ಭಾರತದಲ್ಲಿ ಗರಿಷ್ಠ ಫ್ಲಾಟ್ ಫಾರ್ಮ್ ಗಳನ್ನ ಹೊಂದಿರುವ ರೈಲು ನಿಲ್ದಾಣ – ಹೌರಾ
ಇದು ಭಾರತದ ಅತಿ ಹಳೆಯ ಹಾಗೂ ಪಾರಂಪರಿಕ ರೈಲು ನಿಲ್ದಾಣ ಅಂತಾನೇ ಹೇಳಬಹುದು. ಇದೇ ರೈಲು ನಿಲ್ದಾಣದ ಮೂಲಕ ಅತಿ ಹೆಚ್ಚಿನ ಜನರು ಪಶ್ಚಿಮ ಬಂಗಾಳ ಪ್ರವೇಶ ಮಾಡ್ತಾರೆ. ಈ ರೈಲು ನಿಲ್ದಾಣವೂ ರೈಲ್ವೆ ನಿಲ್ದಾಣವು ತನ್ನ ಪೋರ್ಟ್ಫೋಲಿಯೊದಲ್ಲಿ ಅನೇಕ ಅದ್ಭುತ ಸಾಧನೆಗಳನ್ನು ಹೊಂದಿದೆ. ಹೌರಾ ರೈಲ್ವೆ ನಿಲ್ದಾಣ ಸಂಕೀರ್ಣವು ಭಾರತದಲ್ಲಿ ಗರಿಷ್ಠ ಸಂಖ್ಯೆಯ ವೇದಿಕೆಗಳನ್ನು ಹೊಂದಿದೆ. ನಿಲ್ದಾಣವು ಎರಡು ಸಂಕೀರ್ಣಗಳಲ್ಲಿ ಹರಡಿರುವ 23 ಪ್ಲಾಟ್‌ಫಾರ್ಮ್‌ಗಳಿಂದ ಕೂಡಿದೆ. ಇಲ್ಲಿ ಪ್ರತಿದಿನ ಸುಮಾರು 600 ಪ್ಯಾಸೆಂಜರ್ ರೈಲುಗಳು ಸಂಚರಿಸುತ್ತವೆ. ಹೌರಾ ಭಾರತದಾದ್ಯಂತ 1273 ಕ್ಕೂ ಹೆಚ್ಚು ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಕೊಂಡಿಯಾಗಿದೆ.ಅಂದ್ಹಾಗೆ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿರುವ ಗ್ರ್ಯಾಂಡ್ ಸೆಂಟ್ರಲ್ ಟರ್ಮಿನಲ್ ವಿಶ್ವದ ಗರಿಷ್ಠ ಸಂಖ್ಯೆಯ ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿರುವ ರೈಲ್ವೆ ನಿಲ್ದಾಣವಾಗಿದೆ. ಈ ಬೃಹತ್ ನಿಲ್ದಾಣ ಸಂಕೀರ್ಣವು 44 ಪ್ಲಾಟ್‌ಫಾರ್ಮ್‌ಗಳನ್ನು ಒಳಗೊಂಡಿದೆ.
ಸುಮಾರು 164 ವರ್ಷಗಳ ಹಿಂದೆ ಪಶ್ಚಿಮ ಬಂಗಾಳದ ಜನ ಮೊದಲ ಬಾರಿಗೆ ರೈಲಿನಲ್ಲಿ ಪ್ರಯಾಣಿಸಿದ್ದರು.. ಇಂದು ರೈಲುಗಳು , ಅಲ್ಲಿನ ಜನರ ಜೀವನದ ಅವಿಭಾಜ್ಯ ಅಂಗವಾಗಿದೆ. ಕೇವಲ ಪಶ್ಚಿಮ ಬಂಗಾಳ ಮಾತ್ರವೇ ಅಲ್ಲ.. ಇತರೇ ಬಹುತೇಕ ರಾಜ್ಯಗಳು ಕೇವಲ ಸಾರಿಗೆಯ ವ್ಯವಸ್ತೆ ಅನ್ನೋದಕ್ಕಿಂತ ಲಕ್ಷಾಂತರ ಜನರ ಜೀವನದ ಅವಿಭಾಜ್ಯ ಅಂಗವೇ ಆಗಿದೆ.. ಫ್ಲಾಟ್ ಫಾರ್ಮ್ ಅಂಗಡಿಗಳು ಹೋಟೆಲ್ ಗಳು , ಕೂಲಿ ಕಾರ್ಮಿಕರು , ಟೀ ಬಿಸ್ಕೆಟ್ ಸ್ನಾಕ್ಸ್ ಮಾಡುವವರಿಂದ ಹಿಡಿದು ಟ್ಯಾಕ್ಸಿ ಆಟೋ ಚಾಲಕರು ರೈಲುನಿಲ್ದಾಣಗಳನ್ನೇ ಅವಲಂಬಿತರಾಗಿ ಬದುಕು ಕಟ್ಟಿಕೊಂಡಿದ್ದಾರೆ.
ಇನ್ನೂ ರೈಲು ನಿಲ್ದಾಣಗಳು ಅದ್ರಲ್ಲೂ ನಿಗೂಢತೆ ಅಥವ ರಹಸ್ಯಗಳು ಹಾಗೂ ವಿಭಿನ್ನತೆಗಳಿಂದ ಕೂಡಿದ ರೈಲು ನಿಲ್ದಾಣಳ ಬಗ್ಗೆ ನಾವೇನಾದರೂ ಮಾತನಾಡಿದ್ರೆ ಮೊದಲಿಗೆ ಪಶ್ಚಿಮ ಬಂಗಾಳವೇ ನೆನಪಾಗೋದು.. ಕಾರಣ ಇಲ್ಲಿನ ಕೆಲ ರೈಲು ನಿಲ್ದಾಣಗಳು ಸಾಕಷ್ಟು ರಹಸ್ಯಮಯವಾಗಿದೆ.. ಕೆಲವೊಂದು ವಿಭಿನ್ನವಾಗಿದೆ.. ಅದರದ್ದೇ ಆದ ವಿಶೇಷತೆಗಳಿಂದ ಗುರುತಿಸಿಕೊಂಡಿದೆ… ಪಶ್ಚಿಮ ಬಂಗಾಳದ ಅನೇಕ ಭಾರತೀಯ ರೈಲ್ವೆ ನಿಲ್ದಾಣಗಳು ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿವೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








