ್ಲಿ ಪ್ರಯಾಣಿಸಿದ್ದರು.. ಇಂದು ರೈಲುಗಳು , ಅಲ್ಲಿನ ಜನರ ಜೀವನದ ಅವಿಭಾಜ್ಯ ಅಂಗವಾಗಿದೆ. ಕೇವಲ ಪಶ್ಚಿಮ ಬಂಗಾಳ ಮಾತ್ರವೇ ಅಲ್ಲ.. ಇತರೇ ಬಹುತೇಕ ರಾಜ್ಯಗಳು ಕೇವಲ ಸಾರಿಗೆಯ ವ್ಯವಸ್ತೆ ಅನ್ನೋದಕ್ಕಿಂತ ಲಕ್ಷಾಂತರ ಜನರ ಜೀವನದ ಅವಿಭಾಜ್ಯ ಅಂಗವೇ ಆಗಿದೆ.. ಫ್ಲಾಟ್ ಫಾರ್ಮ್ ಅಂಗಡಿಗಳು ಹೋಟೆಲ್ ಗಳು , ಕೂಲಿ ಕಾರ್ಮಿಕರು , ಟೀ ಬಿಸ್ಕೆಟ್ ಸ್ನಾಕ್ಸ್ ಮಾಡುವವರಿಂದ ಹಿಡಿದು ಟ್ಯಾಕ್ಸಿ ಆಟೋ ಚಾಲಕರು ರೈಲುನಿಲ್ದಾಣಗಳನ್ನೇ ಅವಲಂಬಿತರಾಗಿ ಬದುಕು ಕಟ್ಟಿಕೊಂಡಿದ್ದಾರೆ.
ಇನ್ನೂ ರೈಲು ನಿಲ್ದಾಣಗಳು ಅದ್ರಲ್ಲೂ ನಿಗೂಢತೆ ಅಥವ ರಹಸ್ಯಗಳು ಹಾಗೂ ವಿಭಿನ್ನತೆಗಳಿಂದ ಕೂಡಿದ ರೈಲು ನಿಲ್ದಾಣಳ ಬಗ್ಗೆ ನಾವೇನಾದರೂ ಮಾತನಾಡಿದ್ರೆ ಮೊದಲಿಗೆ ಪಶ್ಚಿಮ ಬಂಗಾಳವೇ ನೆನಪಾಗೋದು.. ಕಾರಣ ಇಲ್ಲಿನ ಕೆಲ ರೈಲು ನಿಲ್ದಾಣಗಳು ಸಾಕಷ್ಟು ರಹಸ್ಯಮಯವಾಗಿದೆ.. ಕೆಲವೊಂದು ವಿಭಿನ್ನವಾಗಿದೆ.. ಅದರದ್ದೇ ಆದ ವಿಶೇಷತೆಗಳಿಂದ ಗುರುತಿಸಿಕೊಂಡಿದೆ… ಪಶ್ಚಿಮ ಬಂಗಾಳದ ಅನೇಕ ಭಾರತೀಯ ರೈಲ್ವೆ ನಿಲ್ದಾಣಗಳು ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿವೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








