ಮಗುವಿನ ಆಧಾರ್ ಕಾರ್ಡ್ ಮಾಡಲು ಯಾವೆಲ್ಲಾ ದಾಖಲೆಗಳು ಬೇಕು?
ನಿಮ್ಮ ಮಗುವಿನ ಆಧಾರ್ ಕಾರ್ಡ್ ಮಾಡಲು ಯೋಚಿಸುತ್ತಿದ್ದೀರಾ? ಹಾಗಾದರೆ ಇದಕ್ಕಾಗಿ ಯಾವ ದಾಖಲೆಗಳು ಬೇಕು ಎಂದು ಯೋಚಿಸುತ್ತಿರಬೇಕು. ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಇದನ್ನು ಸ್ಪಷ್ಟಪಡಿಸಿದೆ. ಆಧಾರ್ ಕಾರ್ಡ್ ನೀಡುವ ಸಂಸ್ಥೆಯು ಬಾಲ್ ಆಧಾರ್ ಗಾಗಿ, ಮಗುವಿನ ಜನನ ಪ್ರಮಾಣಪತ್ರ ಅಥವಾ ಪೋಷಕರೊಬ್ಬರ ಆಧಾರ್ ಕಾರ್ಡ್, ಆಸ್ಪತ್ರೆಯಿಂದ ಪಡೆದ ಡಿಸ್ಚಾರ್ಜ್ ಸ್ಲಿಪ್ ಜೊತೆಗೆ ಅಗತ್ಯವಿದೆ ಎಂದು ಹೇಳಿದೆ. ಇದರಿಂದ ಪೋಷಕರು ಮಗುವಿನ ಆಧಾರ್ ಪಡೆಯಲು ಜನನ ಪ್ರಮಾಣಪತ್ರ ಪಡೆಯುವವರೆಗೆ ಕಾಯಲು ಬಯಸದಿದ್ದರೆ, ಆಸ್ಪತ್ರೆಯ ಡಿಸ್ಚಾರ್ಜ್ ಸ್ಲಿಪ್ ಮತ್ತು ಅವರ ಆಧಾರ್ ಕಾರ್ಡ್ ಆಧಾರದ ಮೇಲೆ ಯಾವುದೇ ನವಜಾತ ಶಿಶುವಿಗೆ ಮಗುವಿನ ಆಧಾರ್ ತಯಾರಿಸಬಹುದು.

ಐದು ವರ್ಷದೊಳಗಿನ ಮಕ್ಕಳಿಗೆ ನೀಲಿ ಬಣ್ಣದ ಆಧಾರ್ ಕಾರ್ಡ್ ತಯಾರಿಸಲಾಗುತ್ತದೆ. ಇದನ್ನು ಬಾಲ್ ಆಧಾರ್ ಎಂದು ಕರೆಯಲಾಗುತ್ತದೆ. ಈಗ ಹೊಸ ನಿಯಮದ ಪ್ರಕಾರ, ಐದು ವರ್ಷದೊಳಗಿನ ಮಕ್ಕಳಿಗೆ ಯಾವುದೇ ಬಯೋಮೆಟ್ರಿಕ್ ವಿವರಗಳು ಅಗತ್ಯವಿಲ್ಲ. ಆದಾಗ್ಯೂ, ಮಗುವಿಗೆ ಐದು ವರ್ಷ ತುಂಬಿದ ನಂತರ, ಬಯೋಮೆಟ್ರಿಕ್ ಅನ್ನು ನವೀಕರಿಸುವುದು ಅಗತ್ಯವಾಗಿರುತ್ತದೆ.
ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು, ಐದು ವರ್ಷದೊಳಗಿನ ಮಕ್ಕಳ ಆಧಾರ್ ನೋಂದಣಿ ಸಮಯದಲ್ಲಿ ಫಿಂಗರ್ ಪ್ರಿಂಟ್ ಮತ್ತು ಐರಿಸ್ ಸ್ಕ್ಯಾನ್ ಮಾಡಲಾಗುವುದಿಲ್ಲ. ಕೇವಲ ಒಂದು ಫೋಟೋ ಸಾಕು. ಮಗುವಿಗೆ ಐದು ವರ್ಷ ತುಂಬಿದ ನಂತರ ಬಯೋಮೆಟ್ರಿಕ್ ಅಪ್ಡೇಟ್ ಕಡ್ಡಾಯ ಎಂದು ತಿಳಿಸಿದೆ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
https://twitter.com/SaakshaTv/status/1426361569403969545?s=19
https://twitter.com/SaakshaTv/status/1426376400609570816?s=19
ತಮಿಳುನಾಡು ಕೃಷಿ ಬಜೆಟ್ ನ ಮುಖ್ಯಾಂಶಗಳು – ದೇಶಕ್ಕೆ ಇದು ಮಾದರಿ ಬಜೆಟ್ ಆಗುತ್ತಾ?? https://t.co/XnbhtdkS0V
— Saaksha TV (@SaakshaTv) August 15, 2021
https://twitter.com/SaakshaTv/status/1426341038143287302?s=19
#childrenaadharcard








